‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಶರತ್ ಪ್ರಕಾಶ್ ಈಗ ‘ಸ್ಟಾರ್’
ವಿಜಯ ಸೂರ್ಯ ಅವರು ‘ಸ್ಟಾರ್’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶರತ್ ಪ್ರಕಾಶ್ ಅವರು ಹೀರೋ ಆಗಿ ನಟಿಸಿ ನಿರ್ಮಾಣ ಕೂಡ ಮಾಡಿದ್ದಾರೆ. ರಂಗಭೂಮಿಯ ಕಲಾವಿದರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು.

ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್ನಲ್ಲಿ ಶರತ್ ಪ್ರಕಾಶ್ (Sharath Prakash) ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ (Kannada Cinema) ಮಾಡಿದ್ದಾರೆ. ಈ ಸಿನಿಮಾಗೆ ‘ಸ್ಟಾರ್’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಇತ್ತೀಚೆಗೆ ‘ಸ್ಟಾರ್’ (Star) ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ರೇಣುಕಾಂಬಾ ಪ್ರಿವ್ಯೂ ಥಿಯೇಟರ್ನಲ್ಲಿ ಸೆಕ್ಯುರಿಟಿ ಗಾರ್ಡ್ ರಮೇಶ್ ಅವರಿಂದ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿಸಲಾಯಿತು.
‘ಲಯನ್ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಶರತ್ ಪ್ರಕಾಶ್ ಅವರೇ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಯಕನಾಗಿ ನಟಿಸಿ, ನಿರ್ಮಾಣ ಮಾಡುವ ಡಬಲ್ ಜವಾಬ್ದಾರಿಯನ್ನು ಅವರು ನಿಭಾಯಿಸಿದ್ದಾರೆ. ಈ ಸಿನಿಮಾಗೆ ವಿಜಯ ಸೂರ್ಯ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಸ್ಟಾರ್’ ಸಿನಿಮಾದ ಶೀರ್ಷಿಕೆಗೆ ‘ಭೂಮಿಗೆ ಹತ್ರ’ ಎಂಬ ಟ್ಯಾಗ್ ಲೈನ್ ಕೂಡ ಇದೆ.

Star Movie Team
ಈ ಸಿನಿಮಾದ ಪಾತ್ರವರ್ಗದಲ್ಲಿ ಶರತ್ ಪ್ರಕಾಶ್, ರಜತರಕ್ಷ ಮತ್ತು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಕಾಸ್ ವಸಿಷ್ಠ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಪಿಎಸ್‌ಕೆ ಅವರ ಛಾಯಾಗ್ರಹಣ, ವಿನು ಮನಸು ಅವರ ಹಿನ್ನೆಲೆ ಸಂಗೀತ, ಶಶಿಧರ್ ಪಿ. ಅವರ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್ ಬಿಡುಗಡೆ ವೇಳೆ ಶರತ್ ಪ್ರಕಾಶ್ ಮಾತನಾಡಿದರು.
‘ಅಣ್ಣಾವ್ರ ಕಾಲದಿಂದಲೂ ಅಪ್ಪ ಪ್ರಕಾಶ್ ಅವರು ಸಿನಿಮಾಗಳಲ್ಲಿ ಫೈಟರ್ ಆಗಿ ಕಾಣಿಸಿಕೊಂಡಿದ್ದರು. ನನಗೆ ಪ್ಯಾಟ್ ಮಂದಿ ಕಾಡಿಗ್ ಬಂದ್ರು ಶೋ ಬಳಿಕ ಹಲವು ಅವಕಾಶಗಳು ಬಂದವು. ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದರೂ ಬ್ರೇಕ್ ಸಿಕ್ಕಿಲ್ಲ. ನಿರ್ದೇಶಕರು ಹೇಳಿದ ಒನ್ ಲೈನ್ ಇಷ್ಟವಾಯಿತು. ರೌಡಿಸಂ, ತಂದೆ ಮಗಳ ಬಾಂಧವ್ಯ, ತಾಯಿ ಸೆಂಟಿಮೆಂಟ್, ಪ್ರೀತಿ ಮುಂತಾದ ಅಂಶಗಳು ನಮ್ಮ ಸಿನಿಮಾದಲ್ಲಿವೆ’ ಎಂದು ಶರತ್ ಹೇಳಿದ್ದಾರೆ.
ಇದನ್ನೂ ಓದಿ: ಟಾಪ್ಲೆಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ; ಫೋಟೋ ವೈರಲ್
ನಿರ್ದೇಶಕ ವಿಜಯ ಸೂರ್ಯ ಮಾತನಾಡಿ, ‘ಈ ಸಿನಿಮಾದ ಪ್ರತಿ ಸನ್ನಿವೇಶಗಳನ್ನು ನೋಡುವಾಗ ನಮ್ಮ ಏರಿಯಾದಲ್ಲಿ ನಡೆದಂತಹ ಘಟನೆಗಳು ಕಣ್ಣ ಮುಂದೆ ಬರುತ್ತದೆ. ನಾಯಕನಿಗೆ ಸ್ಟಾರ್ ಎಂದು ಹೆಸರು ಬರಲು ಕಾರಣವೇನು ಎಂಬುದು ಸಿನಿಮಾ ನೋಡಿದಾಗ ತಿಳಿಯುತ್ತದೆ. ಬೆಂಗಳೂರಿನ ಸ್ಲಮ್ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




