Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಅಡ ಇಟ್ಟು ‘ಮೈ ಆಟೋಗ್ರಾಫ್’ ನಿರ್ಮಾಣ ಮಾಡಿದ್ದ ಸುದೀಪ್

Kichcha Sudeep: ನಟ ಕಿಚ್ಚ ಸುದೀಪ್ ಕೇವಲ ನಟ ಮಾತ್ರವೇ ಅಲ್ಲದೆ ನಿರ್ದೇಶಕ, ನಿರ್ಮಾಪಕ ಸಹ ಹೌದು. ಅದರಲ್ಲಿಯೂ ಪಕ್ಕಾ ಪೈಸಾ ವಸೂಲ್ ಕಮರ್ಶಿಯಲ್ ಸಿನಿಮಾಗಳ ಬದಲಿಗೆ ಕತೆಗೆ ಪ್ರಾಧಾನ್ಯತೆ ಇದ್ದ, ಸಂದೇಶವುಳ್ಳ, ಕಲ್ಟ್ ಎನಿಸಿಕೊಳ್ಳುವಂಥಹಾ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿಯೂ ಅವರೇ ನಿರ್ದೇಶಿಸಿ, ನಿರ್ಮಾಣವೂ ಮಾಡಿದ್ದ ‘ಮೈ ಆಟೋಗ್ರಾಫ್’ ಸಿನಿಮಾಕ್ಕೆ ಆಸ್ತಿಯನ್ನೇ ಅಡವಿಟ್ಟಿದ್ದರಂತೆ ಕಿಚ್ಚ.

ಮನೆ ಅಡ ಇಟ್ಟು ‘ಮೈ ಆಟೋಗ್ರಾಫ್’ ನಿರ್ಮಾಣ ಮಾಡಿದ್ದ ಸುದೀಪ್
My Autograph
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Feb 19, 2025 | 3:54 PM

2006ರಲ್ಲಿ ಬಂದ ‘ಮೈ ಆಟೋಗ್ರಾಫ್’ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾನ ಸುದೀಪ್ ಅವರು ನಿರ್ದೇಶನ ಮಾಡಿದರು. ಅವರೇ ನಿರ್ಮಾಣ ಕೂಡ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸುದೀಪ್ ಅವರ ಸಾಧನೆ ಸಣ್ಣದಲ್ಲ. ಅವರು ಮನೆಯನ್ನು ಅಡ ಇಟ್ಟು ಈ ಚಿತ್ರ ನಿರ್ಮಾಣ ಮಾಡಿದ್ದರು ಎನ್ನುವ ವಿಚಾರ ಗೊತ್ತೇ? ಈ ಬಗ್ಗೆ ಸುದೀಪ್ ಅವರು ಈ ಮೊದಲು ಹೇಳಿಕೊಂಡಿದ್ದರು.

ಈ ಮೊದಲು ‘ಜೀ ಕನ್ನಡ’ ವೇದಿಕೆಗೆ ಸುದೀಪ್ ಬಂದಿದ್ದರು. ‘ಸರಿಗಮಪ’ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿ ಆಗಿದ್ದರು. ಈ ವೇಳೆ ಅವರು ಜೀ ಕನ್ನಡದ ಜೊತೆ ಇರುವ ವಿಶೇಷ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ಅವರ ಬದುಕನ್ನು ಸಿನಿಮಾ ಬದಲಿಸಿತ್ತು. ಇದರಲ್ಲಿ ಜೀ ಅವರ ಪಾಲೂ ಇದೆ ಎಂದಿದ್ದರು ಸುದೀಪ್.

‘ಮೈ ಆಟೋಗ್ರಾಫ್’ ಸಿನಿಮಾ ನಾನು ಮನೆ ಅಡ ಇಟ್ಟು ಮಾಡಿದ ಚಿತ್ರ. ಆ ಸಿನಿಮಾಗೆ ಹೋಗಿಲ್ಲ ಎಂದಿದ್ರೆ ಕಷ್ಟ ಆಗ್ತಿತ್ತು. ಯಾರೂ 25-30 ಲಕ್ಷ ರೂಪಾಯಿ ಮೇಲೆ ಹಣ ಕೊಡಲ್ಲ ಎಂದರು. ನಾನು ಸೆಟಲೈಟ್ ಹಕ್ಕನ್ನು ಕೊಡಲ್ಲ ಎಂದೆ. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ 1 ಕೋಟಿ ರೂಪಾಯಿ ಕೊಟ್ಟರು. ಸಿನಿಮಾ ಹಿಟ್ ಆದ ಬಳಿಕ ಅವರು ಸೆಟಲೈಟ್ ಹಕ್ಕನ್ನು ಪಡೆದರು. ಈ ಚಿತ್ರ ಚೆನ್ನಾಗಿಲ್ಲ ಎಂದರೆ ಯಾರೂ ಸೆಟಲೈಟ್ ಹಕ್ಕನ್ನು ಪಡೆಯಬೇಡಿ ಎಂದು ನಾನು ಕೇಳಿ ಕೊಂಡಿದ್ದೆ’ ಎಂದಿದ್ದರು ಸುದೀಪ್.

ಇದನ್ನೂ ಓದಿ:ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಗತ್ತು ತೋರಿಸಿ ಬಂದಿದ್ದ ಕಿಚ್ಚ ಸುದೀಪ್

‘ಮೈ ಆಟೋಗ್ರಾಫ್’ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಹಲವು ಬ್ರೇಕಪ್​ಗಳನ್ನು ಕಾಣುವ ಕಥಾ ನಾಯಕ ನಂತರ ತನ್ನದೇ ಮದುವೆಗೆ ಅವರೆಲ್ಲರಿಗೂ ಆಮಂತ್ರಣ ನೀಡುತ್ತಾರೆ. ಇದರ ಕಥೆಯನ್ನು ‘ಮೈ ಆಟೋಗ್ರಾಫ್’ ಚಿತ್ರ ಹೊಂದಿತ್ತು. ಇದು ತಮಿಳಿನ ‘ಆಟೋಗ್ರಾಫ್’ ಚಿತ್ರದ ರಿಮೇಕ್ ಆಗಿದೆ. ಚೆರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ ನಟಿಸಿದ್ದರು. ಅಲ್ಲಿ ಹಿಟ್ ಆದ ಬಳಿಕ ಸುದೀಪ್ ಅವರು ಚಿತ್ರವನ್ನು ಕನ್ನಡಕ್ಕೆ ತಂದು ಯಶಸ್ಸು ಕಂಡರು. ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Wed, 19 February 25

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ