ರಜನಿ ಎಂಟ್ರಿಗೆ ಮೈಸೂರಿನ ಅಭಿಮಾನಿಗಳು ಫುಲ್ ಖುಷ್
ನಟ ರಜನಿಕಾಂತ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರು ಎಲ್ಲೇ ಹೋದರು ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಈಗ ಅವರು ಸದ್ಯ ಮೈಸೂರಿನಲ್ಲಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ರಜನಿಕಾಂತ್ ಎಂಟ್ರಿಗೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ .
ನಟ ರಜನಿಕಾಂತ್ ಅವರು ಮೈಸೂರಿನ ಬಿಳಿಕೆರೆ ಬಳಿ ‘ಜೈಲರ್ 2’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಈ ಮೊದಲು ರಿಲೀಸ್ ಆದ ‘ಜೈಲರ್’ ಸಿನಿಮಾ (Jailer Movie) ಹಿಟ್ ಆಯಿತು. ಈ ಕಾರಣಕ್ಕೆ ಸಿನಿಮಾಗೆ ಸೀಕ್ವೆಲ್ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಚಿತ್ರೀಕರಣದಲ್ಲಿ ನಟ ರಜಿನಿಕಾಂತ್ ಭಾಗಿ ಆಗಿದ್ದಾರೆ. ಶೂಟಿಂಗ್‌ಗೆ ಹೋಗುವಾಗ ಹಾಗೂ ಶೂಟಿಂಗ್ ಮುಗಿಸಿ ಬರುವಾಗ ರಜನಿ ನೋಡಲು ಫ್ಯಾನ್ಸ್ ನೆರೆಯುತ್ತಿದ್ದಾರೆ. ಅಭಿಮಾನಿಗಳನ್ನು ನೋಡಿ ರಜಿನಿಕಾಂತ್ ಕೈಮುಗಿದು ತೆರಳುತ್ತಿದ್ದಾರೆ. ‘ತಲೈವಾ.. ತಲೈವಾ..’ ಎಂದು ಘೋಷಣೆಗಳನ್ನು ಅಭಿಮಾನಿಗಳು ಕೂಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos