AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷ ವಯಸ್ಸಿಗೆ 250 ಕೋಟಿ ಆಸ್ತಿಯ ಒಡತಿ ಈ ಸ್ಟಾರ್ ಪುತ್ರಿ

Ranbir Kapoor-Alia Bhatt: ಸಿನಿಮಾ ನಟರಿಗೆ ಅದರಲ್ಲೂ ಯಶಸ್ವಿ ಸಿನಿಮಾ ಕುಟುಂಬಕ್ಕೆ ಸೇರಿದ ಹೊಸ ತಲೆಮಾರಿನವರಿಗೆ ಹಣ ಆಸ್ತಿ ಎಂಬುದು ಲೆಕ್ಕಕ್ಕಿಲ್ಲ. ತಂದೆ, ತಾತ ಅವರುಗಳು ದುಡಿದಿರುವ ಆಸ್ತಿ ಈಗ ನೂರಾರು ಕೋಟಿ ಮೌಲ್ಯದ್ದಾಗಿದ್ದು, ಆರಾಮವಾಗಿ ಕೂತುಂಡು ತಿಂದರೂ ಕರಗದಷ್ಟಿದೆ. ಬಾಲಿವುಡ್​ನ ಸ್ಟಾರ್ ನಟನ ಎರಡು ವರ್ಷದ ಪುತ್ರಿ ಈಗ 250 ಕೋಟಿ ರೂಪಾಯಿ ಆಸ್ತಿಯ ಒಡತಿ. ಯಾರೀಕೆ?

ಎರಡು ವರ್ಷ ವಯಸ್ಸಿಗೆ 250 ಕೋಟಿ ಆಸ್ತಿಯ ಒಡತಿ ಈ ಸ್ಟಾರ್ ಪುತ್ರಿ
Raha Kapoor
ಮಂಜುನಾಥ ಸಿ.
|

Updated on:Jun 10, 2025 | 3:00 PM

Share

ಸಿನಿಮಾ (Cinema) ನಟರಿಗೆ ಅದರಲ್ಲೂ ಯಶಸ್ವಿ ಸಿನಿಮಾ ಕುಟುಂಬಕ್ಕೆ ಸೇರಿದ ಹೊಸ ತಲೆಮಾರಿನವರಿಗೆ ಹಣ ಆಸ್ತಿ ಎಂಬುದು ಲೆಕ್ಕಕ್ಕಿಲ್ಲ. ತಂದೆ, ತಾತ ಅವರುಗಳು ದುಡಿದಿರುವ ಆಸ್ತಿ ಈಗ ನೂರಾರು ಕೋಟಿ ಮೌಲ್ಯದ್ದಾಗಿದ್ದು, ಆರಾಮವಾಗಿ ಕೂತುಂಡು ತಿಂದರೂ ಕರಗದಷ್ಟಿದೆ. ಹೀಗೆ ತಲೆಮಾರುಗಳಿಂದಲೂ ಸಿನಿಮಾ ರಂಗದಲ್ಲೇ ಇದ್ದು, ಸಿನಿಮಾ ನಂಬಿಕೊಂಡೇ ಸಾವಿರಾರು ಕೋಟಿ ಸಂಪಾದಿಸಿರುವ ಜೊತೆಗೆ ದೊಡ್ಡ ಹೆಸರು ಸಹ ಮಾಡಿರುವ ಕುಟುಂಬಗಳಲ್ಲಿ ಮೊದಲ ಸ್ಥಾನ ಕಪೂರ್ ಕುಟುಂಬದ್ದು.

ಪೃಥ್ವಿರಾಜ್ ಕಪೂರ್, ತ್ರಿಲೋಕ್ ಕಪೂರ್ ಅವರಿಂದ ಆರಂಭವಾದ ಕಪೂರ್ ಕಾಂದಾನಿನ ಸಿನಿಮಾ ಜರ್ನಿ ಈಗ ಐದನೇ ತಲೆಮಾರಿನಲ್ಲಿ ನಡೆಯುತ್ತಿದೆ. ರಣ್​ಬೀರ್-ಆಲಿಯಾ ಮಗಳು ಈಗ ಕಪೂರ್ ಕುಟುಂಬದ ಐದನೇ ತಲೆಮಾರು. ಕಪೂರ್ ಕುಟುಂಬ ಬಾಲಿವುಡ್​ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಮುಂಬೈ ಹಾಗೂ ಉತ್ತರ ಭಾರತದ ಇತರೆ ಕೆಲವು ನಗರಗಳಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಈ ಕುಟುಂಬದವರು ಹೊಂದಿದ್ದಾರೆ.

ಬಾಲಿವುಡ್​ನ ಈಗಿನ ಸ್ಟಾರ್ ನಟ ರಣ್​ಬೀರ್ ಕಪೂರ್, ಸ್ಟಾರ್ ನಟಿ ಆಲಿಯಾ ಭಟ್​ರ ಪುತ್ರಿ ರಾಹಾ ಕಪೂರ್​ಗೆ ಈಗಿನ್ನೂ ಎರಡು ವರ್ಷ ವಯಸ್ಸು. ಈಗಲೇ ರಾಹಾ ಕಪೂರ್ ಬರೋಬ್ಬರಿ 250 ಕೋಟಿ ರೂಪಾಯಿ ಆಸ್ತಿಯ ಮಾಲಕಿ! ಹೌದು, ರಣ್​ಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ಬಾಂದ್ರಾದ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಅಲ್ಲಿ ಒಂದು ಬಲು ಐಶಾರಾಮಿಯಾದ ಮನೆ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್

ಕಳೆದ ಎರಡು ವರ್ಷದಿಂದಲೂ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಣ್​ಬೀರ್ ಕಪೂರ್-ಆಲಿಯಾ ಸಹ ಆಗೊಮ್ಮೆ-ಈಗೊಮ್ಮೆ ನಿರ್ಮಾಣ ಹಂತದಲ್ಲಿರುವ ಮನೆಗೆ ಹೋಗಿ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಈ ಮನೆಯ ಒಟ್ಟು ಮೌಲ್ಯ ಸುಮಾರು 250 ಕೋಟಿ ರೂಪಾಯಿಗಳು ಎನ್ನಲಾಗಿದ್ದು, ಈ ಮನೆಯನ್ನು ಈಗಾಗಲೇ ಪುತ್ರಿ ರಾಹಾ ಹೆಸರಿಗೆ ಮಾಡಿದ್ದಾರಂತೆ ರಣ್​ಬೀರ್ ಕಪೂರ್. ಮನೆ ನಿರ್ಮಾಣವನ್ನೂ ಸಹ ಮಗಳು ರಾಹಾ ಅನ್ನು ಮನಸ್ಸಲ್ಲಿಟ್ಟುಕೊಂಡು, ರಾಹಾಳ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗುತ್ತಿದೆಯಂತೆ.

ಈ ವರ್ಷದ ದೀಪಾವಳಿ ವೇಳೆಗೆ ಹೊಸ ಮನೆಗೆ ಶಿಫ್ಟ್ ಆಗುವ ಉದ್ದೇಶವನ್ನು ರಣ್​ಬೀರ್ ಹಾಗೂ ಆಲಿಯಾ ಹೊಂದಿದ್ದು, ಈ ವರ್ಷದ ದೀಪಾವಳಿಯನ್ನು ಮಗಳೊಟ್ಟಿಗೆ ಹೊಸ ಮನೆಯಲ್ಲಿ ಆಚರಿಸಲಿದ್ದಾರೆ ರಣ್​ಬೀರ್ ಕಪೂರ್ ಹಾಗೂ ಆಲಿಯಾ.

ರಣ್​ಬೀರ್ ಹಾಗೂ ಆಲಿಯಾ ಇದೀಗ ಮುಂಬೈನ ಪಾಲಿ ಹಿಲ್​ನ ವಾಸ್ತು ಅಪಾರ್ಟ್​ಮೆಂಟ್​​ನಲ್ಲಿ ವಾಸವಿದ್ದಾರೆ. ಈ ಅಪಾರ್ಟ್​ಮೆಂಟ್​ ಸಹ ಬಲು ಐಶಾರಾಮಿ ಅಪಾರ್ಟ್​ಮೆಂಟ್ ಆಗಿದ್ದು, ಈ ಮನೆಯಲ್ಲಿ ಅವರ ಕಾರುಗಳಿಗೂ ಲಿಫ್ಟ್ ಇದೆಯಂತೆ!

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Tue, 10 June 25