ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸ್ ಸಿಬ್ಬಂದಿ ಗರಂ: ವಿಡಿಯೋ ವೈರಲ್
ಪದೇ ಪದೇ 112 ಸಹಾಯವಾಣಿಗೆ ಮಹಿಳೆಯೋರ್ವರು ಕರೆ ಮಾಡಿದ್ದಕ್ಕೆ ಪೊಲೀಸ್ ಸಿಬ್ಬಂದಿ ಗರಂ ಆಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರಿ ರೇಗಾಡಿರುವ ವಿಡಿಯೋ ವೈರಲ್ ಆಗಿದ್ದು,ಸ್ಥಳಕ್ಕೆ ಬಂದು ಮಹಿಳೆ ಸಮಸ್ಯೆ ಆಲಿಸಿ ದೂರು ನೀಡಲು ಸಿಬ್ಬಂದಿ ತಿಳಿಸಿದ್ದರೂ ಆಕೆ ಮತ್ತೆ ಮತ್ತೆ ಕರೆ ಮಾಡಿದ್ದಕ್ಕೆ ಅವರು ರೇಗಾಡಿದ್ದಾರೆ ಎನ್ನಲಾಗಿದೆ.
ಹಾಸನ, ಫೆಬ್ರವರಿ 08: ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸ್ ಸಿಬ್ಬಂದಿ ಗರಂ ಆಗಿ ರೇಗಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಪತಿ ಮನೆಯವರ ಕಿರುಕುಳ ಎಂದು ಅರ್ಪಿತಾ ಎಂಬಾಕೆ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದು ಮಹಿಳೆ ಸಮಸ್ಯೆ ಆಲಿಸಿ ದೂರು ನೀಡಲು ಸಿಬ್ಬಂದಿ ತಿಳಿಸಿದ್ದರೂ ಪದೇ ಪದೆ ಕರೆ ಮಾಡಿದ್ದಕ್ಕೆ ಮಹಿಳೆ ಮೇಲೆ ಪೊಲೀಸ್ ಅಧಿಕಾರಿ ರೇಗಾಡಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 08, 2026 11:24 AM
Follow Us
Latest Videos
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

