ಸಲ್ಮಾನ್ ಖಾನ್ ವೃತ್ತಿ ಜೀವನದ ಅತಿ ಕೆಟ್ಟ ಚಿತ್ರಗಳಿವು..
ಸಲ್ಮಾನ್ ಖಾನ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಅನೇಕ ಯಶಸ್ವಿ ಚಿತ್ರಗಳಿದ್ದರೂ, ಕೆಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನಿರಾಶಾದಾಯಕವಾಗಿವೆ. ‘ಮಾರಿಗೋಲ್ಡ್’, ‘ಗಾಡ್ ತುಸ್ಸಿ ಗ್ರೇಟ್ ಹೋ’, ‘ವೀರ್’,‘ಸಾವನ್: ದಿ ಲವ್ ಸೀಸನ್’, ‘ಟ್ಯೂಬ್‌ಲೈಟ್’ ಮತ್ತು ‘ಭಾರತ್’ ಮುಂತಾದ ಚಿತ್ರಗಳು ಅವರ ವೃತ್ತಿಜೀವನದ ಕೆಲವು ಕೆಟ್ಟ ಚಿತ್ರಗಳಾಗಿವೆ.

ಸಲ್ಮಾನ್ ಖಾನ್ (Salman Khan) ಬಾಲಿವುಡ್ನ ಪ್ರಸಿದ್ಧ ನಟ. ಸಲ್ಮಾನ್ ಖಾನ್ ದೇಶಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಮೂಲೆಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸಲ್ಮಾನ್ 1989ರಲ್ಲಿ ‘ಮೇನೆ ಪ್ಯಾರ್ ಕಿಯಾ’ ಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರ ಅವರನ್ನು ರಾತ್ರೋರಾತ್ರಿ ಸ್ಟಾರ್ ಹೀರೋ ಆಗಿ ಮಾಡಿತು. ಅಂದಿನಿಂದ ಸಲ್ಮಾನ್ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಟನ ಹೆಚ್ಚಿನ ಚಿತ್ರಗಳು ಬ್ಲಾಕ್ಬಸ್ಟರ್ ಆಗಿವೆ, ಆದರೆ ಅವರು ಜನರಿಗೆ ತಲೆನೋವಾಗಿ ಪರಿಣಮಿಸಿರುವ ಕೆಲವು ಚಿತ್ರಗಳನ್ನು ನೀಡಿದ್ದಾರೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.
ಮಾರಿಗೋಲ್ಡ್
ಸಲ್ಮಾನ್ ಖಾನ್ ಅವರ ಅತಿದೊಡ್ಡ ಫ್ಲಾಪ್ ಚಿತ್ರ ‘ಮಾರಿಗೋಲ್ಡ್’. 2007ರಲ್ಲಿ ಬಿಡುಗಡೆ ಆದ. ಈ ಚಿತ್ರವು ಒಂದು ಪ್ರಣಯ ಸಂಗೀತ ಹಾಸ್ಯ ಚಿತ್ರವಾಗಿತ್ತು. ವರದಿಯ ಪ್ರಕಾರ ಈ ಚಿತ್ರವನ್ನು 19 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಕೇವಲ 2.29 ಕೋಟಿ ರೂ. ಗಳಿಸಿದೆ. ಅಮೇರಿಕನ್ ನಟಿ ಅಲಿ ಲಾರ್ಟರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು, ಆದರೆ ಇದಕ್ಕಾಗಿ ಮೊದಲು ಪ್ರೀತಿ ಜಿಂಟಾ ಅವರನ್ನು ಸಂಪರ್ಕಿಸಲಾಯಿತು, ಆದರೆ ಅವರು ನಿರಾಕರಿಸಿದರು.
‘ಗಾಡ್ ತುಸ್ಸಿ ಗ್ರೇಟ್ ಹೋ’
ಸಲ್ಮಾನ್ ಅವರ ಮುಂದಿನ ಚಿತ್ರದ ಬಗ್ಗೆ ಹೇಳುವುದಾದರೆ, ಅವರು 2008 ರಲ್ಲಿ ‘ಗಾಡ್ ತುಸ್ಸಿ ಗ್ರೇಟ್ ಹೋ’ ಚಿತ್ರವನ್ನು ಮಾಡಿದರು. ಅಮಿತಾಭ್ ಬಚ್ಚನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ ಕಳಪೆ ಚಿತ್ರಕಥೆ ಮತ್ತು ಸಂಭಾಷಣೆಗಳಿಂದಾಗಿ ಜನರಿಗೆ ಈ ಚಿತ್ರ ಇಷ್ಟವಾಗಲಿಲ್ಲ.
ಇದನ್ನೂ ಓದಿ: ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್ಗೆ ಪಡೆಯೋ ಸಂಭಾವನೆ ಇಷ್ಟೊಂದಾ?
ವೀರ್
2010ರಲ್ಲಿ ಬಂದ ಸಲ್ಮಾನ್ ಖಾನ್ ಅವರ ‘ವೀರ್’ ಚಿತ್ರ ಆ ಸಮಯದಲ್ಲಿ ಚಿತ್ರ ಸಾಕಷ್ಟು ಪ್ರಚಾರ ಪಡೆದಿತ್ತು. ಆದರೆ, ಈ ಚಿತ್ರ ಬಿಡುಗಡೆಯಾದಾಗ ಜನರು ಅದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಲಿಲ್ಲ.
ಸಾವನ್: ದಿ ಲವ್ ಸೀಸನ್
ಸಲ್ಮಾನ್ ಖಾನ್ 2006 ರಲ್ಲಿ ‘ಸಾವನ್: ದಿ ಲವ್ ಸೀಸನ್’ ಚಿತ್ರದಲ್ಲಿ ಕಾಣಿಸಿಕೊಂಡರು. ಆದಾಗ್ಯೂ, ಅವರ ಅನೇಕ ಅಭಿಮಾನಿಗಳಿಗೆ ಈ ನಟನ ಚಿತ್ರದ ಬಗ್ಗೆ ತಿಳಿದಿಲ್ಲದಿರಬಹುದು. ಈ ಚಿತ್ರವು ಸೋಲು ಕಂಡಿತು.
ಟ್ಯೂಬ್‌ಲೈಟ್
ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ಅಭಿನಯದ ‘ಟ್ಯೂಬ್‌ಲೈಟ್’ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು 1962 ರ ಭಾರತ-ಚೀನಾ ಯುದ್ಧದ ಕಥೆಯನ್ನು ಆಧರಿಸಿದೆ. 135 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಸಲಿಲ್ಲ. ಅದೇ ರೀತಿ ‘ಭಾರತ್’ ಚಿತ್ರ ಕೂಡ ಈ ಪಟ್ಟಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



