ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ಉಲ್ಟಾ ಹೊಡೆದ ನಟ ವಿಕ್ರಾಂತ್
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಕೋ-ಪೈಲಟ್ ಕ್ಲೈವ್ ಕುಂದರ್ ಅವರು ತಮ್ಮ ಸಂಬಂಧಿ ಎಂದು ನಟ ವಿಕ್ರಾಂತ್ ಹೇಳಿಕೊಂಡಿದ್ದರು. ಆದರೆ, ತಪ್ಪು ತಿಳುವಳಿಕೆ ಎಂದು ಸ್ಪಷ್ಟಪಡಿಸಿದ್ದಾರೆ. ಕ್ಲೈವ್ ಅವರು ಕುಟುಂಬದ ಸ್ನೇಹಿತರೆಂದು ಹೇಳಿದ್ದಾರೆ. ಏರ್ ಇಂಡಿಯಾ ವಿಮಾನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿತ್ತು. ಈ ವಿಮಾನದಲ್ಲಿ 242 ಮಂದಿ ಇದ್ದರು.

ಏರ್ ಇಂಡಿಯಾ (Air India) ದುರಂತದಲ್ಲಿ ವಿಮಾನದ ಕೋ-ಪೈಲೆಟ್ ಆಗಿದ್ದ ಕರ್ನಾಟಕ ಮೂಲದ ಕ್ಲೈವ್ ಕುಂದರ್ ತಮ್ಮ ಸಂಬಂಧಿ ಎಂದು ‘12th ಫೇಲ್’ ಚಿತ್ರದ ನಟ ವಿಕ್ರಾಂತ್ ಮಾಸಿ ಹೇಳಿಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರೇ ಪೋಸ್ಟ್ ಕೂಡ ಹಾಕಿದ್ದರು. ಪೋಸ್ಟ್ ನೋಡಿದ ಪ್ರತಿಯೊಬ್ಬರಿಗೂ ಇದೇ ಅರ್ಥ ಕೊಡುವಂತೆ ಇತ್ತು. ಆದರೆ, ಈಗ ಇವರು ಉಲ್ಟಾ ಹೊಡೆದಿದ್ದಾರೆ. ಮಾಧ್ಯಮದವರೇ ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
ಏರ್ ಇಂಡಿಯಾ ವಿಮಾನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿತ್ತು. ಈ ವಿಮಾನದಲ್ಲಿ 242 ಪ್ರಯಾಣಿಕರು ಇದ್ದರು. ಅದೃಷ್ಟ ರೀತಿಯಲ್ಲಿ ಓರ್ವ ಬದುಕಿದರೆ ಉಳಿದಂತೆ ಎಲ್ಲಾ 241 ಮಂದಿ ದುರಂತದಲ್ಲಿ ಮೃತಪಟ್ಟಿದ್ದರು. ವಿಮಾನದ ಕೋ ಪೈಲಟ್ ಕ್ಲೈವ್ ಕುಂದರ್ ಬಗ್ಗೆ ಪೋಸ್ಟ್ ಮಾಡಿದ್ದ ವಿಕ್ರಾಂತ್, ಅವರ ಸಾವಿಗೆ ಸಂತಾಪ ಸೂಚಿಸಿದ್ದರು.
‘ನನ್ನ ಅಂಕಲ್ ಕ್ಲಿಫರ್ಡ್ ಕುಂದರ್ ಅವರು ಮಗನನ್ನು ಕಳೆದುಕೊಂಡಿದ್ದಾರೆ’ ಎಂದು ಬರೆದುಕೊಂಡಿದ್ದರು ವಿಕ್ರಾಂತ್. ಆ ಬಳಿಕ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ಕ್ಲೈವ್ ಕುಂದರ್ ಅವರು ನನ್ನ ಸಹೋದರ ಸಂಬಂಧಿ ಅಲ್ಲ. ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಅಷ್ಟೇ. ಈ ವಿಚಾರದಲ್ಲಿ ಹೆಚ್ಚಿನ ಊಹೆ ಬೇಡ. ಅವರ ಕುಟುಂಬ ನೆಮ್ಮದಿಯಿಂದ ಇರಲಿ’ ಎಂದು ಕೋರಿದ್ದಾರೆ.
ಏರ್ ಇಂಡಿಯಾ ಬೋಯಿಂಗ್ 787, ಎಐ171 ವಿಮಾನ ಟೇಕಾಪ್ ಆದ ಕೆಲವೇ ನಿಮಿಷಗಳಲ್ಲಿ ಹಾಸ್ಟೆಲ್ಗೆ ಅಪ್ಪಳಿಸಿತು. ಈ ವಿಮಾನ 230 ಪ್ರಯಾಣಿಕರು ಮತ್ತು 12 ಕ್ರ್ಯೂ ಮೆಂಬರ್ಗಳನ್ನು ಹೊಂದಿತ್ತು. ಇದರಲ್ಲಿ 241 ಜನರು ನಿಧನ ಹೊಂದಿದ್ದಾರೆ. ಓರ್ವ ಮಾತ್ರ ಅದೃಷ್ಟ ರೀತಿಯಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ: ವಿಮಾನ ದುರಂತ: ‘12th ಫೇಲ್’ ಸಿನಿಮಾ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
ವಿಕ್ರಾಂತ್ ಅವರು ‘12th ಫೇಲ್’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಆ ಬಳಿಕ ಅವರು ಒಂದು ಬ್ರೇಕ್ ಪಡೆದಿದ್ದಾರೆ. ಸದ್ಯ ಕುಟುಂಬದ ಕಡೆ ಅವರು ಗಮನ ಹರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








