ಹೋಟೆಲ್ ಖಾದ್ಯಗಳ ರುಚಿ ಹೆಚ್ಚಿಸುವ ಟಿಪ್ಸ್ ಅನ್ನು ರಾಜ್ ಕುಮಾರ್ಗೆ ನೀಡಿದ್ದ ರಜಿನಿಕಾಂತ್
Dr Rajkumar and Rajinikanth: ಡಾ ರಾಜ್ಕುಮಾರ್ ಬಗ್ಗೆ ನಟ ರಜನೀಕಾಂತ್ಗೆ ಬಹಳ ಗೌರವ ಮತ್ತು ಭಕ್ತಿ. ಇಬ್ಬರೂ ಪರಸ್ಪರ ಬಹಳ ಆತ್ಮೀಯರಾಗಿದ್ದರು. ರಾಜ್ಕುಮಾರ್ ಅವರಿಗೆ ಆಹಾರದ ಮೇಲೆ ವಿಪರೀತ ಪ್ರೀತಿ, ರುಚಿ ರುಚಿಯಾದ ಊಟವನ್ನು ತರಿಸಿಕೊಂಡು ತಿನ್ನುತ್ತಿದ್ದರು. ಆದರೆ ಹೋಟೆಲ್ ಊಟದ ರುಚಿಯನ್ನು ಹೆಚ್ಚಿಸುವ ಟಿಪ್ಸ್ ಅನ್ನು ರಜನೀಕಾಂತ್ ಅವರು ರಾಜ್ಕುಮಾರ್ ಅವರಿಗೆ ನೀಡಿದ್ದರಂತೆ.

ರಾಜ ಕುಮಾರ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ ಇತ್ತು. ನಾನ್ ವೆಜ್ ಹಾಗೂ ಸಸ್ಯಾಹಾರಿ ಖಾದ್ಯಗಳನ್ನು ಅವರು ಸವಿಯುತ್ತಿದ್ದರು. ಅವರು ಒಂದೇ ಒಂದು ಅಗಳನ್ನು ಕೂಡ ವೇಸ್ಟ್ ಮಾಡುತ್ತಾ ಇರಲಿಲ್ಲ. ಯಾವ ಹೋಟೆಲ್ನ ಆಹಾರ ರುಚಿ ಇರುತ್ತದೆಯೋ ಅಲ್ಲಿಂದ ಅವುಗಳನ್ನು ತರಿಸಿಕೊಂಡು ರಾಜ್ ಕುಮಾರ್ ತಿನ್ನುತ್ತಿದ್ದರು. ಇವುಗಳ ರುಚಿ ಹೆಚ್ಚಿಸುವ ಟಿಪ್ಸ್ ಅನ್ನು ರಾಜ್ ಕುಮಾರ್ಗೆ ಅವರ ಆಪ್ತ ಗೆಳೆಯ ರಜನಿಕಾಂತ್ ನೀಡಿದ್ದರಂತೆ.
ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಿದ್ಯಾರ್ಥಿ ಭವನದ ಮ್ಯಾನೇಜಿಂಗ್ ಪಾರ್ಟನರ್ ಅರುಣ್ ಅಡಿಗ ಅವರು ಮಾತನಾಡಿದ್ದರು. ಈ ವೇಳೆ ಅವರು ರಜನಿ ಹಾಗೂ ರಾಜ ಕುಮಾರ್ ಮಧ್ಯೆ ನಡೆದ ಮಾತಿನ ಗುಟ್ಟನ್ನು ರಿವೀಲ್ ಮಾಡಿದ್ದರು.
‘ಅಣ್ಣಾವ್ರು ಮನೆಗೆ ಆಹಾರ ತರಿಸಿಕೊಳ್ಳುತ್ತಿದ್ದರು. ರಾಜ್ ಕುಮಾರ್ ಮನೆಗೆ ಒಮ್ಮೆ ರಜನಿಕಾಂತ್ ತಿಂಡಿಗೆ ಬಂದಿದ್ದರಂತೆ. ಆಗ ವಿದ್ಯಾರ್ಥಿ ಭವನದ ತಿಂಡಿ ತರಿಸಿಕೊಂಡಿದ್ದರು. ತುಂಬಾ ಚೆನ್ನಾಗಿದೆ ಎಂದು ರಾಜ ಕುಮಾರ್ ತಿನ್ನುತ್ತಿದ್ದರಂತೆ. ಇದಲ್ಲ ಅಲ್ಲಿಯೇ ಹೋಗಿ ತಿನ್ನಬೇಕು, ಆಗ ನಿಜವಾದ ರುಚಿ ಸಿಗುತ್ತದೆ ಎಂದು ರಜನಿ ಅವರು ಅಣ್ಣಾವ್ರಿಗೆ ಹೇಳಿದ್ದರಂತೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:‘ಯುಐ’ ಸಿನಿಮಾ ನೋಡಲಿದ್ದಾರೆ ಯಶ್ ಮತ್ತು ರಜನೀಕಾಂತ್
‘ರಾಜ ಕುಮಾರ್ ಅವರು ಬರುತ್ತೇನೆ ಎಂದು ಕರೆ ಮಾಡುತ್ತಿದ್ದರು. ಆದರೆ, ಬರುತ್ತಿರಲಿಲ್ಲ. ಯಾವಾಗಲೂ ಕರೆ ಮಾಡಿದಾಗ ವಿಚಾರ ತಿಳಿದು ಜನರು ಸೇರುತ್ತಿದ್ದರು. ಆದರೆ, ಅವರು ಬರುತ್ತಾನೆ ಇರಲಿಲ್ಲ. ಕೊನೆಗೆ ಒಂದಿನ ರಾಜ್ ಕುಮಾರ್ ಕುಟುಂಬದಿಂದ ಕರೆ ಬಂತು. ಆದರೆ, ನಾವು ಅದನ್ನು ಹೇಳಲೇ ಇಲ್ಲ. ನೋಡಿದ್ರೆ ಮುಂಜಾನೆ ಪೊಲೀಸ್ ಗಾಡಿ ಬಂದು ನಿಂತಿತ್ತು’ ಎಂದಿದ್ದಾರೆ ಅರುಣ್.
‘ರಾಜ್ ಕುಮಾರ್ ಅವರು ಅಪರಹಣಕ್ಕೆ ಒಳಗಾದ ಬಳಿಕ ಕಠಿಣ ನಿಯಮ ಪಾಲಿಸಬೇಕಿತ್ತು. ರಾಜ್ ಕುಮಾರ್ ಎಲ್ಲೇ ಹೋದರೂ ಪೊಲೀಸರು ಬರುತ್ತಿದ್ದರು. ಅಂದು ಮುಂಜಾನೆಯೂ ಪೊಲೀಸರು ಬಂದರು. ಅಣ್ಣಾವ್ರು ಬರ್ತಾರೆ ಎಂಬ ಸುದ್ದಿ ಗೊತ್ತಾಯಿತು. ಪಿಸುಗುಟ್ಟುತ್ತ ಎಲ್ಲರಿಗೂ ಸುದ್ದಿ ಗೊತ್ತಾಯಿತು. ಹೋಟೆಲ್ನಲ್ಲಿ ಇದ್ದವರು ಹೋಗೋಕೆ ರೆಡಿ ಇರಲಿಲ್ಲ. ಆಫೀಸ್ಗೆ ಹೋಗುವವರು ಕಚೇರಿಗೆ ರಜೆ ಹಾಕಿ ಬಿಟ್ಟರು. ಅವರು ಬಂದರು. ಎಲ್ಲರ ಜೊತೆ ಫೋಟೋ ತೆಗೆಸಿಕೊಂಡರು. ಬಹಳ ಖುಷಿಪಟ್ಟರು’ ಎಂದಿದ್ದಾರೆ ಅರುಣ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ