AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಪ್​​ಲೆಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ; ಫೋಟೋ ವೈರಲ್

ಖ್ಯಾತ ನಟಿ ಶಾಲಿನಿ ಪಾಂಡೆ ಅವರು ಈ ಪರಿ ಬೋಲ್ಡ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶಾಲಿನಿ ಅವರ ಟಾಪ್-ಲೆಸ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅವರ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.. ಟಾಪ್​ಲೆಸ್

ಟಾಪ್​​ಲೆಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ; ಫೋಟೋ ವೈರಲ್
Shalini Pandey
ಮದನ್​ ಕುಮಾರ್​
|

Updated on:Feb 08, 2026 | 1:05 PM

Share

ಸೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿ ಶಾಲಿನಿ ಪಾಂಡೆ (Shalini Pandey) ಅವರು ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆ ಪಾತ್ರದಲ್ಲಿ ಅವರನ್ನು ಪ್ರೇಕ್ಷಕರು ಬಹಳ ಇಷ್ಟಪಟ್ಟಿದ್ದರು. ಆದರೆ ಶಾಲಿನಿ ಪಾಂಡೆ ಅವರು ರಿಯಲ್ ಲೈಫ್​​ನಲ್ಲಿ ಸಖತ್ ಬೋಲ್ಡ್. ಈಗ ತಮ್ಮ ಗ್ಲಾಮರಸ್ ಅವತಾರದ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಸಾಮಾನ್ಯವಾಗಿ ತೆರೆಯ ಮೇಲೆ ಸಂಪ್ರದಾಯಬದ್ಧ ಪಾತ್ರಗಳಲ್ಲಿ ನಟಿಸುವ ಶಾಲಿನಿ ಅವರು, ತಮ್ಮ ಇಮೇಜ್ ಬದಿಗಿಟ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶಾಲಿನಿ ಪಾಂಡೆ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಶಾಲಿನಿ ಕೇವಲ ಟವಲ್ ಸುತ್ತಿಕೊಂಡು, ಬೆನ್ನು ತೋರಿಸಿ ಪೋಸ್ ನೀಡಿದ್ದಾರೆ. ಯಾವುದೇ ಅಬ್ಬರವಿಲ್ಲದೇ ಸರಳ ಮೇಕಪ್, ಬಿಟ್ಟ ಕೂದಲು ಹಾಗೂ ಮಂದ ಬೆಳಕಿನಲ್ಲಿ ಮೂಡಿಬಂದಿರುವ ಈ ಫೋಟೋಗಳು ಶಾಲಿನಿ ಅವರ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತಿವೆ.

ಶಾಲಿನಿ ಪಾಂಡೆ ಅವರ ಸಹಜವಾದ ಸೌಂದರ್ಯ ಮತ್ತು ಫಿಟ್‌ನೆಸ್‌ನಿಂದಾಗಿ ಈ ಫೋಟೋಗಳು ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿವೆ. ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಮೆಚ್ಚುಗೆಯ ಮಳೆ ಸುರಿಯುತ್ತಿದ್ದಾರೆ. ಕೆಲವರಿಗೆ ಶಾಲಿನಿ ಅವರ ಈ ಅವತಾರ ಕಂಡು ಅಚ್ಚರಿ ಆಗಿದೆ. ‘ಮುಗ್ಧತೆಯ ಹಿಂದೆ ಇಷ್ಟೊಂದು ಹಾಟ್‌ನೆಸ್ ಅಡಗಿದೆಯಾ’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

View this post on Instagram

A post shared by Shalini Pandey (@shalzp)

ತೆಲುಗಿನ ‘ಅರ್ಜುನ ರೆಡ್ಡಿ’ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡ ಶಾಲಿನಿ ಪಾಂಡೆ, ನಂತರ ಬಾಲಿವುಡ್‌ನತ್ತ ಮುಖ ಮಾಡಿದರು. ಇತ್ತೀಚೆಗಷ್ಟೇ ಅವರು ಪುಲ್ಕಿತ್ ಸಾಮ್ರಾಟ್ ಮತ್ತು ವರುಣ್ ಶರ್ಮಾ ನಟನೆಯ ‘ರಾಹು ಕೇತು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳನ್ನು ಆರಿಸಿಕೊಳ್ಳುತ್ತಿರುವ ಶಾಲಿನಿ, ಈಗ ತಮ್ಮ ಈ ಬೋಲ್ಡ್ ಫೋಟೋಶೂಟ್ ಮೂಲಕ ತಾನು ಕೇವಲ ಸಾಂಪ್ರದಾಯಿಕ ಪಾತ್ರಗಳಿಗೆ ಮಾತ್ರ ಸೀಮಿತವಲ್ಲ ಎಂಬ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಮಿಂಚಿದ ಶಾಲಿನಿ ಪಾಂಡೆ

ತೆರೆಯ ಮೇಲಿನ ಸರಳತೆ ಮತ್ತು ಆಫ್-ಸ್ಕ್ರೀನ್‌ನಲ್ಲಿನ ಈ ಬೋಲ್ಡ್ ಲುಕ್ ಎರಡನ್ನೂ ಶಾಲಿನಿ ಸಮಾನವಾಗಿ ನಿಭಾಯಿಸುತ್ತಿರುವುದು ಅವರ ವೃತ್ತಿಜೀವನದ ಹೊಸ ಆಯಾಮವನ್ನು ಸೂಚಿಸುತ್ತಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಶಾಲಿನಿ ಅವರನ್ನು 23 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:04 pm, Sun, 8 February 26

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್