ವಿಮಾನ ದುರಂತದ ಬಗ್ಗೆ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
ಕರೀಷ್ಮಾ ಕಪೂರ್ ಅವರ ಮಾಜಿ ಪತಿ ಹಾಗೂ ಖ್ಯಾತ ಉದ್ಯಮಿ ಸಂಜಯ್ ಕಪೂರ್ ಅವರು 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ಸಂಜಯ್ ಅವರು ಪೋಲೋ ಆಟವಾಡುವಾಗ ಅನಾರೋಗ್ಯಕ್ಕೆ ಒಳಗಾಗಿ ಇಂಗ್ಲೆಂಡ್‌ನಲ್ಲಿ ನಿಧನರಾಗಿದ್ದಾರೆ ಎಂದು ಖಚಿತಪಡಿಸಲಾಗಿದೆ.

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ (Sunjay Kapur) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 53 ವರ್ಷ ವಯಸ್ಸಾಗಿತ್ತು. ಸಂಜಯ್ಗೆ ಕರೀಷ್ಮಾ ಜೊತೆ ಇಬ್ಬರು ಮಕ್ಕಳು ಹಾಗೂ ಎರಡನೇ ಪತ್ನಿ ಪ್ರಿಯಾ ಜೊತೆ ಒಂದು ಮಗು ಹೊಂದಿದ್ದಾರೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಶಾಕಿಂಗ್ ವಿಚಾರ ಎಂದರೆ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಸಂಜಯ್ ಟ್ವೀಟ್ ಮಾಡಿ ಸಂತಾಪ ಕೋರಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯಾಘಾತ ಆಗಿದೆ.
ಸಂಜಯ್ ಅವರು ಪೊಲೋ ಗೇಮ್ನ ಆಡುತ್ತಿದ್ದರು. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿದೆ. ಆ ಬಳಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಆಪ್ತೆ ಸುಹೇಲ್ ಸೇಠ್ ಅವರು ಖಚಿತಪಡಿಸಿದ್ದಾರೆ.
ಏರ್ ಇಂಡಿಯಾ ವಿಮಾನ ಅಹಮದಾಬಾದ್ನಿಂದ ಇಂಗ್ಲೆಂಡ್ಗೆ ತೆರಳುವುದಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ಆಪ್ ಆದ ಕೆಲವೇ ಗಂಟೆಗಳಲ್ಲಿ ವಿಮಾನ ಹಾಸ್ಟೆಲ್ ಮೇಲೆ ಅಪ್ಪಳಿಸಿತು. ವಿಮಾನದಲ್ಲಿ ಇದ್ದ ಬಹುತೇಕ ಎಲ್ಲಾ ಪ್ರಯಾಣಿಕರು ನಿಧನ ಹೊಂದಿದ್ದಾರೆ. ಈ ಘಟನೆ ಬಗ್ಗೆ ಅವರು ಟ್ವೀಟ್ ಮಾಡಿದ್ದರು.
Terrible news of the tragic Air India crash in Ahmedabad. My thoughts and prayers are with all the families affected. May they find strength in this difficult hour. 🙏 #planecrash
— Sunjay Kapur (@sunjaykapur) June 12, 2025
‘ಅಹಮಾದಾಬಾದ್ನ ವಿಮಾನ ಅಪಘಾತ ಕೆಟ್ಟ ಸುದ್ದಿ. ದುರಂತದಿಂದ ತೊಂದರೆಗೆ ಒಳಗಾದ ಎಲ್ಲಾ ಕುಟುಂಬದವರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ಶಕ್ತಿ ಸಿಗಲಿ’ ಎಂದು ಸಂಜಯ್ ಕಪೂರ್ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಅವರು ನಿಧನ ಹೊಂದಿದ್ದಾರೆ.
ಸಂಜಯ್ ಕಪೂರ್ ಅವರು ಹಲವು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸೋನಾ ಕಾಮ್ಸ್ಟಾರ್ ಕಂಪನಿಗೆ ಅವರು ಅಧ್ಯಕ್ಷರಾಗಿದ್ದಾರೆ. ಅವರು ಉದ್ಯಮದಲ್ಲಿ ಕ್ರಾಂತಿ ತರಲು ಬಯಸಿದ್ದರು. ಅವರು ವಿವಿಧ ಸಾಧನೆ ಮಾಡುವ ಮೊದಲೇ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಎಂದಿದ್ದ ಕರೀಷ್ಮಾಗೆ ಮದುವೆ; ಇಲ್ಲಿವೆ ಫೋಟೋಗಳು
ಸಂಜಯ್ ಹಾಗೂ ಹಿಂದಿ ನಟಿ ಕರೀಷ್ಮಾ 2003ರಲ್ಲಿ ವಿವಾಹ ಆದರು. ಇವರು 2016ರ ಜೂನ್ ತಿಂಗಳಲ್ಲಿ ಬೇರೆ ಆದರು. ದೆಹಲಿ ಹೈಕೋರ್ಟ್ನಲ್ಲಿ ಇವರು 2005ರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೋರಲಾಗಿತ್ತು. 2010ರಲ್ಲಿ ಕರೀಷ್ಮಾ ಅವರು ಸಂಜಯ್ ಮನೆಯಿಂದ ನಡೆದರು. 2016ರಲ್ಲಿ ಇವರು ಬೇರೆ ಆಗಲೇಬೇಕು ಎನ್ನುವ ನಿರ್ಧಾರಕ್ಕೆ ಬಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








