ಭಾರತಕ್ಕೆ ಸೇವೆ ಸಲ್ಲಿಸಿದ್ದ ಕಮಲಾ ಹ್ಯಾರಿಸ್ ತಾತ! ಹಲವು ಬಾರಿ ಭಾರತಕ್ಕೆ ಬಂದಿದ್ದ ಕಮಲಾ..

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಜೊತೆಗೆ ಜೋರಾಗೇ ಕೇಳಿ ಬರುತ್ತಿರುವ ಹೆಸರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರದು. ಕಮಲಾ ಭಾರತೀಯ ಮೂಲದವರು, ಅವರ ತಾಯಿ ಶ್ಯಾಮಲಾ ಗೋಪಾಲನ್ ತಮಿಳುನಾಡಿನವರು ಎಂಬುದು ಹಲವರು ತಿಳಿದಿರಬಹುದಾದ ವಿಚಾರ. ಕಮಲಾ ಕುರಿತು ಭಾರತೀಯರು ತಿಳಿದುಕೊಳ್ಳಬೇಕಾದ ಮತ್ತಷ್ಟು ವಿಷಯಗಳಿವೆ. ಅದರಲ್ಲಿ ಪ್ರಮುಖವಾದದ್ದು ಕಮಲಾ ತಾತ ಪಿ.ವಿ. ಗೋಪಾಲನ್ ಅವರು ಭಾರತಕ್ಕೆ ಸೇವೆ ಸಲ್ಲಿಸಿರುವ ವಿಚಾರಗಳು. ಕಮಲಾ ಹ್ಯಾರಿಸ್ ತಾತ ಪೈಂಗನಾಡು ವೆಂಕಟರಮಣ್ ಗೋಪಾಲನ್ ಅವರು 1911ರಲ್ಲಿ ಬ್ರಿಟೀಷ್ ಭಾರತದ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ […]

ಭಾರತಕ್ಕೆ ಸೇವೆ ಸಲ್ಲಿಸಿದ್ದ ಕಮಲಾ ಹ್ಯಾರಿಸ್ ತಾತ! ಹಲವು ಬಾರಿ ಭಾರತಕ್ಕೆ ಬಂದಿದ್ದ ಕಮಲಾ..
Follow us
ಸಾಧು ಶ್ರೀನಾಥ್​
|

Updated on: Nov 09, 2020 | 3:41 PM

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಜೊತೆಗೆ ಜೋರಾಗೇ ಕೇಳಿ ಬರುತ್ತಿರುವ ಹೆಸರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರದು. ಕಮಲಾ ಭಾರತೀಯ ಮೂಲದವರು, ಅವರ ತಾಯಿ ಶ್ಯಾಮಲಾ ಗೋಪಾಲನ್ ತಮಿಳುನಾಡಿನವರು ಎಂಬುದು ಹಲವರು ತಿಳಿದಿರಬಹುದಾದ ವಿಚಾರ. ಕಮಲಾ ಕುರಿತು ಭಾರತೀಯರು ತಿಳಿದುಕೊಳ್ಳಬೇಕಾದ ಮತ್ತಷ್ಟು ವಿಷಯಗಳಿವೆ. ಅದರಲ್ಲಿ ಪ್ರಮುಖವಾದದ್ದು ಕಮಲಾ ತಾತ ಪಿ.ವಿ. ಗೋಪಾಲನ್ ಅವರು ಭಾರತಕ್ಕೆ ಸೇವೆ ಸಲ್ಲಿಸಿರುವ ವಿಚಾರಗಳು.

ಕಮಲಾ ಹ್ಯಾರಿಸ್ ತಾತ ಪೈಂಗನಾಡು ವೆಂಕಟರಮಣ್ ಗೋಪಾಲನ್ ಅವರು 1911ರಲ್ಲಿ ಬ್ರಿಟೀಷ್ ಭಾರತದ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಬ್ರಿಟೀಷ್ ಆಳ್ವಿಕೆಯ ಸಂದರ್ಭ ಇಂಪೀರಿಯಲ್ ಸೆಕ್ರೆಟರಿಯೆಟ್ ಸರ್ವೀಸ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಸೆಂಟ್ರಲ್ ಸೆಕ್ರೆಟರಿಯೆಟ್ ಸರ್ವೀಸ್ ನಲ್ಲಿ ತೊಡಗಿಸಿಕೊಂಡಿದ್ದ ಅವರು, 1950ರಲ್ಲಿ ಭಾರತ ಸರ್ಕಾರದ ಭೂ ಸಾರಿಗೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು.

ನಂತರ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ನಿರಾಶ್ರಿತರ ಪುನರ್ವಸತಿ ಕಾರ್ಯಕ್ಕಾಗಿ ಭಾರತದಲ್ಲಿ ಸೇವೆ ಸಲ್ಲಿಸಿದರು. ಹೀಗೆ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ, ಭಾರತ ಸರ್ಕಾರದ ಕಾರ್ಮಿಕ, ಉದ್ಯೋಗ ಮತ್ತು ಪುನರ್ವಸತಿ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಶ್ರಮಿಸಿದರು. ಬಳಿಕ ದಕ್ಷಿಣ ಆಫ್ರಿಕಾ ಭಾಗದ ಜಾಂಬಿಯಾ ಎಂಬ ದೇಶದಲ್ಲಿ ಈಗಿನ ಜಿಂಬಾಬ್ವೆಯ ನಿರಾಶ್ರಿತರ ಮತ್ತು ಅವರ ಪರಿಹಾರ ಯೋಜನೆಗಳ ನಿರ್ದೇಶಕರಾಗಿ ದುಡಿದರು. ಬಳಿಕ 1998ರಲ್ಲಿ ತಮಿಳುನಾಡಿನಲ್ಲಿ ನಿಧನ ಹೊಂದಿದರು.

ಈಗ ಅಮೆರಿಕದ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್, ಇದೇ ಪಿ.ವಿ. ಗೋಪಾಲನ್ ಅವರ ಹಿರಿಯ ಪುತ್ರಿ ಶ್ಯಾಮಲಾ ಗೋಪಾಲನ್ ಮಗಳು. ಈ ಹಿನ್ನೆಲೆಯಲ್ಲಿ ತವರಿನ ನಂಟು ಕಮಲಾಗೆ ಇರುವುದು ಭಾರತಕ್ಕೆ ಧನಾತ್ಮಕ ಅಂಶವಾಗಿ ಕಾಣಿಸಿಕೊಂಡಿದೆ.

ಬಾಲ್ಯದಲ್ಲಿ ಹಿಂದೂ ದೇವಾಲಯಕ್ಕೂ ಹೋಗುತ್ತಿದ್ದರಂತೆ ಕಮಲಾ ಹ್ಯಾರಿಸ್! ಕಮಲಾ ಹ್ಯಾರಿಸ್ ತನ್ನ ಬಾಲ್ಯದಲ್ಲಿ ಹಲವು ಬಾರಿ ಚೆನ್ನೈಗೆ ಭೇಟಿ ಕೊಟ್ಟಿದ್ದು, ಅಮೆರಿಕದಲ್ಲಿ ತಮ್ಮ ನಿವಾಸದ ಸಮೀಪದ ಹಿಂದೂ ದೇವಾಲಯಕ್ಕೆ ಭೇಟಿ ನೀಡುತ್ತಿದ್ದದ್ದು, ಭಾರತದ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುವ ಸಾಧ್ಯತೆಯನ್ನು ಸೂಚಿಸಿದೆ. ಕಮಲಾ ತಾತ ಗೋಪಾಲನ್ ಅವರು ಭಾರತದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕಾರಣ ಕಮಲಾಗೂ ಭಾರತದ ಮೇಲೆ ಹೆಚ್ಚಿನ ಒಲವು ಇರಬಹುದು ಎಂದು ತಿಳಿಯಬಹುದಾಗಿದೆ. ಒಟ್ಟಿನಲ್ಲಿ ಡೆಮಾಕ್ರಟಿಕ್ ಪಕ್ಷದ ಗೆಲುವು ಭಾರತಕ್ಕೆ ವರವಾಗಿ ಪರಿಣಮಿಸಲಿ, ಭಾರತ-ಅಮೆರಿಕ ಸಂಬಂಧ ಬಲಗೊಳ್ಳಲಿ ಎಂಬ ನಿರೀಕ್ಷೆ ಭಾರತೀಯರದ್ದು.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ