IPL 2025: ಇದೇ ಕಾರಣಕ್ಕೆ ಟಿಮ್ ಡೇವಿಡ್ಗೆ ರನ್ನರ್ ನೀಡಲಾಗಿಲ್ಲ..!
IPL 2025 RCB vs SRH: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿದ್ದರು. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19.5 ಓವರ್ಗಳಲ್ಲಿ 189 ರನ್ಗಳಿಸಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 231 ರನ್ ಕಲೆಹಾಕಿದರೆ, ಆರ್ಸಿಬಿ 19.5 ಓವರ್ 189 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಎಸ್ಆರ್ಹೆಚ್ ತಂಡ 42 ರನ್ಗಳ ಜಯ ಸಾಧಿಸಿದೆ.
ಆರ್ಸಿಬಿ ತಂಡದ ಈ ಸೋಲಿಗೆ ಒಂದು ಕಾರಣ ಟಿಮ್ ಡೇವಿಡ್ ಅವರ ಗಾಯ ಎಂದರೂ ತಪ್ಪಾಗಲಾರದು. ಏಕೆಂದರೆ ಈ ಪಂದ್ಯದ ಕೊನೆಯ ಓವರ್ನಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿ ಟಿಮ್ ಡೇವಿಡ್ ಮೈದಾನ ತೊರೆದಿದ್ದರು. ಇದಾಗ್ಯೂ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಅವರು ರನ್ ಓಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿಯೇ ಬಿಗ್ ಹಿಟ್ಗೆ ಯತ್ನಿಸಿ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಅತ್ತ ಓಡಲು ಸಾಧ್ಯವಾಗದೇ ಇದ್ದರೂ, ಟಿಮ್ ಡೇವಿಡ್ಗೆ ರನ್ನರ್ನನ್ನು ಬಳಸಲು ಅನುಮತಿ ನೀಡಿಲ್ಲವೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
2011 ರಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಾಯಗೊಂಡ ಬ್ಯಾಟ್ಸ್‌ಮನ್‌ಗಳಿಗೆ ರನ್ನರ್‌ಗಳನ್ನು ಬಳಸುವುದನ್ನು ಐಸಿಸಿ ನಿಷೇಧಿಸಿದೆ. ಇದೇ ನಿಯಮವನ್ನು ಐಪಿಎಲ್ನಲ್ಲೂ ಪಾಲಿಸಲಾಗುತ್ತಿದೆ.
ರನ್ನರ್ ನಿಯಮದ ದುರುಪಯೋಗ ಮತ್ತು ಬ್ಯಾಟರ್ ಮತ್ತು ಬೌಲರ್‌ಗಳ ನಡುವೆ ನ್ಯಾಯಯುತತೆಯನ್ನು ತರುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ.
ಇದೇ ಕಾರಣದಿಂದಾಗಿ 2011 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇನ್ನಿತರ ಪ್ರಮುಖ ಲೀಗ್ಗಳಲ್ಲಿ ರನ್ನರ್ಗೆ ಅವಕಾಶ ನೀಡಲಾಗುತ್ತಿಲ್ಲ.
ಇತ್ತ ಈ ನಿಯಮವು ಐಪಿಎಲ್ನಲ್ಲೂ ಜಾರಿಯಿರುವ ಕಾರಣ, ಗಾಯಗೊಂಡಿದ್ದರೂ ಟಿಮ್ ಡೇವಿಡ್ಗೆ ರನ್ನರ್ನ ಬಳಸಿಕೊಳ್ಳಲು ಅನುಮತಿ ನೀಡಲಾಗಿಲ್ಲ.