ತ್ರಿಶಾ ಕೃಷ್ಣನ್ ಜೊತೆ ವಿಜಯ್ ಡೇಟಿಂಗ್? ಅನುಮಾನಕ್ಕೆ ಬಲ ತುಂಬಿದೆ ಈ ಫೋಟೋ
ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಅದೇ ಸಮಯದಲ್ಲಿ ಈ ಫೋಟೋ ವೈರಲ್ ಆಗಿದೆ. ಇದರಿಂದ ಜನರ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ತಮ್ಮಿಬ್ಬರ ರಿಲೇಷನ್ಶಿಪ್ ಬಗ್ಗೆ ಈವರೆಗೂ ತ್ರಿಶಾ ಹಾಗೂ ವಿಜಯ್ ಹೇಳಿಕೆ ನೀಡಿಲ್ಲ. ಫೋಟೋ ವೈರಲ್ ಆದ ಬಳಿಕ ಚರ್ಚೆ ಜೋರಾಗಿದೆ.

ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಜೊತೆ ನಟಿ ತ್ರಿಶಾ ಕೃಷ್ಣನ್ ಅವರಿಗೆ ಆತ್ಮೀಯ ನಂಟು ಇದೆ. ಇತ್ತೀಚೆಗೆ ವಿಜಯ್ ಅವರು 51ನೇ ವರ್ಷದ ಹುಟ್ಟುಹಬ್ಬ (Thalapathy Vijay Birthday) ಆಚರಿಸಿಕೊಂಡರು. ಅವರ ಜನ್ಮದಿನಕ್ಕೆ ತ್ರಿಶಾ ಕೃಷ್ಣನ್ ಶುಭ ಕೋರಿರುವ ಪರಿ ಎಲ್ಲರ ಗಮನ ಸೆಳೆದಿದೆ. ವಿಜಯ್ ಜೊತೆ ಇರುವ ಫೋಟೋವನ್ನು ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದಾರೆ. ‘ಅತ್ಯುತ್ತಮನಿಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕಣ್ಣರಳಿಸಿದ್ದಾರೆ. ಈ ಫೋಟೋದಲ್ಲಿ ತ್ರಿಶಾ ಕೃಷ್ಣನ್ (Trisha Krishnan) ಅವರ ಮುದ್ದು ಶ್ವಾನ ಕೂಡ ಇದೆ.
ತ್ರಿಶಾ ಕೃಷ್ಣನ್ ಅವರ ಸಾಕು ನಾಯಿಯನ್ನು ದಳಪತಿ ವಿಜಯ್ ಅವರು ಮುದ್ದಿಸುತ್ತಿದ್ದಾರೆ. ತ್ರಿಶಾ ಅವರು ಕಣ್ಣು ಮಿಟುಕಿಸದೇ ವಿಜಯ್ ಅವರನ್ನೇ ನೋಡುತ್ತಿದ್ದಾರೆ. ಫೋಟೋದಲ್ಲಿ ಈ ಕ್ಷಣ ಸೆರೆಯಾಗಿದೆ. ಅದನ್ನು ನೋಡಿದ ನೆಟ್ಟಿಗರಿಗೆ ವಿಜಯ್ ಮತ್ತು ತ್ರಿಶಾ ನಡುವಿನ ಆತ್ಮೀಯತೆ ಎಂಥದ್ದು ಎಂಬುದು ಅರ್ಥ ಆಗಿದೆ. ಡೇಟಿಂಗ್ ಸುದ್ದಿಗೆ ಈ ಫೋಟೋ ಸಾಕ್ಷಿ ನೀಡಿದಂತಿದೆ.
ದಳಪತಿ ವಿಜಯ್ ಅವರಿಗೆ 1999ರಲ್ಲಿ ಸಂಗೀತಾ ಜೊತೆ ಮದುವೆ ನೆರವೇರಿತು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೂ ಕೂಡ ಅವರು ತ್ರಿಶಾ ಕೃಷ್ಣನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಹಲವರ ಅನುಮಾನ. ಈಗಾಗಲೇ ಹಲವು ಬಾರಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದರಿಂದಾಗಿ ಜನರ ಅನುಮಾನ ಇನ್ನಷ್ಟು ಬಲವಾಗಿದೆ.
View this post on Instagram
ಕಳೆದ ವರ್ಷ ದಳಪತಿ ವಿಜಯ್ ಹುಟ್ಟುಹಬ್ಬಕ್ಕೂ ತ್ರಿಶಾ ಕೃಷ್ಣನ್ ಅವರು ಇಷ್ಟೇ ಆತ್ಮೀಯವಾಗಿ ವಿಶ್ ಮಾಡಿದ್ದರು. ಗೋವಾದಲ್ಲೂ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ತಮ್ಮಿಬ್ಬರ ರಿಲೇಷನ್ಶಿಪ್ ಬಗ್ಗೆ ಈ ಜೋಡಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಅವರಿಂದ ಸ್ಪಷ್ಟನೆ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ನಟಿ ತ್ರಿಶಾ ಕೃಷ್ಣನ್ ನಿಜವಾದ ವಯಸ್ಸು ಹೇಳಿದ್ರೆ ಯಾರೂ ನಂಬಲ್ಲ
‘ಗಿಲ್ಲಿ’, ‘ಲಿಯೋ’ ಮುಂತಾದ ಸಿನಿಮಾಗಳಲ್ಲಿ ತ್ರಿಶಾ ಕೃಷ್ಣನ್ ಮತ್ತು ದಳಪತಿ ವಿಜಯ್ ಅವರು ಒಟ್ಟಿಗೆ ನಟಿಸಿದ್ದಾರೆ. ‘ಗೋಟ್’ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ಅವರು ಅತಿಥಿ ಪಾತ್ರ ಮಾಡಿದ್ದರು. ಸಿನಿಮಾ ಹೊರತಾಗಿಯೂ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಆ ಬಗ್ಗೆ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








