ಮೈಸೂರು: ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಿರುವ ಸ್ಥಳೀಯರು ಹೇಳೋದೇನು?
ರಾಮದಾಸ್ ಸಹೋದರ ಸುರೇಶ್ ಅವರು, ಈ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾದರೆ, ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಉತ್ತರ ಪ್ರದೇಶದ ಉದಾಹರಣೆ ನಮ್ಮ ಮುಂದಿದೆ, ಜನ ಇಲ್ಲಿ ಸಮಾನತೆ ಮತ್ತು ಸಹಬಾಳ್ವೆಯೊಂದಿಗೆ ಜೀವಿಸುತ್ತಿದ್ದಾರೆ, ಮಂದಿರದ ಬದಲು ಇಲ್ಲಿ ದಕ್ಷಿಣದ ನಳಂದ ವಿಶ್ವವಿದ್ಯಾಲಯ ನಿರ್ಮಿಸಲಿ, ಇದರಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತದೆ, ಯೂನಿರ್ವಸಿಟಿ ಸ್ಥಾಪಿಸಲು ಒಂದು ಎಕರೆ ಜಮೀನು ನಾನು ಕೊಡುತ್ತೇನೆ ಎನ್ನುತ್ತಾರೆ.
ಮೈಸೂರು, ಮೇ 24: ಜಿಲ್ಲೆಯ ಜಯಪುರ ಹೋಬಳಿಯಲ್ಲಿರುವ ಹಾರೋಹಳ್ಳಿಯ ರಾಮ್ದಾಸ್ ಅವರ ಜಮೀನಲ್ಲಿ ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಲು ಶಿಲೆ ಸಿಕ್ಕಿದ್ದು ಎಲ್ಲರಿಗೂ ಗೊತ್ತಿದೆ. ಹಾಗಾಗೇ ಅವರು ತಮ್ಮ ಜಮೀನಿನಲ್ಲಿ ದಕ್ಷಿಣದ ರಾಮಮಂದಿರ (South Ram Mandir) ಕಟ್ಟಲು ಉತ್ಸುಕರಾಗಿದ್ದಾರೆ ಮತ್ತು ಅದಕ್ಕೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಕೋರ್ಟ್ ತಡೆಯಾಜ್ಞೆ ನೀಡಿದೆ ಮತ್ತು ರಾಮದಾಸ್ ಅವರ ಸಹೋದರ ಸುರೇಶ್ ಸೇರಿದಂತೆ ಸ್ಥಳೀಯರ ಒಂದು ಗುಂಪು ಮಂದಿರ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ನಮ್ಮ ಮೈಸೂರು ವರದಿಗಾರ ವಿರೋಧ ಮಾಡುತ್ತಿರುವವರ ಜೊತೆ ಮಾತಾಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮತ್ತೊಂದು ಪುಟ್ಟ ರಾಮಲಲ್ಲಾನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್, ಫೋಟೋ ವೈರಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

