AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು

ಹಣ್ಣಿನ ರಾಜ ಎಂಬ ಪಟ್ಟ ಹೊಂದಿರುವ ಮಾವಿನ ಹಣ್ಣು ಬಹಳ ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಅದರೆ ಅದೆಷ್ಟೋ ಜನರಿಗೆ ಮಾವಿನ ಹಣ್ಣಿನ ಸಿಪ್ಪೆಯಲ್ಲಿರುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.

Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು
ಮಾವಿನ ಹಣ್ಣು
Follow us
TV9 Web
| Updated By: sandhya thejappa

Updated on:Jun 29, 2021 | 8:50 AM

ಇದು ಮಾವಿನ ಹಣ್ಣಿನ ಸೀಜನ್. ರಸ್ತೆ ಬದಿ ಬದಿಗೂ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿದೆ. ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹಣ್ಣಿನ ರಾಜ ಎಂಬ ಪಟ್ಟ ಹೊಂದಿರುವ ಮಾವಿನ ಹಣ್ಣು ಬಹಳ ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಅದರೆ ಅದೆಷ್ಟೋ ಜನರಿಗೆ ಮಾವಿನ ಹಣ್ಣಿನ ಸಿಪ್ಪೆಯಲ್ಲಿರುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಹಣ್ಣು ತಿಂದು ಸಿಪ್ಪೆಯನ್ನು ಕಸದ ತೊಟ್ಟಿಗೆ ಹಾಕುತ್ತಾರೆ. ಮಾವಿನ ಹಣ್ಣಿನ ಸಿಪ್ಪೆಯಿಂದ ಸಿಗುವ ಪ್ರಯೋಜನಗಳನ್ನು ತಿಳಿದರೆ ಸಿಪ್ಪೆಯನ್ನು ಎಸೆಯುವುದಕ್ಕೆ ಮುಂದಾಗಲ್ಲ. ಮಾವಿನ ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶವಿದೆ. ಜೊತೆಗೆ ಸಿಪ್ಪೆ ಕೂಡಾ ಹೆಚ್ಚು ಪೋಷಕಾಂಶದಿಂದ ಕೂಡಿದೆ.

ಪ್ರಯೋಜನಗಳು * ಮುಖದ ಸುಕ್ಕು ನಿವಾರಣೆ ಚಿಕ್ಕ ವಯಸ್ಸಿನಲ್ಲಿ ಮುಖ ಸುಕ್ಕಾಗಿ ವಯಸ್ಸಾದಂತೆ ಕಾಣುತ್ತಾರೆ. ಇದಕ್ಕೆ ಒತ್ತಡ ಮುಖ್ಯ ಕಾರಣವಾಗಿರುತ್ತದೆ. ಇದಕ್ಕೆ ಸೂಕ್ತ ಪರಿಹಾರ ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ. ಮಾವಿನ ಸಿಪ್ಪೆಯ ಪೇಸ್ಟ್ ಮುಖಕ್ಕೆ ಹಚ್ಚಿ. 15 ರಿಂದ 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಮುಖದ ಸುಕ್ಕು ಕಡಿಮೆಯಾಗುತ್ತದೆ.

* ಮೊಡವೆ ನಿವಾರಣೆ ಮುಖದ ಮೇಲಿನ ಮೊಡವೆ ಹೆಚ್ಚು ಮುಜುಗರಕ್ಕೆ ಕಾರಣವಾಗಿದೆ. ಈ ಮುಜುಗರವನ್ನು ಹೋಗಲಾಡಿಸುವ ಸಾಮರ್ಥ್ಯ ಮಾವಿನ ಹಣ್ಣಿನ ಸಿಪ್ಪೆಗಿದೆ. ಮೊಡವೆಗಳು ಸಾಮಾನ್ಯವಾಗಿ ಪ್ರೌಢಾವಸ್ಥೆಯ ವಯಸ್ಸಿನಲ್ಲಿ ಕಂಡುಬರುತ್ತದೆ. ಮಾವಿನ ಹಣ್ಣಿನ ಬಳಕೆಯಿಂದ ಮೊಡವೆ ನಿವಾರಣೆಯಾಗುವುದು.

* ರೋಗ ನಿರೋಧಕ ಶಕ್ತಿ ಹೆಚ್ಚಳ ಕೊರೊನಾ ಕಾಲವಿದು. ಕೊರೊನಾ ಸೋಂಕು ಹತ್ತಿರ ಸುಳಿಯದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಹೀಗಾಗಿ ಮಾವಿನ ಹಣ್ಣಿನ ಸಿಪ್ಪೆ ಸೇವಿಸಬೇಕು. ಇದರಲ್ಲಿ ಕರಗದ ನಾರಿನ ಅಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗಿದೆ.

* ತೂಕ ಇಳಿಕೆ ಅತಿಯಾದ ತೂಕ ಇತರೆ ಕಾಯಿಲೆಗಳಿಗೆ ಆಹ್ವಾನಿಸಿದಂತಾಗುತ್ತದೆ. ಫಿಟ್ ಆ್ಯಂಡ್ ಫೈನ್ ಆಗಲು ದೇಹದ ತೂಕ ಕಡಿಮೆಗೊಳಿಸಬೇಕು. ತೂಕವನ್ನು ಕಡಿಮೆಗೊಳಿಸಲು ಮಾವಿನ ಸಿಪ್ಪೆ ಸಹಾಯಕವಾಗಿದೆ. ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುವ ಗುಣವನ್ನು ಮಾವಿನ ಸಿಪ್ಪೆ ಹೊಂದಿದೆ.

* ರಕ್ತಸ್ರಾವ ನಿವಾರಣೆ ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವ ದೇಹದಲ್ಲಿ ರಕ್ತದ ಕೊರತೆಯನ್ನು ಉಂಟುಮಾಡುತ್ತದೆ. ಮಾವಿನ ಸಿಪ್ಪೆಯ ಬಳಕೆಯಿಂದ ರಕ್ತಸ್ರಾವ ನಿವಾರಣೆಯಾಗುತ್ತದೆ. ಸ್ವಲ್ಪ ಎಣ್ಣೆಯೊಂದಿಗೆ ಮಾವಿನ ಹಣ್ಣಿನ ಸಿಪ್ಪೆಯನ್ನು ಹುರಿದು ತಿಂದರೆ ಈ ರಕ್ತಸ್ರಾವದ ಸಮಸ್ಯೆ ಕಡಿಮೆಯಾಗುತ್ತದೆ.

ಬಳಕೆ ಹೇಗೆ? * ಬೇಯಿಸಿದ ಮಾವಿನಕಾಯಿಯನ್ನು ಕತ್ತರಿಸಿ, ನಯವಾಗಿಸಬೇಕು. ಇದನ್ನು ಐಸ್ ಕ್ರೀಂ ಅಥವಾ ಬೇರೆ ಹಣ್ಣುಗಳ ಜೊತೆ ಮಿಶ್ರಣ ಮಾಡಿ ತಿನ್ನಬೇಕು.

* ಮಾವಿನ ಹಣ್ಣಿನ ಸಿಪ್ಪೆಯನ್ನು ತುರಿದು, ಸಲಾಡ್ ಮಾಡಿ ಸೇವಿಸಬಹುದು.

ಇದನ್ನೂ ಓದಿ

Health Tips: ದಾಸವಾಳದ ಗಿಡಮೂಲಿಕೆ ಚಹಾ ಎಂದಾದರೂ ಸೇವಿಸಿದ್ದೀರಾ? ಒಂದು ಸಿಪ್​ ಸವಿದರೂ ಆರೋಗ್ಯಕ್ಕೆ ಪ್ರಯೋಜನಗಳಿವೆ

Health Tips: ಬೀಟ್​ರೂಟ್​​ ಡಿಟಾಕ್ಸ್​ ಜ್ಯೂಸ್; ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

(Benefits of Mango Peel to good health)

Published On - 8:38 am, Tue, 29 June 21

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ