AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯೋತ್ಪಾದಕರು ಹುಚ್ಚು ನಾಯಿ, ಅದನ್ನು ಸಾಕುವ ಪಾಕ್ ಕೂಡ ನಾಯಿ: ವಿದೇಶದಲ್ಲಿ ಘರ್ಜಿಸಿದ ಅಭಿಷೇಕ್ ಬ್ಯಾನರ್ಜಿ

ಭಾರತದ ಮೇಲೆ ದಾಳಿ ಮಾಡಿ ಅನೇಕ ಭಾರತೀಯರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಜಗತ್ತಿನ ಮುಂದೆ ಅದರ ಸ್ಥಿತಿಯನ್ನು ಬೆತ್ತಲೆ ಮಾಡಲು ಭಾರತ ಪಣತೊಟ್ಟಿದೆ. ಅದಕ್ಕಾಗಿ ಭಾರತದ ಪಕ್ಷ ಬೇಧವಿಲ್ಲದೆ. ತನ್ನ ದೇಶ ಸಂಸದರನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ಕಳುಹಿಸಿ. ಪಾಕಿಸ್ತಾನ ಅನ್ಯಾಯವನ್ನು ಹಾಗೂ ಅದರ ಭಯೋತ್ಪಾದಕ ಕೃತ್ಯಗಳನ್ನು ತಿಳಿಸಲು ಮುಂದಾಗಿದೆ, ಇದೀಗ ಜಪಾನ್​​ನಲ್ಲಿರುವ ನಿಯೋಗದ ಸದಸ್ಯರಾದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪಾಕ್​​ನ್ನು ತರಾಟೆ ತೆಗೆದುಕೊಂಡಿದ್ದಾರೆ.

ಭಯೋತ್ಪಾದಕರು ಹುಚ್ಚು ನಾಯಿ, ಅದನ್ನು ಸಾಕುವ ಪಾಕ್ ಕೂಡ ನಾಯಿ: ವಿದೇಶದಲ್ಲಿ ಘರ್ಜಿಸಿದ ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ
ಅಕ್ಷಯ್​ ಪಲ್ಲಮಜಲು​​
|

Updated on:May 24, 2025 | 2:31 PM

Share

ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಜಾಗತಿಕವಾಗಿ ಧ್ವನಿ ಎತ್ತಲು ಭಾರತ ಸರ್ಕಾರ ಎಲ್ಲ ಪಕ್ಷದ ನಾಯಕರ ಸಹಭಾಗ್ವಿತದಿಂದ ಸಂಸದರ ನಿಯೋಗವನ್ನು ತಮ್ಮ ಮಿತ್ರರಾಷ್ಟ್ರ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಕಳುಹಿಸಿದೆ. ಇದೀಗ ಜಪಾನ್​​​​ಗೆ (Japan) ಭೇಟಿ ನೀಡಿರುವ ಭಾರತದ ನಿಯೋಗದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನ ವಿರುದ್ಧ ಟೀಕಿಸಿದ್ದಾರೆ. ಜಪಾನ್‌ನಲ್ಲಿರುವ ಭಾರತೀಯ ಸಂಸದರ ನಿಯೋಗದ ಪ್ರಮುಖರಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಮಾತನಾಡಿದ್ದಾರೆ. ಭಾರತವು ಯಾರ ಭಯಕ್ಕೂ ಮಣಿಯುವುದಿಲ್ಲ. ಭಯೋತ್ಪಾದನೆಗೆ ತಲೆಬಾಗುವುದಿಲ್ಲ ಎಂದು ಹೇಳಿದರು. ಇದಕ್ಕಾಗಿ ಭಯೋತ್ಪಾದನೆಯನ್ನು ಎದುರಿಸಲು ಜಗತ್ತು ಒಟ್ಟಾಗಿ ಸೇರುವ ಅಗತ್ಯವಿದೆ ಎಂದರು.

ಭಾರತ ಪಾಕಿಸ್ತಾನದ ಮುಂದೆ ತಲೆಬಾಗುವುದಿಲ್ಲ, ನಿಮ್ಮ ತಪ್ಪು ಮಾಹಿತಿಯನ್ನು ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತಿಳಿಸಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ಭಯಕ್ಕೆ ಮಣಿಯುವುದಿಲ್ಲ. ನಾನು ಭಾರತದಲ್ಲಿ ವಿರೋಧ ಪಕ್ಷದಲ್ಲಿರುವ ರಾಜಕೀಯ ವ್ಯಕ್ತಿ, ಆದರೆ ನನ್ನ ದೇಶದ ವಿಚಾರ ಬಂದಾಗ ನಾನು ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಪಾಠ ಕಲಿಸಬೇಕು ಎಂಬ ನನ್ನ ಮಾತು ಸಾರ್ವಜನಿಕ ವಲಯದಲ್ಲಿದೆ. ಭಯೋತ್ಪಾದಕರು ಹುಚ್ಚು ನಾಯಿಯಾಗಿದ್ದರೆ, ಅವರನ್ನು ಸಾಕುವ ಪಾಕಿಸ್ತಾನ ನಾಯಿ ಎಂದು ಹೇಳಿದ್ದಾರೆ. ಈ ದುಷ್ಟ ಹ್ಯಾಂಡ್ಲರ್ ವಿರುದ್ಧ ಹೋರಾಡಲು ನಾವು ಮೊದಲು ಜಗತ್ತನ್ನು ಒಗ್ಗೂಡಿಸಬೇಕು. ಇಲ್ಲದಿದ್ದರೆ, ಈ ದುಷ್ಟ ಹ್ಯಾಂಡ್ಲರ್ ಹೆಚ್ಚು ಹುಚ್ಚು ನಾಯಿಗಳನ್ನು ಸಾಕುತ್ತಾರೆ ಎಂದು ಹೇಳಿದ್ದಾರೆ. ಭಯೋತ್ಪಾದಕರನ್ನು ಎಡೆಮುರಿ ಕಟ್ಟಲು ಭಾರತ ಸಿದ್ಧವಿದೆ. ಹಾಗೂ ಈ ಎಲ್ಲದಕ್ಕೂ ನಾವು ಜವಾಬ್ದಾರರು ಎಂದು ಹೇಳಿದರೆ. ನಮ್ಮ ಎಲ್ಲಾ ದಾಳಿಗಳು ಮತ್ತು ಕ್ರಮಗಳು ಜವಾಬ್ದಾರಿಯುತವಾಗಿವೆ ಮತ್ತು ನಿಖರತೆ, ಇತರ ದೇಶಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಈ ನಿಯೋಗದಲ್ಲಿದ್ದ ಮತ್ತೊಬ್ಬ ಸಂಸದ, ಕಮ್ಯುನಿಸ್ಟ್ ಪಕ್ಷ-ಮಾರ್ಕ್ಸ್ವಾದಿ ಪಕ್ಷದ ಸಂಸದ ಜಾನ್ ಬ್ರಿಟ್ಟಾಸ್ ಅವರು ಮಾತನಾಡಿದ್ದಾರೆ. ಭಾರತದಲ್ಲಿ ನಮ್ಮ ಪಕ್ಷ ವಿಭಿನ್ನ ಸಿದ್ಧಾಂತವನ್ನು ಹೊಂದಿದೆ. ಆದರೆ ನಾವೆಲ್ಲರೂ ಇಲ್ಲಿಗೆ ಒಂದು ಉದ್ದೇಶದೊಂದಿಗೆ ಬಂದಿದ್ದೇವೆ… ನಾವು ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ. ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ಪಾಕಿಸ್ತಾನ ಒಂದು ಒಂದು ಸಿದ್ಧಾಮತವನ್ನು ಹಾಗೂ ಅವರ ದೇವರ ಮೇಲೆ ನಂಬಿಕೆ ಇಟ್ಟಿರುವ ದೇಶ, ಭಾರತದ ಬೆಳವಣಿಗೆಯನ್ನು ನೋಡಿ ಅವರಿಗೆ ಸಹಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದಾ ನೀವು ಭಯೋತ್ಪಾನೆ ನಾಶ ಮಾಡಬೇಕು, ಇಲ್ಲವೇ ಸಿಂಧೂ ನೀರಿನ ಆಸೆ ಬಿಡಬೇಕು, ವಿಶ್ವಸಂಸ್ಥೆಯಲ್ಲಿ ಪಾಕ್​​​ಗೆ ಭಾರತ ಎಚ್ಚರಿಕೆ

ನಿಯೋಗದ ನೇತೃತ್ವ ವಹಿಸಿರುವ ಜನತಾದಳ (ಸಂಯುಕ್ತ) ಸಂಸದ ಸಂಜಯ್ ಝಾ, ಆಪರೇಷನ್ ಸಿಂಧೂರ್ ಗಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು . ಇಂತಹ ಘಟನೆಗಳು ಸಂಭವಿಸಿದಾಗ, ವಿವಿಧ ದೇಶಗಳ ನಾಯಕರು ಪರಸ್ಪರ ಮಾತನಾಡುತ್ತಾರೆ ಮತ್ತು ಇನ್ನೊಂದು ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಪಾಕಿಸ್ತಾನದ ಡಿಜಿಎಂಒ ಭಾರತೀಯ ಡಿಜಿಎಂಒಗೆ ಕರೆ ಮಾಡಿ ಕದನ ವಿರಾಮವನ್ನು ಕೇಳಿದಾಗ, ಭಾರತ ಒಪ್ಪಿಕೊಂಡಿತು. ಅದು ಯಾಕೆ ಒಪ್ಪಿಕೊಂಡರು ಹಾಗೂ ಪಾಕಿಸ್ತಾನದ ಮಾಡಿದ ಕೃತ್ಯ ಎಂಥಹದ್ದು ಎಂಬುದು ಇತರ ಸ್ಥಳಗಳಲ್ಲಿರುವ ಜನರಿಗೆ ತಿಳಿದಿಲ್ಲ. ಆದ್ದರಿಂದ, ಪಾಕಿಸ್ತಾನ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂದು ಜನರಿಗೆ ತಿಳಿಸಲು ವಿಶ್ವದಾದ್ಯಂತ ನಿಯೋಗಗಳನ್ನು ಕಳುಹಿಸುವುದು ಮುಖ್ಯ ಎಂದು ಭಾರತ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು. ನಮ್ಮ ಮೇಲೆ ದಾಳಿ ನಡೆದರೆ, ‘ಹಮ್ ಘರ್ ಮೇ ಘುಸ್ ಕರ್ ಮಾರೇಂಗೆ’ ಎಂಬ ಸಂದೇಶವನ್ನು ಭಾರತ ಸರ್ಕಾರ ನೀಡಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Sat, 24 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ