India vs United States of America: ಟಿ20 ವಿಶ್ವಕಪ್ನ ಮೂರನೇ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ದಾಂಡಿಗರು 20 ಓವರ್ಗಳಲ್ಲಿ 161 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ ತಂಡವು 20 ಓವರ್ಗಳಲ್ಲಿ 132 ರನ್ಗಳಿಸಿ 29 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಯುಎಸ್ಎ ತಂಡವು ದಿಟ್ಟ ಪ್ರದರ್ಶನವನ್ನೇ ನೀಡಿದೆ. ಅದರಲ್ಲೂ ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿದ ಯುಎಸ್ಎ ಬೌಲರ್ಗಳು ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 46 ರನ್ಗಳು ಎಂದರೆ ನಂಬಲೇಬೇಕು.
1 / 5
ಇದಾಗ್ಯೂ ಸೂರ್ಯಕುಮಾರ್ ಯಾದವ್ (84) ಅವರ ಏಕಾಂಗಿ ಹೋರಾಟದ ಫಲವಾಗಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 161 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ ಪರ ಮಿಂಚಿದ್ದು ಕನ್ನಡಿಗ ಸಂಜಯ್ ಕೃಷ್ಣಮೂರ್ತಿ ಎಂಬುದು ವಿಶೇಷ.
2 / 5
ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸಂಜಯ್ ಕೃಷ್ಣಮೂರ್ತಿ 31 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ 1 ಫೋರ್ನೊಂದಿಗೆ 37 ರನ್ ಬಾರಿಸಿದ್ದರು. ಈ ಮೂಲಕ ಮೊದಲ ಪಂದ್ಯದಲ್ಲೇ ಸಂಜಯ್ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದಿದ್ದಾರೆ.
3 / 5
ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರು. ಸಂಜಯ್ ಅಮೆರಿಕದಲ್ಲಿ ಜನಿಸಿದ್ದರೂ, ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಇಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದಾರೆ.
4 / 5
ಎಡಗೈ ಸ್ಪಿನ್ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿರುವ ಸಂಜಯ್ ಕೃಷ್ಣಮೂರ್ತಿ ಕರ್ನಾಟಕದ ಅಂಡರ್-16 ತಂಡದ ಪರ ಆಡಿದ್ದರು. ಅದರಲ್ಲೂ ಪ್ರಸ್ತುತ ಕರ್ನಾಟಕ ತಂಡದ ಆಟಗಾರ ಸ್ಮರಣ್ ರವಿಚಂದ್ರನ್ ಹಾಗೂ ಸಂಜಯ್ ಕೃಷ್ಣಮೂರ್ತಿ ಜೊತೆಯಾಗಿ ಆಡಿ ಬೆಳೆದವರು. ಇದಾದ ಬಳಿಕ ಅಮೆರಿಕಾಗೆ ಮರಳಿದ್ದ ಸಂಜಯ್ ಇದೀಗ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.