ಕಾನ್ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್ನಲ್ಲೂ ಟ್ವಿಸ್ಟ್
Kerala Crime Files Season 2: ‘ಕೇರಳ ಕ್ರೈಮ್ ಫೈಲ್ಸ್ ಸೀಸನ್ 2’ ಇತ್ತೀಚೆಗೆ ರಿಲೀಸ್ ಆಗಿದೆ. ಮಲಯಾಳಂ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರೀಕ್ಷಿತ ಟ್ವಿಸ್ಟ್‌ಗಳಿಂದ ಕೂಡಿದ ಈ ಸೀರಿಸ್‌ನ ಕ್ಲೈಮ್ಯಾಕ್ಸ್ ನಿರಾಸೆ ಮೂಡಿಸಬಹುದ. ಅಜು ವರ್ಗೀಸ್ ಮತ್ತು ಅರ್ಜುನ್ ರಾಧಾಕೃಷ್ಣನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಒಟಿಟಿಯಲ್ಲಿ (OTT) ಪ್ರತಿ ವಾರ ಹೊಸ ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್ಗಳು ರಿಲೀಸ್ ಆಗುತ್ತಲೇ ಇರುತ್ತವೆ. ಆದರೆ, ಯಾವುದನ್ನು ನೋಡಬೇಕು ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಏಕೆಂದರೆ ಸರಣಿ/ಸಿನಿಮಾನ ನೋಡಿ ನಿರಾಸೆ ಆದರೆ ಸಮಯವೆಲ್ಲ ವ್ಯರ್ಥ. ಆದರೆ, ನಾವು ಈಗ ಒಂದು ಹೊಸ ವೆಬ್ ಸೀರಿಸ್‌ನ ಹೇಳುತ್ತಿದ್ದೇವೆ. ಜೂನ್ 20ರಂದು ಈ ಸರಣಿ ಪ್ರಸಾರ ಆರಂಭಿಸಿದೆ. ಹಾಗಾದರೆ ಯಾವುದು ಆ ಸೀರಿಸ್? ಆ ಬಗ್ಗೆ ಇಲ್ಲಿದೆ ವಿವರ.
‘ಕೇರಳ ಕ್ರೈಮ್ ಫೈಲ್ಸ್’ 2023ರ ಜೂನ್ ತಿಂಗಳಲ್ಲಿ ಪ್ರಸಾರ ಕಂಡಿತ್ತು. ಇದಾಗಿ ಸರಿಯಾಗಿ ಎರಡು ವರ್ಷ ಅಂದರೆ 2025ರ ಜೂನ್ ತಿಂಗಳಲ್ಲೇ ಈ ಸರಣಿಗೆ ಎರಡನೇ ಸೀಸನ್ ಪ್ರಸಾರ ಕಂಡಿದೆ. ಈ ವೆಬ್ ಸೀರಿಸ್ನಲ್ಲಿ ಕಾನ್ಸ್ಟೇಬಲ್ ಅಂಬಲಿ ರಾಜು (ಇಂದ್ರನ್ಸ್ ) ಹಾಗೂ ಅಯ್ಯಪ್ಪನ್ (ಹರಿಶ್ರೀ ಅಶೋಕನ್) ಕಾಣೆ ಆಗುತ್ತಾರೆ. ಅಂಬಲಿ ರಾಜು ತುಂಬಾನೇ ನಿಷ್ಠಾವಂತ ವ್ಯಕ್ತಿ. ಅಯ್ಯಪ್ಪನ್ ಡಾಗ್ ಶೆಲ್ಟರ್ನಲ್ಲಿ ಕೆಲಸ ಮಾಡಿಕೊಂಡಿದ್ದವನು. ಇವರ ಕಾಣೆ ಹಿಂದಿನ ರಹಸ್ಯವೇನು? ಇವರು ಕೊನೆಯಲ್ಲಿ ಜೀವಂತವಾಗಿ ಸಿಗುತ್ತಾರಾ ಅನ್ನೋದನ್ನು ಸರಣಿ ನೋಡಿಯೇ ತಿಳಿದುಕೊಳ್ಳಬೇಕು.
ಮೊದಲ ಸರಣಿಯಲ್ಲಿ ಅಜು ವರ್ಗೀಸ್ ಅವರು ಎಸ್ಐ ಮನೋಜ್ ಶ್ರೀಧರನ್ ಹೆಸರಿನ ಪಾತ್ರ ಮಾಡಿದ್ದರು. ಅವರು ಎರಡನೇ ಪಾರ್ಟ್ನಲ್ಲೂ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ರಾಧಾಕೃಷ್ಣನ್ ಅವರಿಗೆ ಈ ಸರಣಿಯಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಸರಣಿ ಉದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಎಸ್ಐ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದ ಸಿನಿಮಾಗಳು ಯಾವುವು: ಇಲ್ಲಿದೆ ಪಟ್ಟಿ
ಈ ವೆಬ್ ಸೀರಿಸ್ನಲ್ಲಿ ಹಲವು ಟ್ವಿಸ್ಟ್ಗಳಿವೆ. ಪ್ರತಿ ಎಪಿಸೋಡ್ ಕೊನೆ ಆಗುವಾಗಲೂ ಒಂದಷ್ಟು ಹೊಸ ವಿಚಾರಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ, ಸರಣಿಯ ಕ್ಲೈಮ್ಯಾಕ್ಸ್ ನೀವಂದುಕೊಡಂತೆ ಇರದೇ ಇರಬಹುದು. ಹೀಗಾಗಿ, ಕೆಲವರಿಗೆ ಈ ಬಗ್ಗೆ ಬೇಸರ ಆಗಿದ್ದಿದೆ. ನಿರ್ದೇಶಕ ಅಹ್ಮದ್ ಕಬೀರ್ ಅವರು ಹೊಸ ರೀತಿಯ ಪ್ರಯೋಗ ಮಾಡಲು ಈ ರೀತಿ ಮಾಡಿರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








