ಒಂದಾ ನೀವು ಭಯೋತ್ಪಾನೆ ನಾಶ ಮಾಡಬೇಕು, ಇಲ್ಲವೇ ಸಿಂಧೂ ನೀರಿನ ಆಸೆ ಬಿಡಬೇಕು, ವಿಶ್ವಸಂಸ್ಥೆಯಲ್ಲಿ ಪಾಕ್ಗೆ ಭಾರತ ಎಚ್ಚರಿಕೆ
ಭಾರತ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ನಾಟಕ ಮಾಡುತ್ತಿದೆ. ಭಾರತದ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹಾಗೂ ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಗಳು ಹೇಳಿದ್ದಾರೆ. ಸಿಂಧೂ ನದಿ ಒಪ್ಪಂದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಕಿರಿಕ್ ಮಾಡಿದ ಪಾಕ್ಗೆ ಭಾರತ ಸರಿಯಾಗಿ ಉತ್ತರ ನೀಡಿದೆ. ಪಾಕ್ ಮಾಡಿದ ಕರ್ಮಗಳ ಪಟ್ಟಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಪಂಚ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಪ್ರಮುಖ ಸಿಂಧೂ ನದಿ (Indus water treaty) ನೀರನ್ನು ಪಾಕಿಸ್ತಾನ ಬಿಡುವುದನ್ನು ಸ್ಥಗಿತಗೊಳಿಸಿದ್ದು, ಇದೀಗ ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ (UNO) ಪಾಕ್ ತಕರಾರು ಎತ್ತಿದೆ. ಜತೆಗೆ ಭಾರತದ ನಿರ್ಧಾರವನ್ನು ಟೀಕಿಸಿದೆ. ಆದರೆ ಇದಕ್ಕೆ ಭಾರತ ಸರಿಯಾಗಿ ಉತ್ತರವನ್ನು ನೀಡಿದೆ. ಭಾರತ ಪಹಲ್ಗಾಮ್ ಭಯೋತ್ಪಾದಕ ದಾಳಿ ಮಾತ್ರವಲ್ಲದೆ ಅನೇಕ ಉದಾಹರಣೆಗಳನ್ನು ನೀಡಿ. ಹಾಗೂ ಭಯೋತ್ಪಾದನೆ ದಾಳಿ ಭಾರತದ ಜತೆಗೆ ಮಾಡಿಕೊಂಡ ಹಲವು ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತಿಳಿಸಿದೆ. 1960 ರ ನೀರು ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದು ಭಾರತವಲ್ಲ, ಪಾಕಿಸ್ತಾನ ಎಂದು ಹೇಳಿದೆ. ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಿ ನಿಯೋಗ ಅನೇಕ ತಪ್ಪು ಮಾಹಿತಿಯನ್ನು ಹರಡಿದೆ. ಪಾಕ್ ಮಾಡುತ್ತಿರುವ ಆರೋಪಗಳನ್ನು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ತಳ್ಳಿಹಾಕಿದ್ದಾರೆ.
ಭಾರತ ಸಿಂಧೂ ಒಪ್ಪಂದವನ್ನು ಮುರಿದಿಲ್ಲ, ಪಾಕ್ ಮಾಡುತ್ತಿರವ ಭಯೋತ್ಪಾದನ ದಾಳಿಯಿಂದ ಈ ಒಪ್ಪಂದವನ್ನು ಮುರಿದುಕೊಂಡಿದೆ. ಇತ್ತೀಚಿನ ಪಹಲ್ಗಾಮ್ ದಾಳಿಯು ಇತ್ತೀಚಿನ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಭಾರತದ ಮೇಲೆ ಗಡಿಯಾಚೆಗಿನ ಭಯೋತ್ಪಾದನೆ ದಾಳಿಯಿಂದ ಈ ಒಪ್ಪಂದವನ್ನು ಮುರಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಭಾರತವು 65 ವರ್ಷಗಳ ಹಿಂದೆ ಸಿಂಧೂ ನದಿ ಜಲ ಒಪ್ಪಂದವನ್ನು ಮಾಡಿಕೊಂಡಿತ್ತು. ಒಪ್ಪಂದದ ಪೀಠಿಕೆ ಹೇಳುವ ಪ್ರಕಾರ ಈ ಒಪ್ಪಂದವನ್ನು ಸದ್ಭಾವನೆ ಮತ್ತು ಸ್ನೇಹದ ಮನೋಭಾವಗಾಗಿ ಮಾಡಿಕೊಂಡಿತ್ತು. ಆರುವರೆ ದಶಕಗಳಲ್ಲಿ, ಪಾಕಿಸ್ತಾನವು ಭಾರತದ ಮೇಲೆ ಮೂರು ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಒಪ್ಪಂದದ ಮಹತ್ವವನ್ನು ಉಲ್ಲಂಘಿಸಿದೆ.
ಕಳೆದ ನಾಲ್ಕು ದಶಕಗಳಲ್ಲಿ, ಭಯೋತ್ಪಾದಕ ದಾಳಿಯಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ಬಲಿಯಾಗಿದ್ದಾರೆ, ಅದರಲ್ಲಿ ಕಳೆದ ತಿಂಗಳು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಾಗಿದೆ. ಇಸ್ಲಾಮಾಬಾದ್ ಭಾರತದ ವಿರುದ್ಧ ಭಯೋತ್ಪಾದನೆಯನ್ನು ಆಶ್ರಯಿಸಿದ್ದರೂ, ಅಸಾಧಾರಣ ತಾಳ್ಮೆ ಮತ್ತು ಉದಾರತೆಯನ್ನು ತೋರಿಸಿದೆ. ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯು ನಾಗರಿಕರ ಜೀವಗಳು, ಧಾರ್ಮಿಕ ಸಾಮರಸ್ಯ ಮತ್ತು ಆರ್ಥಿಕ ಸಮೃದ್ಧಿಯನ್ನು ಒತ್ತೆಯಾಳುಗಳಾಗಿ ಇರಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
PR @AmbHarishP delivered India’s statement at the Arria Formula Meeting on Protecting Water in Armed Conflict – Protecting Civilian Lives. @MEAIndia @UN pic.twitter.com/SV0wzzW5XS
— India at UN, NY (@IndiaUNNewYork) May 23, 2025
ಭಾರತದ ರಾಯಭಾರಿ ಹರೀಶ್ ಅವರ ಪ್ರಕಾರ, ಪ್ರಾದೇಶಿಕ ಭದ್ರತಾ ಕಾಳಜಿಗಳ ಜೊತೆಗೆ, ಭಾರತದ ಇಂಧನ ಅವಶ್ಯಕತೆಗಳು ಮತ್ತು ಅಣೆಕಟ್ಟು ಸುರಕ್ಷತೆ ಸೇರಿದಂತೆ ಇತರ ಅಂಶಗಳ ಮೇಲೆ ಕೂಡ ಈ ನಿರ್ಧಾರವನ್ನು ನಿರ್ಧಾರಿಸಲಾಗಿದೆ. ಈ 65 ವರ್ಷಗಳಲ್ಲಿ, ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳ ಮೂಲಕ ಭದ್ರತಾ ಕಾಳಜಿಗಳನ್ನು ಹೆಚ್ಚಿಸುವುದರ ಜೊತೆಗೆ, ಶುದ್ಧ ಇಂಧನ ಉತ್ಪಾದನೆ, ಹವಾಮಾನ ಬದಲಾವಣೆ ಮತ್ತು ಜನಸಂಖ್ಯಾ ಬಗ್ಗೆಯೂ ಭಾರತದ ಗಮನ ನೀಡಿದೆ ಎಂದು ಹೇಳಿದ್ದಾರೆ. ಅಣೆಕಟ್ಟು ಮೂಲಸೌಕರ್ಯ ಹಾಗೂ ತಂತ್ರಜ್ಞಾನದಲ್ಲಿನ ಪ್ರಗತಿ, ಅದರ ಸುರಕ್ಷತೆ ಬಗ್ಗೆ ಕಾರ್ಯಚರಣೆ ಮಾಡಬೇಕಿದೆ, ಹಾಗಾಗಿ ದುರಸ್ಥಿ ವಿಚಾರದಲ್ಲೂ ಕೂಡ ನಮಗೆ ಪಾಕ್ ತೊಂದರೆಯನ್ನು ಉಂಟು ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ದೇಶಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ; ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಜರ್ಮನಿ ಬೆಂಬಲ
2012 ರಲ್ಲಿ, ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ತುಲ್ಬುಲ್ ಸಂಚರಣೆ ಯೋಜನೆಯ ಮೇಲೆ ದಾಳಿ ಮಾಡಿದರು. ಈ ಕೃತ್ಯಗಳು ನಮ್ಮ ಯೋಜನೆಗಳ ಸುರಕ್ಷತೆ ಮತ್ತು ನಾಗರಿಕರ ಜೀವಗಳಿಗೆ ಅಪಾಯವನ್ನುಂಟುಮಾಡುತ್ತಲೇ ಇವೆ. ಕಳೆದ ಎರಡು ವರ್ಷಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಒಪ್ಪಂದದ ಮಾರ್ಪಾಡುಗಳ ಕುರಿತು ಚರ್ಚಿಸಲು ಭಾರತ ಪಾಕಿಸ್ತಾನವನ್ನು ಔಪಚಾರಿಕವಾಗಿ ಕೇಳಿದೆ ಎಂದು ಹರೀಶ್ ಹೇಳಿದ್ದಾರೆ. ಪಾಕಿಸ್ತಾನ ಇವುಗಳನ್ನು ತಿರಸ್ಕರಿಸುತ್ತಲೇ ಇತ್ತು. ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿರುವ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವ ವರೆಗೆ ನಾನು ಈ ನಿರ್ಧಾರದಲ್ಲೇ ಇರುತ್ತವೆ ಎಂದು ವಿಶ್ವಸಂಸ್ಥೆಯಲ್ಲಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Sat, 24 May 25








