ಫಸ್ಟ್ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ
Rashmika Mandanna: ರಶ್ಮಿಕಾ ಮಂದಣ್ಣ ಅವರು ‘ಕುಬೇರ’ ಚಿತ್ರದ ಪ್ರಚಾರದ ವೇಳೆ ತಮ್ಮ ಮೊದಲ ಪ್ರೀತಿ ಬಗ್ಗೆ ಹೇಳಿದ್ದರು. ಇದರ ಜೊತೆಗೆ ಮೊದಲ ಕಾರಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮೊದಲ ಪ್ರೀತಿ ಶಾಲಾ ದಿನಗಳಲ್ಲಿ ಆಗಿತ್ತೆಂದು ಅವರು ಹೇಳಿದ್ದಾರೆ .

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಧನುಶ್ ಜೊತೆ ಸೇರಿ ‘ಕುಬೇರ’ ಹೆಸರಿನ ಸಿನಿಮಾ ಮಾಡಿದ್ದು, ಈ ಚಿತ್ರ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದನ್ನು ನೀವು ಕಾಣಬಹುದು. ಅವರು ವಿವರಿಸಿದ ಸಂಗತಿಗಳು ಹಲವು. ಅದರಲ್ಲಿ ಎಲ್ಲಾ ಮೊದಲುಗಳ ಬಗ್ಗೆ ಅವರು ಮಾತನಾಡಿದ್ದರು.
ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ. ಅವರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆಯಾದರೂ ಈ ವಿಚಾರವನ್ನು ಅವರು ಸ್ಪಷ್ಟವಾಗಿ ಹೇಳಿಲ್ಲ. ಈಗ ರಶ್ಮಿಕಾ ಮಂದಣ್ಣ ಅವರು ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ‘ಕುಬೇರ’ ಸಿನಿಮಾದ ಈವೆಂಟ್ನಲ್ಲಿ ಈ ಎಲ್ಲಾ ವಿಚಾರಗಳನ್ನು ಅವರು ಹೇಳಿದರು.
ರಶ್ಮಿಕಾ ಅವರು ಮೊದಲು ಖರೀದಿಸಿದ ಕಾರು ಎಂದರೆ ಅದು ‘ಸ್ಯಾಂಟ್ರೋ’. ಈ ವಿಚಾರವನ್ನು ಅವರು ರಿವೀಲ್ ಮಾಡಿದರು. ಸಿನಿಮಾದಲ್ಲಿ ನಟಿಸಲು ಆರಂಭಿಸಿದ ಬಳಿಕ ಅವರು ಖರೀದಿಸಿದ ಮೊದಲ ಕಾರು ಎಂದರೆ ಅದು ಆಡಿ ಕ್ಯೂ 3. ಇದರಲ್ಲಿ ಅವರು ರೈಡ್ ಮಾಡಿದ್ದರ ವಿಡಿಯೋ ಈ ಮೊದಲು ವೈರಲ್ ಆಗಿತ್ತು.
View this post on Instagram
ರಶ್ಮಿಕಾ ಅವರ ಮೊದಲ ಲವ್ ಆಗಿದ್ದು ಕಾಲೇಜು ದಿನಗಳಲ್ಲೇ. ‘ಮೊದಲ ಕಾರು ಸ್ಯಾಂಟ್ರೋ. ಶಾಲಾ ದಿನಗಳಲ್ಲೇ ಮೊದಲ ಲವ್ ಆಯ್ತು. ಶಾಲಾ ದಿನಗಳಲ್ಲೇ ಪ್ರೀತಿ ಆಯ್ತು. ಮೊದಲ ಲೆಟರ್ ಬಂದಿದ್ದು ಕೂಡ ಆಗಲೇ’ ಎಂದುರ ರಶ್ಮಿಕಾ ಹೇಳಿದರು.
ಇದನ್ನೂ ಓದಿ: ನಾಗಾರ್ಜುನ, ಚಿರಂಜೀವಿಗೆ ರಶ್ಮಿಕಾ ಮಂದಣ್ಣ ಮೇಲೆ ಉಂಟಾಯ್ತು ಕ್ರಶ್
ರಶ್ಮಿಕಾ ಮಂದಣ್ಣ ಅವರು ‘ಕಿರಿಕ್ ಪಾರ್ಟಿ’ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಈ ನಿಶ್ಚಿತಾರ್ಥ ಮುರಿದು ಬಿತ್ತು. ಆ ಬಳಿಕ ರಕ್ಷಿತ್ ಆಗಲಿ, ರಶ್ಮಿಕಾ ಆಗಲಿ ಮದುವೆ ಆಗಿಲ್ಲ. ರಕ್ಷಿತ್ ಅವರು ಸದ್ಯ ಹೆಚ್ಚು ಸುದ್ದಿಯಲ್ಲಿ ಇಲ್ಲ. ಆದರೆ, ರಶ್ಮಿಕಾ ಅವರು ವಿಜಯ್ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರು ಏರ್ಪೋರ್ಟ್ನಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದರು. ಅವರ ನಟನೆಯ ‘ಕುಬೇರ’ ಸಿನಿಮಾ ಯಶಸ್ಸು ಕಂಡಿದೆ. ಈ ಸಿನಿಮಾ ಸೋಮವಾರ 6.50 ಕೋಟಿ ರೂಪಾಯಿ ಕಲೆಕ್ಷನ್ ಹಾಕಿದ್ದು, ಚಿತ್ರದ ಗಳಿಕೆ 55.10 ಕೋಟಿ ರೂಪಾಯಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Tue, 24 June 25







