ದಳಪತಿ ವಿಜಯ್ ಪತ್ನಿ ಯಾರು? ಇಬ್ಬರೂ ವಿಚ್ಛೇದನ ಕೊಟ್ಟು ದೂರವಾಗಿದ್ದಾರಾ?
ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಅವರು 1999ರಲ್ಲಿ ವಿವಾಹ ಆದರು. ಲಂಡನ್ನಿನಿಂದ ಬಂದ ಅಭಿಮಾನಿಯಾಗಿದ್ದ ಸಂಗೀತಾ ಅವರು ವಿಜಯ್ ಅವರನ್ನು ವಿವಾಹವಾದರು. ವಿಜಯ್ ಮತ್ತು ಸಂಗೀತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ, ಸಂಗೀತಾ ಅವರು ಸಾರ್ವಜನಿಕವಾಗಿ ಕಡಿಮೆ ಕಾಣಿಸಿಕೊಳ್ಳುವುದರಿಂದ ವಿಚ್ಛೇದನದ ವದಂತಿಗಳು ಹಬ್ಬಿವೆ.

ದಳಪತಿ ವಿಜಯ್ (Thalapathy Vijay) ಅವರು ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅವರು ಶೀಘ್ರವೇ ಸಿನಿಮಾ ರಂಗ ತೊರೆದು ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಅವರು ಇತ್ತೀಚೆಗೆ ತ್ರಿಶಾ ಹಾಗೂ ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಹಾಗಾದರೆ, ವಿಜಯ್ ಅವರು ಪತ್ನಿಗೆ ವಿಚ್ಛೇದನ ಕೊಟ್ಟಿದ್ದಾರಾ? ವಿಜಯ್ ಏಕೆ ಪತ್ನಿ ಜೊತೆ ಹೆಚ್ಚು ಕಾಣಿಸಿಕೊಳ್ಳೋದಿಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ವಿಜಯ್ ಅವರು ವಿವಾಹ ಆಗಿದ್ದು ಸಂಗೀತಾ ಜೊತೆ. ಅವರು ಶ್ರೀಲಂಕಾ ತಮಿಳಿಗರಾಗಿದ್ದಾರೆ. ಸಂಗೀತಾ ಹುಟ್ಟಿ ಬೆಳೆದಿದ್ದು ಇಂಗ್ಲೆಂಡ್ನಲ್ಲಿ. ಇವರ ವಿವಾಹ 1999ರ ಆಗಸ್ಟ್ 25ರಂದು ನಡೆಯಿತು. ಈ ದಂಪತಿಗೆ ಜೇಸನ್ ಹಾಗೂ ದಿವ್ಯಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸಂಗೀತಾ ಅವರು ಎಲ್ಲ ವಿಚಾರಗಳನ್ನು ಖಾಸಗಿಯಾಗಿ ಇಡಲು ಬಯಸುತ್ತಾರೆ.
ಅಭಿಮಾನಿಯಾಗಿದ್ದವರು ಪತ್ನಿಯಾದರು..
ಸಂಗೀತಾ ಅವರು ವಿಜಯ್ ಅವರ ದೊಡ್ಡ ಅಭಿಮಾನಿ ಆಗಿದ್ದರು. ಅವರು ವಿಜಯ್ನ ಭೇಟಿ ಮಾಡಲು ಲಂಡನ್ನಿಂದ ಚೆನ್ನೈಗೆ ಬಂದಿದ್ದರು. ವಿಜಯ್ ಅವರ ಸಿನಿಮಾದ ಶೂಟ್ ಎಲ್ಲಿ ನಡೆಯುತ್ತಿದೆ ಎಂಬ ವಿಚಾರ ತಿಳಿದುಕೊಂಡು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಈ ವೇಳೆ ತಮ್ಮನ್ನು ತಾವು ವಿಜಯ್ಗೆ ಪರಿಚಯಿಸಿಕೊಂಡರು.
ಯುವತಿ ಒಬ್ಬರು ಲಂಡನ್ನಿಂದ ತಮ್ಮನ್ನು ನೋಡಲು ಬಂದಿದ್ದಾರೆ ಎಂಬ ವಿಚಾರ ತಿಳಿದು ವಿಜಯ್ಗೆ ಸಾಕಷ್ಟು ಖುಷಿ ಆಯಿತು. ಆ ಬಳಿಕ ವಿಜಯ್ ಅವರು ಸಂಗೀತಾನ ಮನೆಗೆ ಕರೆದರು. ಆ ಬಳಿಕ ಇಬ್ಬರಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಅದು ಪ್ರೀತಿಗೂ ತಿರುಗಿತು. ಕೊನೆಗೆ ಹುಡುಗಿ ತಂದೆ-ತಾಯಿ ಭೇಟಿ ಮಾಡಿ ಈ ಬಗ್ಗೆ ಮಾತಕತೆ ಮಾಡಿ ಮದುವೆಗೆ ಒಪ್ಪಿಸಿದರು.
ವಿಚ್ಛೇದನ ಸುದ್ದಿ
1999ರಲ್ಲಿ ಇವರ ವಿವಾಹ ನಡೆಯಿತು. ವಿಜಯ್ ಕ್ರೈಸ್ತ ಧರ್ಮಕ್ಕೆ ಸೇರಿದವರು. ಆದರೆ, ಇವರ ವಿವಾಹ ಹಿಂದೂ ಸಂಪ್ರದಾಯದ ಪ್ರಕಾರ ನಡೆಯಿತು. ವಿವಾಹದ ಬಳಿಕ ಸಂಗೀತಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ವಿಜಯ್ ಜೊತೆ ಕಾಣಿಸಿಕೊಂಡಿದ್ದೇ ಇಲ್ಲ. ‘ವಾರಿಸು’ ಟ್ರೇಲರ್ ಲಾಂಚ್ ಇವೆಂಟ್, ಅಟ್ಲಿ ಪತ್ನಿ ಪ್ರಿಯಾ ಸೀಮಂತಕ್ಕೆ ವಿಜಯ್ ಒಂಟಿಯಾಗಿ ಬಂದಿದ್ದು ವಿಚ್ಛೇದನ ಸುದ್ದಿಯನ್ನು ಹುಟ್ಟುಹಾಕಿತ್ತು.
ಇದನ್ನೂ ಓದಿ: ತ್ರಿಶಾ ಕೃಷ್ಣನ್ ಜೊತೆ ವಿಜಯ್ ಡೇಟಿಂಗ್? ಅನುಮಾನಕ್ಕೆ ಬಲ ತುಂಬಿದೆ ಈ ಫೋಟೋ
ಆದರೆ, ನಿರ್ದೇಶಕಿ ಐಶ್ವರ್ಯಾ ಶಂಕರ್ ವಿವಾಹಕ್ಕೆ ವಿಜಯ್ ಪರವಾಗಿ ಸಂಗೀತಾ ಅವರು ಆಗಮಿಸಿದ್ದರು. ಈ ಮೂಲಕ ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








