ಬಿರುಗಾಳಿ ಬ್ಯಾಟಿಂಗ್… 9 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಫೆರೈರ
Donovan Ferreira: 9 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಡೊನಾವನ್ ಫೆರೈರ ಅಜೇಯ 37 ರನ್ ಬಾರಿಸಿದರು. ಈ 37 ರನ್ಗಳಲ್ಲಿ 28 ರನ್ ಕಲೆಹಾಕಿದ್ದು ಕೊನೆಯ ಓವರ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಡೊನಾವನ್ ಫೆರೈರ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಸ್ಕೋರ್ ಅನ್ನು 5 ಓವರ್ಗಳಲ್ಲಿ 87 ಕ್ಕೆ ತಂದು ನಿಲ್ಲಿಸಿದರು.
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 22ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಮಳೆ ಹಿನ್ನಲೆಯಲ್ಲಿ 5 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ಫ್ರೀಡಂ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 3 ಓವರ್ಗಳಲ್ಲಿ ಕೇವಲ 34 ರನ್ಗಳು ಮಾತ್ರ.
ಆದರೆ ಈ ಹಂತದಲ್ಲಿ 5 ಎಸೆತಗಳಲ್ಲಿ 6 ರನ್ ಕಲೆಹಾಕಿದ್ದ ಡೇರಿಲ್ ಮಿಚೆಲ್ ಅವರನ್ನು ರಿಟೈರ್ಡ್ ಮಾಡುವ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ಡೊನಾವನ್ ಫೆರೈರ ಅವರನ್ನು ಕಣಕ್ಕಿಳಿಸಿದ್ದರು. ಅದರಂತೆ ಕೊನೆಯ ಎರಡು ಓವರ್ಗಳಲ್ಲಿ 9 ಎಸೆತಗಳನ್ನು ಎದುರಿಸಿದ ಫೆರೈರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಅಂತಿಮ 9 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಡೊನಾವನ್ ಫೆರೈರ ಅಜೇಯ 37 ರನ್ ಬಾರಿಸಿದರು. ಈ 37 ರನ್ಗಳಲ್ಲಿ 28 ರನ್ ಕಲೆಹಾಕಿದ್ದು ಕೊನೆಯ ಓವರ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಡೊನಾವನ್ ಫೆರೈರ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಸ್ಕೋರ್ ಅನ್ನು 5 ಓವರ್ಗಳಲ್ಲಿ 87 ಕ್ಕೆ ತಂದು ನಿಲ್ಲಿಸಿದರು.
ಅದರಂತೆ 88 ರನ್ಗಳ ಗುರಿ ಪಡೆದ ವಾಷಿಂಗ್ಟನ್ ಫ್ರೀಡಂ ತಂಡವು 5 ಓವರ್ಗಳಲ್ಲಿ 44 ರನ್ಗಳಿಸಲಷ್ಟೇ ಶಕ್ತರಾದರು. ಇತ್ತ ಕೊನೆಯ 9 ಎಸೆತಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಡೊನಾವನ್ ಫೆರೈರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
