‘ಕುಬೇರ’ ಸೆಟ್ನ ವಿಶೇಷ ಚಿತ್ರಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ
Rashmika Mandanna: ನಟಿ ರಶ್ಮಿಕಾ ಮಂದಣ್ಣ, ಧನುಶ್ ಹಾಗೂ ನಾಗಾರ್ಜುನ ಜೊತೆ ನಟಿಸಿರುವ ‘ಕುಬೇರ’ ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಸಿನಿಮಾ ದಿನದಿಂದ ದಿನಕ್ಕೆ ಕಲಕ್ಷನ್ ಉತ್ತಮಪಡಿಸಿಕೊಳ್ಳುತ್ತಿದೆ. ರಶ್ಮಿಕಾ ಈ ಹಿಂದೆಯೂ ಹೇಳಿಕೊಂಡಿರುವಂತೆ ಅವರ ಪಾಲಿಗೆ ಇದು ವಿಶೇಷ ಸಿನಿಮಾ. ಇದೀಗ ರಶ್ಮಿಕಾ ಅವರು ‘ಕುಬೇರ’ ಸಿನಿಮಾ ಶೂಟಿಂಗ್ನ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Updated on: Jun 22, 2025 | 7:43 AM

ಮೊದಲಿಗೆ ನಿರ್ದೇಶಕ ಶೇಖರ್ ಕಮ್ಮುಲ ಅವರ ಪ್ರತಿಭೆಯನ್ನು ಕೊಂಡಾಡಿರುವ ರಶ್ಮಿಕಾ, ಶೇಖರ್ ಕಮ್ಮುಲ ಅವರು ಬಹಳ ಭಿನ್ನ ನಿರ್ದೇಶಕರು, ಅವರು ಸಮೀರಾ (ರಶ್ಮಿಕಾ ಪಾತ್ರದ ಹೆಸರು) ಕಟ್ಟಿಕೊಟ್ಟಿರುವ ರೀತಿ, ನನ್ನಿಂದ ನಟನೆ ತೆಗೆಸಿದ ರೀತಿಯೇ ಭಿನ್ನವಾಗಿತ್ತು ಎಂದಿದ್ದಾರೆ.

ಶೇಖರ್ ಕಮ್ಮುಲ ಅವರೊಟ್ಟಿಗೆ ಕೆಲಸ ಮಾಡಬೇಕು ಎಂಬುದು ನನ್ನ ಬಹು ವರ್ಷದ ಆಸೆಯಾಗಿತ್ತು. ‘ಕುಬೇರ’ ಸಿನಿಮಾವನ್ನು ಒಪ್ಪಿಕೊಳ್ಳಲು ಕಮ್ಮು ಅವರು ಮೊದಲ ಕಾರಣವಾಗಿದ್ದರು. ಸಂಪೂರ್ಣವಾಗಿ ನಾನು ಅವರಿಗೆ ಸರೆಂಡರ್ ಆಗಿ ಅವರು ಹೇಳಿದಂತೆ ನಟಿಸಿದ್ದೇನೆ ಎಂದಿದ್ದಾರೆ.

ಧನುಶ್ ಅವರಂಥಹಾ ನಟರು ಎದುರು ಇದ್ದಾಗ ನೀವು ನಿಮ್ಮ ಸಂಪೂರ್ಣ 100% ಅನ್ನು ನೀಡಲೇ ಬೇಕಾಗುತ್ತದೆ. ಈಗ ನಾನು ಅದನ್ನೇ ಮಾಡಿದ್ದೇನೆ. ದೇವ ಎದುರು ಸಮೀರಾ ಆಗಿ ನಟಿಸಲು ನಾನು ಅದೃಷ್ಟ ಮಾಡಿದ್ದೇನೆ ಎಂದಿದ್ದಾರೆ.

ನೀವು ಅದ್ಭುತ ನಟರೊಟ್ಟಿಗೆ ಕೆಲಸ ಮಾಡಿದಾಗ ಹೆಚ್ಚು ಹೆಚ್ಚು ಕಲಿಯುವ ಅವಕಾಶದ ಜೊತೆಗೆ ಪ್ರತಿ ದೃಶ್ಯದಲ್ಲಿಯೂ ಅದ್ಭುತ ಪ್ರದರ್ಶನವನ್ನೇ ನೀಡುವ ದೊಡ್ಡ ಜವಾಬ್ದಾರಿಯೂ ಸಹ ನಿಮ್ಮದಾಗುತ್ತದೆ. ಧನುಶ್ ಜೊತೆ ನಟಿಸಿದಾಗ ನನಗೆ ಇದೇ ಆಗಿದ್ದು ಎಂದಿದ್ದಾರೆ.

ನಾಗಾರ್ಜುನ ಅವರ ಪ್ರತಿಭೆ ಹಾಗೂ ಅವರ ವ್ಯಕ್ತಿತ್ವವವನ್ನು ಕೆಲವು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಅವರೊಬ್ಬ ಅದ್ಭುತ ವ್ಯಕ್ತಿ, ನಮ್ಮಂಥಹಾ ಹಲವಾರು ಜನರಿಗೆ ಸ್ಪೂರ್ತಿ ನಾಗಾರ್ಜುನ ಅವರು ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಸಿನಿಮಾದ ನಿರ್ದೇಶಕರ ತಂಡ, ಕ್ಯಾಮೆರಾ ತಂಡ, ಕಾಸ್ಟ್ಯೂಮ್ ತಂಡ, ಮೇಕಪ್ ತಂಡ ಎಲ್ಲರ ಶ್ರಮ ಹಾಗೂ ಗೆಳೆತನವನ್ನು ಕೊಂಡಾಡಿದ್ದಾರೆ. ಎಲ್ಲರೊಟ್ಟಿಗೂ ಕಳೆದ ಕ್ಷಣಗಳು ನೆನಪುಳಿಯಲಿವೆ ಎಂದಿದ್ದಾರೆ.

ಸಿನಿಮಾದ ನಿರ್ಮಾಪಕರಾದ ಜಾನ್ಹವಿ ನಾರಂಗ್ ಮತ್ತು ಏಶಿಯನ್ ಸುನಿಲ್ ನಾರಂಗ್ ಅವರನ್ನು ಸಹ ಕೊಂಡಾಡಿದ್ದು, ಅವರ ದೂರದೃಷ್ಟಿಗೆ ಭೇಷ್ ಎಂದಿದ್ದಾರೆ.




