ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು?
ತುಮಕೂರಿನ ಯಡಿಯೂರಿನ ಎಸ್.ಎಲ್.ಎನ್ ಕಲ್ಯಾಣ ಮಂಟಪದಲ್ಲಿ ಹರಿಪ್ರಸಾದ್ ತನ್ನ ಎರಡನೇ ವಿವಾಹಕ್ಕೆ ಸಿದ್ಧನಾಗಿದ್ದಾಗ, ಮೊದಲ ಪತ್ನಿ ಲೇಪಾಕ್ಷಿ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ವಿವಾಹವನ್ನು ತಡೆದಿದ್ದಾರೆ. ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಕಾನೂನುಬಾಹಿರವಾಗಿದ್ದು, ಈ ಘಟನೆಗೆ ಕಲ್ಯಾಣ ಮಂಟಪದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಪೊಲೀಸರು ಹರಿಪ್ರಸಾದ್‌ನನ್ನು ವಶಕ್ಕೆ ಪಡೆದಿದ್ದಾರೆ.
ತುಮಕೂರು, ಫೆಬ್ರವರಿ 08: ನಗರದ ಯಡಿಯೂರಿನ ಎಸ್.ಎಲ್.ಎನ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ವಿವಾಹವೊಂದನ್ನು ಮೊದಲ ಪತ್ನಿ ತಡೆದು ನಿಲ್ಲಿಸಿರುವಂತಹ ಘಟನೆ ನಡೆದಿದೆ. ಆ ಮೂಲಕ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲನೇ ಪತ್ನಿ ಶಾಕ್ ನೀಡಿದ್ದಾರೆ. ಹರಿಪ್ರಸಾದ್ ಎಂಬುವರು ವಿಚ್ಛೇದನ ನೀಡದೇ ಎರಡನೇ ಮದುವೆಗೆ ಮುಂದಾಗಿದ್ದರು. ಅವರ ಮೊದಲ ಪತ್ನಿ ಲೇಪಾಕ್ಷಿ ಪೊಲೀಸರೊಂದಿಗೆ ಮದುವೆ ಮಂಟಪಕ್ಕೆ ಆಗಮಿಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ
