AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಪುತ್ರನ ಹಸ್ತಕ್ಷೇಪಕ್ಕೆ ಸಿಡಿದ 'ಕೈ' ಶಾಸಕ: ಗೃಹ ಸಚಿವರ ಬಳಿ ಅಸಮಾಧಾನ ತೋಡಿಕೊಂಡ ತನ್ವೀರ್​​ ಸೇಠ್

ಸಿಎಂ ಪುತ್ರನ ಹಸ್ತಕ್ಷೇಪಕ್ಕೆ ಸಿಡಿದ ‘ಕೈ’ ಶಾಸಕ: ಗೃಹ ಸಚಿವರ ಬಳಿ ಅಸಮಾಧಾನ ತೋಡಿಕೊಂಡ ತನ್ವೀರ್​​ ಸೇಠ್

ರಾಮ್​, ಮೈಸೂರು
| Edited By: |

Updated on: Feb 08, 2026 | 9:00 AM

Share

ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಹಸ್ತಕ್ಷೇಪದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಸಚಿವ ಪರಮೇಶ್ವರ್ ಎದುರೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆ ಮೂಲಕ ಜಾರ್ಜ್ ನಂತರ ಯತೀಂದ್ರ ಹಸ್ತಕ್ಷೇಪದ ಬಗ್ಗೆ ಮತ್ತೊಬ್ಬ ನಾಯಕ ಧ್ವನಿ ಎತ್ತಿದಂತಾಗಿದೆ.

ಮೈಸೂರು, ಫೆಬ್ರವರಿ 08: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಕೆ.ಜೆ. ಜಾರ್ಜ್ ನಂತರ ಕಾಂಗ್ರೆಸ್​​ನ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ. ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದ ಪ್ರಸಂಗ ನಡೆದಿದೆ. ಈ ವೇಳೆ ಸಚಿವ ಪರಮೇಶ್ವರ್​​ ತನ್ವೀರ್​ಸೇಠ್​ ಮನವೊಲಿಕೆ ಯತ್ನ ಮಾಡಿದ್ದು, ಜೊತೆಗೆ ಶಾಸಕ‌ ಅನಿಲ್​​ ಕೂಡ ಅವರನ್ನು ಸಮಾಧಾನ ಮಾಡಿದ್ದಾರೆ. ಸ್ಟೇಜ್ ಮೇಲೆ ಬಂದರೆ ಬೇರೆ ಮಾತನಾಡುತ್ತೇನೆ ಎಂದಿದ್ದ ತನ್ವೀರ್ ಸೇಠ್, ಕೊನೆಗೆ ಒಲ್ಲದ ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.