AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

ದಳಪತಿ ವಿಜಯ್ ಅವರು 'ಜನ ನಾಯಗನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಕೊನೆಯ ಚಿತ್ರ ಎಂಬ ವದಂತಿಗಳಿವೆ. ಏಕೆಂದರೆ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಸಹ ಕಲಾವಿದೆ ಮಮಿತಾ ಬೈಜು ಅವರು ವಿಜಯ್​ಗೆ ಈ ಬಗ್ಗೆ ಪ್ರಶ್ನೆ ಮಾಡಿದ್ದರು.ಇದಕ್ಕೆ ಅವರು ಉತ್ತರಿಸಿದ್ದಾರೆ.

‘ಜನ ನಾಯಗನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್
ವಿಜಯ್
ರಾಜೇಶ್ ದುಗ್ಗುಮನೆ
|

Updated on:Jun 24, 2025 | 10:26 AM

Share

ದಳಪತಿ ವಿಜಯ್ (Thalapathy Vijay) ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ರಾಜಕೀಯದಲ್ಲಿ ಬ್ಯುಸಿ ಆಗುವ ಕಾರಣ ಇದು ಅವರ ಕೊನೆಯ ಸಿನಿಮಾ ಎಂದೇ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಬಗ್ಗೆ ಅವರ ಸಹ ಕಲಾವಿದೆ ಮಮಿತಾ ಬೈಜು ಪ್ರಶ್ನೆ ಮಾಡಿದ್ದರು. ಇದಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವಿಜಯ್ ಅವರು ಉತ್ತರ ನೀಡಿದ್ದಾರೆ ಎನ್ನಲಾಗಿದೆ.

‘ಜನ ನಾಯಗನ್’ ಸಿನಿಮಾದಲ್ಲಿ ದಳಪತಿ ವಿಜಯ್ ಅವರ ಸಹೋದರಿಯ ಪಾತ್ರದಲ್ಲಿ ಮಮಿತಾ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಶೂಟಿಂಗ್ ನಡೆದಿದೆ. ಶೂಟ್ ಬಿಡುವಿನ ವೇಳೆ ಅವರು ಮುಂದಿನ ಸಿನಿಮಾ ಯೋಜನೆಗಳ ಬಗ್ಗೆ ವಿಜಯ್ ಬಳಿ ಪ್ರಶ್ನೆ ಮಾಡಿದ್ದಾರೆ. ಆದರೆ, ವಿಜಯ್ ಅವರಿಂದ ಸ್ಪಷ್ಟ ಉತ್ತರ ಬಂದಿಲ್ಲ ಎನ್ನಲಾಗಿದೆ.

ವಿಜಯ್ ಅವರಿಗೆ ಹೀರೋ ಆಗಿ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದು ನಿಜ. ಆದರೆ, ಅದೆಲ್ಲವೂ ವೋಟ್ ಆಗಿ ಬದಲಾಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ, ರಾಜಕೀಯದಲ್ಲಿ ಅವರು ಯಶಸ್ಸು ಕಾಣಬಹುದು ಅಥವಾ ಕಾಣದೇ ಇರಬಹುದು. ಒಂದೊಮ್ಮೆ ಯಶಸ್ಸು ಕಾಣದೆ ಇದ್ದರೆ ಮುಂದಿನ ಐದು ವರ್ಷ ಸುಮ್ಮನೆ ಕೂರಬೇಕಾಗುತ್ತದೆ. ಹಾಗಾದಲ್ಲಿ ಅವರು ಮತ್ತೆ ಸಿನಿಮಾ ಮಾಡಬಹುದು.

ಇದನ್ನೂ ಓದಿ
Image
ಸಲ್ಮಾನ್ ಖಾನ್​ಗೆ ನಿಜಕ್ಕೂ ಇದ್ದ ಗೆಳತಿಯರೆಷ್ಟು? ಲೆಕ್ಕ ಕೊಟ್ಟ ಸಲ್ಲು
Image
ಬಾಕ್ಸ್ ಆಫೀಸ್​ನಲ್ಲಿ ಜಾಕ್​ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್
Image
ಸಲ್ಮಾನ್ ಖಾನ್​ಗೆ ಮೆದುಳು ಸಂಬಂಧಿ ರೋಗ; ಕಾಡುತ್ತಿದೆ ಸ್ಟ್ರೋಕ್ ಆಗೋ ಭಯ
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಅವರು ಪಕ್ಷವನ್ನು ಬದಲಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ಫಲಿತಾಂಶದ ಮೇಲೆ ವಿಜಯ್ ಸಿನಿ ಬದುಕು ನಿರ್ಧಾರ ಆಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ವಿಜಯ್ ಹುಟ್ಟುಹಬ್ಬ ಬಂತು ‘ಜನ ನಾಯಗನ್’ ಟೀಸರ್, ಸಮವಸ್ತ್ರದಲ್ಲಿ ದಳಪತಿ

ಈ ಮೊದಲು ರಿಲೀಸ್ ಆದ ವಿಜಯ್ ನಟನೆಯ ‘ಗೋಟ್’ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಈ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಅವರು ಹೇಳಿದ ಡೈಲಾಗ್ ಗಮನ ಸೆಳೆದಿದೆ. ‘ನಾನು ಕೊನೆ ಎಂದ ಬಳಿಕವೇ ಎಲ್ಲವೂ ಕೊನೆ ಆಗುತ್ತದೆ’ ಎಂಬರ್ಥದಲ್ಲಿ ಹೇಳಿದ್ದರು. ಅಂದರೆ, ಇನ್ನೂ ಸಿನಿಮಾ ಮಾಡುವ ಆಲೋಚನೆ ಇದೆ ಎಂದು ಪರೋಕ್ಷವಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:53 pm, Mon, 23 June 25