AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್​ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ

Narendra Modi Malaysia visit: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಲೇಷ್ಯಾ ಭೇಟಿಯಿಂದ ಎರಡೂ ದೇಶಗಳು ಜಂಟಿಯಾಗಿ ವಿವಿಧ ಸಹಕಾರ ಒಪ್ಪಂದಗಳನ್ನು ಘೋಷಿಸಿವೆ. ಯುಪಿಐ ಬಳಕೆಯಿಂದ ಹಿಡಿದು ಭದ್ರತಾ ಸಹಕಾರದವರೆಗೆ 16 ಉಪಕ್ರಮಗಳನ್ನು ಪ್ರಕಟಿಸಲಾಗಿದೆ. ಭಾರತೀಯ ಮೂಲದ ಜನರನ್ನು ಹೊಂದಿರುವ ಜಗತ್ತಿನ ಎರಡನೇ ಅತಿದೊಡ್ಡ ದೇಶ ಮಲೇಷ್ಯಾ ಆಗಿದೆ.

ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್​ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ
ನರೇಂದ್ರ ಮೋದಿ ಅವರ ಮಲೇಷ್ಯಾ ಭೇಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2026 | 4:09 PM

Share

ಕೌಲಾಲಂಪುರ್, ಫೆಬ್ರುವರಿ 8: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಲೇಷ್ಯಾ ಭೇಟಿ ಫಲಪ್ರದವಾಗಿದೆ. ಇಂದು ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ಇರುವ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ. ಈ ವರ್ಷದ ಮೊದಲ ವಿದೇಶ ಭೇಟಿಯಾಗಿ ಮಲೇಷ್ಯಾಗೆ ಹೋಗಿದ್ದ ಮೋದಿ ಅವರು ಅಲ್ಲಿಯ ಪ್ರಧಾನಿ ದಾತು ಸೆರಿ ಅನ್ವರ್ ಇಬ್ರಾಹಿಂ (Dato Seri Anwar Ibrahim) ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು.

ಭಾರತ ಮತ್ತು ಮಲೇಷ್ಯಾದಿಂದ ಘೋಷಣೆಯಾದ ಕೆಲ ಜಂಟಿ ಉಪಕ್ರಮಗಳು

  • ಮಲೇಷ್ಯಾದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆಯಲಾಗುವುದು
  • ಮಲೃಷ್ಯಾದ ಪೇಮೆಂಟ್ ಸಿಸ್ಟಂ ಮತ್ತು ಭಾರತದ ಯುಪಿಐ ಪೇಮೆಂಟ್ ಸಿಸ್ಟಂಗಳ ಹೊಂದಿಕೆ ಮಾಡಲಾಗುವುದು. ಇದರೊಂದಿಗೆ ಭಾರತೀಯರು ಮಲೇಷ್ಯಾಗೆ ಹೋದರೆ ಯುಪಿಐ ಮೂಲಕ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ. ಸಿಂಗಾಪುರ ಇತ್ಯಾದಿ ಕೆಲ ದೇಶಗಳಲ್ಲಿ ಈ ರೀತಿ ಹೊಂದಾಣಿಕೆ ವ್ಯವಸ್ಥೆ ಮಾಡಲಾಗಿದೆ.
  • ವಿಪತ್ತು ನಿರ್ವಹಣೆಗೆ ಎರಡೂ ದೇಶಗಳ ಮಧ್ಯೆ ಎಂಒಯು ಒಪ್ಪಂದ.
  • ಭ್ರಷ್ಟಾಚಾರ ನಿಗ್ರಹಕ್ಕಾಗಿ ಎರಡೂ ದೇಶಗಳ ಮಧ್ಯೆ ಸಹಕಾರಕ್ಕೆ ಒಪ್ಪಂದ
  • ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ. ಸೆಮಿಕಂಡಕ್ಟರ್ ಸಪ್ಲೈ ಚೈನ್ ಬಲಪಡಿಸಲು ಇದರಿಂದ ಅನುಕೂಲ.
  • ವಿಶ್ವಸಂಸ್ಥೆ ಶಾಂತಿಪಾಲನೆ ಸಹಕಾರ ವಿಚಾರದಲ್ಲಿ ಭಾರತ ಮತ್ತು ಮಲೇಷ್ಯಾ ಸರ್ಕಾರಗಳ ನಡುವೆ ಪತ್ರ ವಿನಿಮಯ.
  • ಮಲೇಷ್ಯಾದಲ್ಲಿ ಇರುವ ಭಾರತೀಯ ಪ್ರಜೆಗಳಿಗೆ ಇನ್ಷೂರೆನ್ಸ್ ಸೌಲಭ್ಯ ಒದಗಿಸಲು ಇಎಸ್​ಐಸಿ ಮತ್ತು ಪೆರ್ಕೆಸೋ ನಡುವೆ ಸಹಕಾರ ಒಪ್ಪಂದ
  • ಭಾರತ ಮತ್ತು ಮಲೇಷ್ಯಾಗಳ ರಾಷ್ಟ್ರೀಯ ಭದ್ರತಾ ಮಂಡಳಿಗಳ ಮಧ್ಯೆ ಸಹಕಾರ
  • ಆರೋಗ್ಯ ಮತ್ತು ಔಷಧ ಕ್ಷೇತ್ರಗಳಲ್ಲಿ ಸಹಕಾರ
  • ಮಲಯ ಯೂನಿವರ್ಸಿಟಿಯಲ್ಲಿ ತಿರುವಳ್ಳುವರ್ ಸೆಂಟರ್ ಸ್ಥಾಪನೆಗೆ ಕ್ರಮ
  • ಮಲೇಷ್ಯಾದ ಸೈಬರ್​ಜಯಾ ಯೂನಿವರ್ಸಿಟಿ ಮತ್ತು ಆಯುರ್ವೇದ ತರಬೇತಿ, ಸಂಶೋಧನಾ ಸಂಸ್ಥೆಯಾದ ಐಟಿಆರ್​ಎ ನಡುವೆ ಎಂಒಯು ಒಪ್ಪಂದ.

ಇದನ್ನೂ ಓದಿ: ನೀವೇ ಭಾರತ- ಮಲೇಷ್ಯಾ ನಡುವಿನ ಜೀವಂತ ಸೇತುವೆ; ಭಾರತೀಯ ವಲಸಿಗರ ಜೊತೆ ಪ್ರಧಾನಿ ಮೋದಿ ಸಂವಾದ

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ