AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೇ ಆತಂಕ ಮೂಡಿಸುತ್ತಿರುವ ಕೊರೋನಾ ಸೋಂಕು, ಮಹಾರಾಷ್ಟ್ರದಲ್ಲಿ ನಿನ್ನೆ 45 ಸೋಂಕಿತರು ಪತ್ತೆ

ಮತ್ತೇ ಆತಂಕ ಮೂಡಿಸುತ್ತಿರುವ ಕೊರೋನಾ ಸೋಂಕು, ಮಹಾರಾಷ್ಟ್ರದಲ್ಲಿ ನಿನ್ನೆ 45 ಸೋಂಕಿತರು ಪತ್ತೆ

ಅರುಣ್​ ಕುಮಾರ್​ ಬೆಳ್ಳಿ
|

Updated on:May 24, 2025 | 11:31 AM

ಜನ ಗಾಬರಿಯಾಗುವ ಅವಶ್ಯಕತತೆಯಿಲ್ಲ ಆದರೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ಸರ್ಕಾರಗಳು ಹೇಳುತ್ತಿವೆ. ಬೆಂಗಳೂರಲ್ಲೂ ಜನ ಎಚ್ಚರದಿಂದ ಇರಬೇಕಾಗಿದೆ ಮತ್ತು ಮಾಸ್ಕ್​ ಧರಿಸಿ ಓಡಾಡುವುದು ಜಾಣ್ಮೆಯ ಕೆಲಸ. ಹಾಂಕಾಂಗ್, ಸಿಂಗಪೂರ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅಲ್ಲಿಂದ ಸ್ವದೇಶಕ್ಕೆ ಹಿಂತಿರುಗುತ್ತಿರುವ ಭಾರತೀಯರು ಸೋಂಕನ್ನು ಹೊತ್ತು ತರುತ್ತಿರುವ ಶಂಕೆಯಿದೆ.

ಬೆಂಗಳೂರು, ಮೇ 24: ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದ ಕೊರೋನಾ ಮಾಹಾಮಾರಿ (Pandemic) ತನ್ನ ಕರಾಳ ಮುಖವನ್ನು ಪುನಃ ಪ್ರದರ್ಶಿಸತೊಡಗಿದೆ. ಲಭ್ಯರುವ ಮಾಹಿತಿ ಪ್ರಕಾರ ನಿನ್ನೆಯೊಂದೇ ದಿನ ಮಹಾರಾಷ್ಟ್ರದಲ್ಲಿ 45 ಜನ ಕೊರೋನಾ ಸೋಂಕಿನಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಕಳೆದ ಜನೆವರಿಯಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 6,891 ಜನರ ಕೊರೋನಾ ಟೆಸ್ಟ್ ನಡೆಸಲಾಗಿದ್ದು 216 ಜನಕ್ಕೆ ಸೋಂಕು ತಗುಲಿರುವುದು ಮತ್ತು ಮೂರು ಜನ ಮಹಾಮಾರಿಗೆ ಬಲಿಯಾಗಿರುವ ಮಾಹಿತಿ ಇದೆ. ದೆಹಲಿ, ಕೇರಳದಲ್ಲೂ ಕೊರೋನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ ಮತ್ತು ಸರ್ಕಾರಗಳು ಮಾರ್ಗಸೂಚಿಯನ್ನು ಜಾರಿಗೊಳಿಸಿವೆ.

ಇದನ್ನೂ ಓದಿ:  MERS Coronavirus: ಇದ್ಯಾವುದೋ ಕೊರೋನಾ ಮತ್ತೆ ವಕ್ಕರಿಸಿಕೊಂಡಿದೆ, ಸೌದಿ ಒಂಟೆಗಳಿಂದ ಸೋಂಕು ಹರಡುತ್ತಿದೆ, ಏನಿದರ ಲಕ್ಷಣಗಳು?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: May 24, 2025 11:30 AM