ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಗತ್ತು ತೋರಿಸಿ ಬಂದಿದ್ದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ತೆಲುಗು ಚಿತ್ರರಂಗದಲ್ಲೂ, ಕಿರುತೆರೆಯಲ್ಲೂ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದ್ದಾರೆ. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಸುದೀಪ್, ತೆಲುಗು ಬಿಗ್ ಬಾಸ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಬಿಗ್ ಬಾಸ್ ಕನ್ನಡದ ಯಶಸ್ವಿ ನಿರೂಪಣೆಯ ನಂತರ ಅವರು ಮರಳುತ್ತಾರೆಯೇ ಎಂಬುದು ಅಭಿಮಾನಿಗಳ ಕುತೂಹಲದ ವಿಷಯವಾಗಿದೆ.

ಕಿಚ್ಚ ಸುದೀಪ್ ಅವರು ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲ ತೆಲುಗು ಪ್ರೇಕ್ಷಕರಿಗೂ ಸಾಕಷ್ಟು ಪರಿಚಯ ಇದೆ. ಇದಕ್ಕೆ ಕಾರಣ ಆಗಿದ್ದು ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾ. ಈ ಚಿತ್ರದಲ್ಲಿ ನಟಿಸಿ ಸುದೀಪ್ ಭೇಷ್ ಎನಿಸಿಕೊಂಡಿದ್ದರು. ಈ ಸಿನಿಮಾ ಎಲ್ಲರ ಗಮನ ಸೆಳೆಯಿತು. ಸುದೀಪ್ ಅವರು ತೆಲುಗು ಕಿರುತೆರೆಯಲ್ಲೂ ಒಮ್ಮೆ ಕಾಣಿಸಿಕೊಂಡಿದ್ದರು ಎನ್ನುವ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ನೋಡಿ.
ಕಿಚ್ಚ ಸುದೀಪ್ ಅವರು ಕನ್ನಡ ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ. ಅದೇ ರೀತಿ ಒಮ್ಮೆ ತೆಲುಗು ಬಿಗ್ ಬಾಸ್ಗೆ ಅವರು ಅತಿಥಿಯಾಗಿ ತೆರಳಿದ್ದರು. ‘ತೆಲುಗು ಬಿಗ್ ಬಾಸ್’ನ ಅಕ್ಕಿನೇನಿ ನಾಗಾರ್ಜುನ ಅವರು ನಡೆಸಿಕೊಡುತ್ತಾ ಇದ್ದರು. ಈ ವೇಳೆ ವೇದಿಕೆ ಮೇಲೆ ಸುದೀಪ್ ಅವರು ಕೂಡ ಬಂದರು. ‘ನಾನು ಕೆಲ ಹೊತ್ತು ಆ ಕಡೆ ಇರುತ್ತೇನೆ. ಆ ಸಮಯದಲ್ಲಿ ನೀವು ಬಿಗ್ ಬಾಸ್ ನಡೆಸಿಕೊಡಿ’ ಎಂದು ಹೇಳಿ ಅಕ್ಕಿನೇನಿ ನಾಗಾರ್ಜುನ ಅವರು ಸ್ಥಳದಿಂದ ನಡೆದರು.
ಆಗ ಸುದೀಪ್ ಅವರು ಬಿಗ್ ಬಾಸ್ ಮನೆ ಒಳಗೆ ಇದ್ದ ಸ್ಪರ್ಧಿಗಳ ಜೊತೆ ಮಾತನಾಡಿದರು. ಸುದೀಪ್ ಅವರನ್ನು ನೋಡಿ ಅಲ್ಲಿದ್ದ ಎಲ್ಲರೂ ಶಾಕ್ ಆದರು. ಎಲ್ಲರೂ ಅಕ್ಕಿನೇನಿ ನಾಗಾರ್ಜುನ ಬರುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ, ಅಲ್ಲಿ ಬಂದಿದ್ದು ಸುದೀಪ್ ಅವರು. ತೆಲುಗು ಬಿಗ್ ಬಾಸ್ನ ಅವರು ಗತ್ತಿನಲ್ಲಿ ನಿರೂಪಣೆ ಮಾಡಿ ಬಂದಿದ್ದರು. ಅಲ್ಲದೆ, ಅಕ್ಕಿನೇನಿ ನಾಗಾರ್ಜುನ ಅವರು ಮತ್ತೆ ವೇದಿಕೆ ಮೇಲೆ ಬರಬೇಕು ಎಂದರೆ ಕಾರಣಗಳನ್ನು ನೀಡಬೇಕು ಎಂದು ಕಂಡೀಷನ್ ಹಾಕಿದ್ದರು. (ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)
ಇದನ್ನೂ ಓದಿ: ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೆ ಆರಂಭದಲ್ಲೇ ಅಡಚಣೆ; ಸುದೀಪ್-ಡಿಕೆಶಿ ಭೇಟಿಗೆ ಕಾರಣವಾಯ್ತು ಜಾಗದ ವಿವಾದ?
ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಅವರು ಬಿಗ್ ಬಾಸ್ ಇನ್ನುಮುಂದೆ ನಡೆಸಿಕೊಡಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಇದೆ. ಈಗ ಸುದೀಪ್ ಅವರು ಮತ್ತೆ ಬಿಗ್ ಬಾಸ್ ನಡೆಸಿಕೊಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.