VIDEO: ಕಾಂಬೊ ಕ್ಯಾಚ್… ರವೀಂದ್ರ ಜಡೇಜಾ-ಸಾಯಿ ಸುದರ್ಶನ್ ಜುಗಲ್‌ಬಂದಿ
England vs India, 1st Test: ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲೊ 471 ರನ್ ಕಲೆಹಾಕಿತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ 465 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 90 ರನ್ ಕಲೆಹಾಕಿದೆ.
ಲೀಡ್ಸ್ನ ಹೆಡಿಂಗ್ಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಫೀಲ್ಡರ್ಗಳು 5 ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಈ ಕಳಪೆ ಕ್ಷೇತ್ರರಕ್ಷಣೆಯ ನಡುವೆ ರವೀಂದ್ರ ಜಡೇಜಾ ಹಾಗೂ ಸಾಯಿ ಸುದರ್ಶನ್ ಜುಗಲ್‌ಬಂದಿಯೊಂದಿಗೆ ಬೌಂಡರಿ ಲೈನ್ನಲ್ಲಿ ಕ್ಯಾಚ್ವೊಂದು ಹಿಡಿದಿದಿದ್ದಾರೆ.
ಇಂಗ್ಲೆಂಡ್ ಇನಿಂಗ್ಸ್ನ 80ನೇ ಓವರ್ನ 3ನೇ ಎಸೆತವನ್ನು ಜೇಮಿ ಸ್ಮಿತ್ ಲೆಗ್ ಸೈಡ್ನತ್ತ ಬಾರಿಸಿದ್ದರು. ಆದರೆ ಅಲ್ಲೇ ಬೌಂಡರಿ ಲೈನ್ನಲ್ಲಿದ್ದ ರವೀಂದ್ರ ಜಡೇಜಾ ಚೆಂಡನ್ನು ಸರಿಯಾಗಿ ಗುರುತಿಸಿ ಕೈಯಲ್ಲಿ ಬಂಧಿಸಿದರು. ಇದರ ನಡುವೆ ನಿಯಂತ್ರಣ ತಪ್ಪಿದ ಜಡೇಜಾ ಬೌಂಡರಿ ಗೆರೆ ದಾಟಿದ್ದಾರೆ. ಆದರೆ ಅದಕ್ಕೂ ಮುನ್ನ ಚೆಂಡನ್ನು ಮತ್ತೋರ್ವ ಫೀಲ್ಡರ್ ಸಾಯಿ ಸುದರ್ಶನ್ಗೆ ವರ್ಗಾಯಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ರವೀಂದ್ರ ಜಡೇಜಾ – ಸಾಯಿ ಸುದರ್ಶನ್ ಫೀಲ್ಡಿಂಗ್ ಜುಗಲ್‌ಬಂದಿಯೊಂದಿಗೆ ಜೇಮಿ ಸ್ಮಿತ್ಗೆ (40) ಪೆವಿಲಿಯನ್ ಹಾದಿ ತೋರಿಸಿದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲೊ 471 ರನ್ ಕಲೆಹಾಕಿತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ 465 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 90 ರನ್ ಕಲೆಹಾಕಿದೆ.

ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ

ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್

ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ

ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
