AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಗ್ಗಿಲ್ಲ ಅನುಷ್ಕಾ ಶೆಟ್ಟಿ ಮಾರುಕಟ್ಟೆ; ದಾಖಲೆ ಬೆಲೆಗೆ ‘ಘಾಟಿ’ ಚಿತ್ರದ ಹಕ್ಕು ಮಾರಾಟ

ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಚಿತ್ರದ ಟಿವಿ ಹಾಗೂ ಒಟಿಟಿ ಹಕ್ಕುಗಳು ದಾಖಲೆಯ ಬೆಲೆಗೆ ಮಾರಾಟವಾಗಿವೆ. ಬಿಡುಗಡೆಗೂ ಮುನ್ನ ಇಷ್ಟು ದೊಡ್ಡ ಮೊತ್ತದ ಒಪ್ಪಂದ ಆಗಿರುವುದು ಅಪರೂಪ. ಮಹಿಳಾ ಪ್ರಧಾನ ಚಿತ್ರವೊಂದು ಇಂತಹ ಯಶಸ್ಸು ಕಾಣುತ್ತಿರುವುದು ಚಿತ್ರರಂಗಕ್ಕೆ ಹೊಸ ತಿರುವು. ನಿರ್ಮಾಪಕರು ಈಗಾಗಲೇ ಲಾಭದಲ್ಲಿರುವುದು ವಿಶೇಷ.

ತಗ್ಗಿಲ್ಲ ಅನುಷ್ಕಾ ಶೆಟ್ಟಿ ಮಾರುಕಟ್ಟೆ; ದಾಖಲೆ ಬೆಲೆಗೆ ‘ಘಾಟಿ’ ಚಿತ್ರದ ಹಕ್ಕು ಮಾರಾಟ
ಅನುಷ್ಕಾ
ರಾಜೇಶ್ ದುಗ್ಗುಮನೆ
|

Updated on: Jun 14, 2025 | 7:36 AM

Share

ಅನುಷ್ಕಾ ಶೆಟ್ಟಿ (Anushka Shetty) ಅವರು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರದಲ್ಲಿ ನಟಿಸಿ ಅಪಾರ ಜನಮನ್ನಣೆ ಪಡೆದರು. ಆದರೆ, ಆ ಬಳಿಕ ಅವರು ನಟನೆಯನ್ನು ಕಡಿಮೆ ಮಾಡಿದರು. ‘ಬಾಹುಬಲಿ 2’ ಬಳಿಕ ಅವರು ಕೊಟ್ಟ ಹಿಟ್ ಸಿನಿಮಾ ಎಂದರೆ ಅದು ‘ಭಾಗಮತಿ’ ಚಿತ್ರ ಮಾತ್ರ. ಈಗ ಅವರು ತೆರೆಮೇಲೆ ಬರದೆ ಎರಡು ವರ್ಷ ಕಳೆದಿದೆ. ಹೀಗೆಲ್ಲ ಇದ್ದರೂ ಅನುಷ್ಕಾ ಶೆಟ್ಟಿ ಅವರ ಮಾರುಕಟ್ಟೆ ಮಾತ್ರ ಕಡಿಮೆ ಆಗಿಲ್ಲ. ಅವರ ನಟನೆಯ ‘ಘಾಟಿ’ ಸಿನಿಮಾದ ಟಿವಿ ಹಕ್ಕು ದಾಖಲೆ ಬೆಲೆಗೆ ಮಾರಾಟ ಆಗಿದ್ದೇ ಇದಕ್ಕೆ ಸಾಕ್ಷಿ.

ಅನುಷ್ಕಾ ಶೆಟ್ಟಿ ಅವರು ಇತ್ತೀಚೆಗೆ ಹೆಚ್ಚೆಚ್ಚು ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿದ್ದಾರೆ. ‘ಘಾಟಿ’ ಸಿನಿಮಾ ಕೂಡ ಇದೇ ರೀತಿ ಇದೆ ಎನ್ನಲಾಗಿದೆ. ಕ್ರಿಶ್ ಜಗರ್ಲಮುಡಿ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಜುಲೈ 11ರಂದು ರಿಲೀಸ್ ಆಗುತ್ತಿದೆ. ಅನುಷ್ಕಾ ಅವರು ಎರಡು ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಚಿತ್ರದ ಸ್ಯಾಟಲೈಟ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ.

ನಾನ್ ಥಿಯೇಟರಿಕಲ್ ಹಕ್ಕುಗಳು ಅಂದರೆ, ಒಟಿಟಿ, ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕು ಸೇರಿ 36 ಕೋಟಿ ರೂಪಾಯಿ ಹರಿದು ಬಂದಿದೆ. ಸಿನಿಮಾದ ಬಜೆಟ್ ಕೂಡ ಇದರ ಆಸುಪಾಸಿನಲ್ಲೇ ಇದೆ. ಹೀಗಾಗಿ, ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ ಎಂದು ವರದಿ ಆಗಿದೆ. ಮಹಿಳಾ ಪ್ರಧಾನ ಚಿತ್ರವೊಂದು ರಿಲೀಸ್​ಗೂ ಮೊದಲೇ ಇಷ್ಟು ದೊಡ್ಟ ಬಿಸ್ನೆಸ್ ಮಾಡಿರೋದು ಇದೆ ಮೊದಲು ಎನ್ನಲಾಗಿದೆ.

ಇದನ್ನೂ ಓದಿ
Image
‘ಸರಿಗಮಪ’ ಗೆಲುವಿನ ಬಳಿಕೆ ಮರೆಯದೇ ಪುನೀತ್ ಸಮಾಧಿಗೆ ಭೇಟಿ ನೀಡಿದ ಶಿವಾನಿ
Image
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ವಿಕ್ರಾಂತ್ ಮಾಸಿ
Image
ವಿಮಾನ ದುರಂತದ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
Image
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

‘ಘಾಟಿ’ ಸಿನಿಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಥಿಯೇಟರ್​ ರನ್ ಮುಗಿದ ಕೆಲವು ವಾರಗಳ ಬಳಿಕ ಸಿನಿಮಾ ಒಟಿಟಿಗೆ ಬರಲಿದೆ. ಆದಿತ್ಯ ಮ್ಯೂಸಿಕ್ ಲೇಬಲ್ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.

ನಿರ್ಮಾಪಕರಿಗೆ ಲಾಭ..

ಕಳೆದ ಆರು ತಿಂಗಳಲ್ಲಿ ರಿಲೀಸ್ ಆದ ಸಿನಿಮಾಗಳ ಪೈಕಿ ಬಹುತೇಕ ಚಿತ್ರಗಳು ಸೋಲು ಕಾಣುತ್ತಿವೆ. ಇದರಿಂದ ನಿರ್ಮಾಪಕರು ತತ್ತರಿಸಿದ್ದಾರೆ. ಆದರೆ, ‘ಘಾಟಿ’ ಸಿನಿಮಾ ರಿಲೀಸ್​​ಗೂ ಮೊದಲೇ ಸೇಫ್ ಆಗಿದೆ. ಯುವಿ ಕ್ರಿಯೇಷನ್ಸ್ ಹಾಗೂ ಫಸ್ಟ್​ ಫ್ರೇಮ್ ಎಂಟರ್​ಟೇನ್​ಮೆಂಟ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.