ಪತ್ರಿಕೆಯಲ್ಲೂ ಕೆಲಸ ಮಾಡಿದ್ದ ರಿಷಬ್ ಶೆಟ್ಟಿ; ಲಾಭ ತಂದುಕೊಟ್ಟ ಉದ್ಯಮ ಯಾವುದು?
Rishab Shetty: ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಬರುವ ಮುಂಚೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದರು. ವಾಟರ್ ಕ್ಯಾನ್ ಬ್ಯುಸಿನೆಸ್, ಕನ್ಸ್ಟ್ರಕ್ಷನ್, ಹೋಟೆಲ್ ಉದ್ಯಮ ಹೀಗೆ ಹಲವು ಉದ್ಯಮಗಳಲ್ಲಿ ಕೈಯಾಡಿಸಿದ್ದರು. ಅಂದಹಾಗೆ ಪತ್ರಿಕೆಯೊಂದರಲ್ಲಿಯೂ ಸಹ ರಿಷಬ್ ಶೆಟ್ಟಿ ಕೆಲಸ ಮಾಡಿದ್ದರು.

ರಿಷಬ್ ಶೆಟ್ಟಿ ಅವರು ಇಂದು ಬೇಡಿಕೆಯ ಹೀರೋ. ‘ಕಾಂತಾರ’ ಬಳಿಕ ಅವರ ಜೀವನ ಸಂಪೂರ್ಣವಾಗಿ ಬದಲಾಯಿತು. ಇಷ್ಟೆಲ್ಲ ಹೆಸರು ಮಾಡಿದ ರಿಷಬ್ ಜೀವನ ಸುಲಭದಲ್ಲಿ ಆರಂಭ ಕಾಣಲಿಲ್ಲ. ಸಾಕಷ್ಟು ಏಳು ಬೀಳುಗಳನ್ನು ನೋಡಿದ ಅವರು ಈಗ ಯಶಸ್ಸು ಕಂಡಿದ್ದಾರೆ. ಅವರು ಹಲವು ಉದ್ಯಮಗಳನ್ನು ಕೂಡ ಮಾಡಿದ್ದರು. ಕೆಲವರು ಅವರಿಗೆ ಯಶಸ್ಸು ತಂದುಕೊಟ್ಟರೆ ಇನ್ನೂ ಕೆಲವು ಅವರಿಗೆ ನಷ್ಟವನ್ನು ಉಂಟು ಮಾಡಿತ್ತಿ. ಆ ಬಗ್ಗೆ ಇಂದು ತಿಳಿದುಕೊಳ್ಳೋಣ.
ರಿಷಬ್ ಶೆಟ್ಟಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದು ಮೊದಲಿನಿಂದಲೂ ಕನಸು ಕಂಡಿದ್ದರು. ಆದರೆ, ಅದಕ್ಕೆ ಹೋಗುವುದಕ್ಕೂ ಮೊದಲು ಅವರು ಕೆಲವು ಉದ್ಯಮಗಳನ್ನು ಮಾಡಿದ್ದರು. ಕನ್ ಸ್ಟ್ರಕ್ಷನ್ ಬಿಸ್ನೆಸ್, ವಾಟರ್ ಕ್ಯಾನ್ ಬಿಸ್ನೆಸ್ ಗಳನ್ನು ಮಾಡಿದ್ರು. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಿಕೆ ಒಂದರಲ್ಲೂ ಅವರು ಕೆಲಸ ಮಾಡಿದ್ದರು ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ರಿಷಬ್ ಅವರು ಈ ಮೊದಲು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ತಿಳಿದುಕೊಳ್ಳೋಣ.
ರಿಷಬ್ ಶೆಟ್ಟಿ ಅವರು ಪ್ರಜಾನುಡಿ ಎಂಬ ಪತ್ರಿಕೆಯಲ್ಲಿ ಅಡ್ವಟೈಸ್ ಮೆಂಟ್ ಎಕ್ಸುಕಿಟಿವ್ ಆಗಿದ್ದರು. ಈ ಬಗ್ಗೆ ಶೋ ಒಂದರಲ್ಲಿ ಹೇಳಿಕೊಂಡಿದ್ದರು. ಇದನ್ನು ಕೇಳಿ ಎಲ್ಲರೂ ಅಚ್ಚರಿ ಹೊರಹಾಕಿದ್ದರು. ರಿಷಬ್ ಅವರು ಈ ರೀತಿಯ ಕೆಲಸವನ್ನೂ ಮಾಡಿದ್ದರಾ ಎಂಬ ವಿಚಾರ ತಿಳಿದು ಎಲ್ಲರಿಗೂ ಅಚ್ಚರಿ ಆಗಿತ್ತು.
ಇದನ್ನೂ ಓದಿ:ರಿಷಬ್ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾದ ಪೋಸ್ಟರ್ ಬಿಡುಗಡೆ
‘ಯಾವ ಬಿಸ್ನೆಸ್ ಹೆಚ್ಚು ಖುಷಿ ಕೊಟ್ಟಿದೆ’ ಎಂದು ರಿಷಬ್ ಶೆಟ್ಟಿ ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಕೇಳಿದರು. ಆಗ ರಿಷಬ್ ಅವರು, ‘ಕನ್ಸ್ಟ್ರಕ್ಷನ್ ಹೆಚ್ಚು ಖುಷಿ ಕೊಟ್ಟಿತು’ ಎಂದರು. ‘ಕನ್ ಸ್ಟ್ರಕ್ಷನ್ ಖುಷಿಕೊಡ್ತು. ಮಿನರಲ್ ವಾಟರ್ ದುಡ್ಡು ಕೊಟ್ಟಿದ್ದು’ ಎಂದು ಪ್ರಮೋದ್ ಹೇಳಿದರು. ಮಿನರಲ್ ವಾಟರ್ ರೀತಿಯೇ ಕನ್ ಸ್ಟ್ರಕ್ಷನ್ ಕೂಡ ದುಡ್ಡು ಕೊಟ್ಟಿತ್ತು ಎಂದು ರಿಷಬ್ ಹೇಳಿದರು.
ರಿಷಬ್ ಶೆಟ್ಟಿ ಅವರು ಉದ್ಯಮದಲ್ಲಿ ಯಶಸ್ಸು ಕಂಡ ಹೊರತಾಗಿಯೂ ಇವೆಲ್ಲವನ್ನೂ ಬಿಟ್ಟು ಸಿನಿಮಾ ರಂಗಕ್ಕೆ ಬರುವ ನಿರ್ಧಾರಕ್ಕೆ ಬಂದರು. ಅವರು ಎಲ್ಲವನ್ನೂ ಮಾರಿ ಸಿನಿಮಾದಲ್ಲಿ ನಟಿಸೋಕೆ ಆರಂಭಿಸಿದರು.ಈ ಮೂಲಕ ಅವರು ಭೇಷ್ ಎನಿಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ