ನಾಗಾರ್ಜುನ, ಚಿರಂಜೀವಿಗೆ ರಶ್ಮಿಕಾ ಮಂದಣ್ಣ ಮೇಲೆ ಉಂಟಾಯ್ತು ಕ್ರಶ್
ಕುಬೇರ ಚಿತ್ರದ ಯಶಸ್ವಿ ಬಿಡುಗಡೆಯ ನಂತರ, ನಾಗಾರ್ಜುನ ಮತ್ತು ಚಿರಂಜೀವಿ ಅವರು ರಶ್ಮಿಕಾ ಮಂದಣ್ಣ ಅವರ ಅಭಿನಯವನ್ನು ಪ್ರಶಂಸಿಸಿದ್ದಾರೆ. ರಶ್ಮಿಕಾ ಅವರ ಪಾತ್ರದ ಪ್ರಾಮುಖ್ಯತೆ ಮತ್ತು ಅವರ ಅದ್ಭುತ ನಟನೆಯನ್ನು ಎತ್ತಿ ತೋರಿಸಲಾಗಿದೆ. ನಾಗಾರ್ಜುನ ಅವರು ರಶ್ಮಿಕಾ ಅವರನ್ನು "ಕ್ಷಣ ಕ್ಷಣಂ" ಚಿತ್ರದ ಶ್ರೀದೇವಿಯೊಂದಿಗೆ ಹೋಲಿಸಿದ್ದಾರೆ.

ನಿರ್ದೇಶಕ ಶೇಖರ್ ಕಮ್ಮುಲ ಅವರ ಚಿತ್ರಗಳು ತೆಲುಗು ಚಲನಚಿತ್ರೋದ್ಯಮದಲ್ಲಿ ವಿಶಿಷ್ಟ ಶೈಲಿಯನ್ನು ಹೊಂದಿವೆ. ಅವರು ಪ್ರೇಕ್ಷಕರ ಹೃದಯಗಳನ್ನು ಮುಟ್ಟುವ ಕಥೆಗಳನ್ನು ಬೆಳ್ಳಿತೆರೆಗೆ ತರುತ್ತಾರೆ. ಆದರೆ ಈಗ, ಅವರ ಸಾಮಾನ್ಯ ಚಿತ್ರಗಳಿಗಿಂತ ಭಿನ್ನವಾಗಿ, ಅವರು ‘ಕುಬೇರ’ (Kubera) ಸಿನಿಮಾ ಮಾಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ, ಕಾಲಿವುಡ್ ನಾಯಕ ಧನುಷ್ ಮತ್ತು ರಾಷ್ಟ್ರೀಯ ಕ್ರಶ್ ರಶ್ಮಿಕಾ ಮಂದಣ್ಣ ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 20 ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ, ಎಲ್ಲರ ನಟನೆ ಅದ್ಭುತವಾಗಿದೆ ಎಂದು ಪ್ರಶಂಸಿಸಲಾಗುತ್ತಿದೆ. ಚಿತ್ರತಂಡವು ಈ ಚಿತ್ರಕ್ಕಾಗಿ ಯಶಸ್ಸಿನ ಸಭೆಯನ್ನು ಆಯೋಜಿಸಿತ್ತು. ಈ ಸಮಾರಂಭಕ್ಕೆ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡವನ್ನು ಅಭಿನಂದಿಸಿದರು. ಈ ವೇಳೆ ರಶ್ಮಿಕಾ ಅವರನ್ನು ನಾಗಾರ್ಜುನ ಹಾಗೂ ಚಿರಂಜೀವಿ ಹೊಗಳಿದರು.
‘ಕುಬೇರ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಸಮೀರಾ ಹೆಸರಿನ ಪಾತ್ರವನ್ನು ಮಾಡಿದ್ದಾರೆ. ಈ ಪಾತ್ರ ಸರಳ ಹಾಗೂ ಮುಖ್ಯವಾಗಿದೆ. ಈ ಸಿನಿಮಾ ಮುಂದಕ್ಕೆ ಸಾಗಿದಂತೆ ಅವರ ಪಾತ್ರವು ಪ್ರಬಲವಾಗುತ್ತಾ ಹೋಗುತ್ತದೆ. ರಶ್ಮಿಕಾನ ಬಾಯ್ತುಂಬ ಹೊಗಳಿದ ನಾಗಾರ್ಜುನ, ‘ರಶ್ಮಿಕಾ ಅವರನ್ನು ತೆರೆಮೇಲೆ ನೋಡಿದಾಗ ನನಗೆ ಕ್ಷಣ ಕ್ಷಣಂ ಸಿನಿಮಾದ ಶ್ರೀದೇವಿ ನೆನಪಾದರು’ ಎಂದರು.
“Watching #Rashmika on screen reminded me of Sridevi Garu from Kshana Kshanam.”
— #Nagarjuna | #Kuberaa pic.twitter.com/Q6ro3XHGo8
— Movies4u Official (@Movies4u_Officl) June 22, 2025
#RashmikaMandanna is my Crush also – #Chiranjeevi #Nagarjuna #Kuberaa #TeluguFilmNagar https://t.co/0RF4lXngsr pic.twitter.com/CmiIQleqdX
— Telugu FilmNagar (@telugufilmnagar) June 22, 2025
‘ನಿಮಗೆ ನ್ಯಾಷನಲ್ ಕ್ರಶ್ ಎಂಬ ಹೆಸರು ಹೇಗೆ ಬಂತು? ಪುಷ್ಪ ಚಿತ್ರದ ಕಾರಣದಿಂದ ಬಂತಾ? ಅವರನ್ನು ನ್ಯಾಷನಲ್ ಕ್ರಶ್ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ. ಈ ಚಿತ್ರದಿಂದಾಗಿ ಅವರು ನನ್ನ ಕ್ರಶ್ ಕೂಡ ಆದರು. ಚಿತ್ರದಲ್ಲಿ ನೀವು ತುಂಬಾ ಸುಂದರವಾಗಿ ಕಾಣಿಸಿದ್ದೀರಿ’ ಎಂದು ಹೊಗಳಿದರು ನಾಗಾರ್ಜುನ.
ಇದನ್ನೂ ಓದಿ: ‘ಕುಬೇರ’ ಸೆಟ್ನ ವಿಶೇಷ ಚಿತ್ರಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ
ಚಿರಂಜೀವಿ ಕೂಡ ಇದೇ ಮಾತನ್ನು ಹೇಳಿದರು. ‘ನಾಗಾರ್ಜುನ ಅವರೇ ನೀವು ನನ್ನ ಮಾತನ್ನು ಹೇಳಿದ್ದೀರಿ. ಅವರು ನನ್ನ ಕ್ರಶ್ ಕೂಡ ಹೌದು. ಆದರೆ, ಅದನ್ನು ನಾನು ಹೇಳಲ್ಲ’ ಎಂದು ಬಾಯ್ತುಂಬ ಹೊಗಳಿದರು. ರಶ್ಮಿಕಾನ ನಾಗಾರ್ಜುನ ಹೊಗಳಿದ್ದು ಇದು ಮೊದಲ ಬಾರಿಯಲ್ಲ. ನಾಗಾರ್ಜುನ ಅವರು ಈ ಹಿಂದೆಯೂ ರಶ್ಮಿಕಾ ಮಂದಣ್ಣ ಅವರನ್ನು ಹೊಗಳಿ, ಅವರ ಪ್ರತಿಭೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ‘ಕಳೆದ ಮೂರು ವರ್ಷಗಳಲ್ಲಿ ಅವರ ಸಿನಿಮಾ ಪ್ರಯಾಣ ಪ್ರಭಾವಶಾಲಿಯಾಗಿದೆ. ಉಳಿದ ಯಾವ ಕಲಾವಿದರೂ ಅವರಂತೆ 2000-3000 ಕೋಟಿ ರೂಪಾಯಿ ಮೌಲ್ಯದ ಚಲನಚಿತ್ರಗಳನ್ನು ಹೊಂದಿಲ್ಲ’ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







