ವಮಿಕಾ ಕೊಹ್ಲಿಯ ಕೈ ಬರಹ ಎಷ್ಟು ಕ್ಯೂಟ್ ನೋಡಿ; ಫೋಟೋ ಹಂಚಿಕೊಂಡ ಅನುಷ್ಕಾ
ಅನುಷ್ಕಾ ಶರ್ಮಾ ಅವರು ಫಾದರ್ಸ್ ಡೇಗೆ ವಿರಾಟ್ ಕೊಹ್ಲಿ ಅವರಿಗೆ ತಮ್ಮ ಮಗಳು ವಮಿಕಾ ಬರೆದಿರುವ ಅದ್ಭುತ ಪತ್ರವನ್ನು ಹಂಚಿಕೊಂಡಿದ್ದಾರೆ. ವಮಿಕಾ ತನ್ನ ತಂದೆಯ ಪ್ರೀತಿಯನ್ನು ಬಣ್ಣಿಸಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸುಂದರ ಕ್ಷಣವನ್ನು ಅನುಷ್ಕಾ ಅವರು ತಮ್ಮ ತಂದೆಯೊಂದಿಗಿನ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ.

ಜೂನ್ 15ರಂದು ಎಲ್ಲ ಕಡೆಗಳಲ್ಲಿ ಫಾದರ್ಸ್ಡೇನ ಆಚರಿಸಲಾಯಿತು. ಈ ವೇಳೆ ಅನೇಕ ಸೆಲೆಬ್ರಿಟಿಗಳು ತಮ್ಮ ತಂದೆಯರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ತಂದೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಪತಿಯ ಫೋಟೋಗಳನ್ನು ಹಂಚಿಕೊಂಡು ವಿಶ್ ತಿಳಿಸಿದ್ದಾರೆ. ಈ ಮಧ್ಯೆ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಒಂದು ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ವಮಿಕಾ ಅವರ ಕೈ ಬರಹ ಗಮನ ಸೆಳೆದಿದೆ.
ವಮಿಕಾಗೆ ಈಗ ನಾಲ್ಕು ವರ್ಷ. ಈವರೆಗೆ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಮಗುವಿನ ಫೋಟೋ ರಿವೀಲ್ ಮಾಡಿಲ್ಲ. ಈಗ ಅನುಷ್ಕಾ ಶರ್ಮಾ ಅವರು ತಮ್ಮ ತಂದೆ ಅಜಯ್ ಕುಮಾರ್ ಶರ್ಮಾ ಹಾಗೂ ಎರಡು ಮಕ್ಕಳಿಗೆ ತಂದೆ ಆಗಿರುವ ವಿರಾಟ್ ಕೊಹ್ಲಿಗೆ ಫಾದರ್ಸ್ಡೇ ವಿಶ್ ತಿಳಿಸಿದ್ದಾರೆ. ವಮಿಕಾ ಕೈ ಬರಹವನ್ನೂ ಹಂಚಿಕೊಂಡಿದ್ದಾರೆ.
ವಮಿಕಾ ತಂದೆ ವಿರಾಟ್ಗಾಗಿ ಬರೆದಿರೋ ಕ್ಯೂಟ್ ಲೆಟರ್ ವೈರಲ್ ಆಗಿದೆ. ‘ಅವರು ನನ್ನ ಅಣ್ಣನ ರೀತಿ. ಅವರು ಸಖತ್ ಫನ್ನಿ. ಅವರು ನನಗೆ ಕಚಗುಳಿ ಕೊಡುತ್ತಾರೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರು ನನ್ನ ತುಂಬಾ ಪ್ರೀತಿಸುತ್ತಾರೆ’ ಎಂದು ವಮಿಕಾ ಬರೆದಿದ್ದು, ಕೆಳಭಾಗದಲ್ಲಿ ಸಹಿ ಕೂಡ ಹಾಕಿದ್ದಾಳೆ.
View this post on Instagram
ಬಿಪಾಶಾ ಬಸು, ಸಮಂತಾ ರುಥ್ ಪ್ರಭು, ಅರ್ಜುನ್ ಕಪೂರ್, ಆಥಿಯಾ ಶೆಟ್ಟಿ ಮೊದಲಾದ ಸೆಲೆಬ್ರಿಟಿಗಳು ಈ ಪೋಸ್ಟ್ನ ಲೈಕ್ ಮಾಡಿದ್ದಾರೆ. ಈ ಫೋಟೋಗೆ ವಿವಿಧ ರೀತಿಯ ಕಮೆಂಟ್ಗಳು ಬಂದಿವೆ. ‘ವಮಿಕಾ ತನ್ನ ಹೆಸರನ್ನು ಬರೆದ ರೀತಿ ಚೆನ್ನಾಗಿದೆ’ ಎಂದು ಕೆಲವರು ಹಾರ್ಟ್ ಎಮೋಜಿ ಹಾಕಿದ್ದಾರೆ. ‘ತುಂಬಾನೇ ಕ್ಯೂಟ್ ಆಗಿದೆ. ವಮಿಕಾ ಆಟೋಗ್ರಾಫ್ನ ಈಗಲೇ ಕತ್ತರಿಸಿಟ್ಟುಕೊಳ್ಳಬೇಕು’ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಬಂಧಿಸಲು ಆಗ್ರಹ; ಸೋಶಿಯಲ್ ಮೀಡಿಯಾದಲ್ಲಿ #ArrestKohli ಟ್ರೆಂಡಿಂಗ್
ವಿರಾಟ್ ಹಾಗೂ ಅನುಷ್ಕಾ 2017ರ ಡಿಸೆಂಬರ್ 11ರಂದು ವಿವಾಹ ಆದರು. ಇಟಲಿಯಲ್ಲಿ ಇವರ ಮದುವೆ ನಡೆಯಿತು. 2021ರ ಜನವರಿ 11ರಂದು ಇವರು ಮೊದಲ ಮಗುವಿಗೆ ಜನ್ಮ ಕೊಟ್ಟರು. ಅವಳಿಗೆ ವಮಿಕಾ ಎಂದು ಹೆಸರು ಇಡಲಾಗಿದೆ. ಎರಡನೇ ಮಗು ಗಂಡಾಗಿದ್ದು, 2014ರ ಫೆಬ್ರವರಿಯಲ್ಲಿ ಜನಿಸಿತು. ಈತನಿಗೆ ಅಕಾಯ್ ಎಂದು ಹೆಸರು ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








