Health Tips: ದಾಸವಾಳದ ಗಿಡಮೂಲಿಕೆ ಚಹಾ ಎಂದಾದರೂ ಸೇವಿಸಿದ್ದೀರಾ? ಒಂದು ಸಿಪ್​ ಸವಿದರೂ ಆರೋಗ್ಯಕ್ಕೆ ಪ್ರಯೋಜನಗಳಿವೆ

ದಾಸವಾಳ ಚಹಾ ನಮ್ಮ ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಜತೆಗೆ ದೇಹದ ತೂಕ ನಿಯಂತ್ರಿಸಲು ಇದು ಸಹಾಯಕವಾಗಿದೆ.

Health Tips: ದಾಸವಾಳದ ಗಿಡಮೂಲಿಕೆ ಚಹಾ ಎಂದಾದರೂ ಸೇವಿಸಿದ್ದೀರಾ? ಒಂದು ಸಿಪ್​ ಸವಿದರೂ ಆರೋಗ್ಯಕ್ಕೆ ಪ್ರಯೋಜನಗಳಿವೆ
ದಾಸವಾಳ ಚಹಾ
Follow us
TV9 Web
| Updated By: Skanda

Updated on: Jun 29, 2021 | 8:15 AM

ಚಹಾದಲ್ಲಿ ಅನೇಕ ವಿಧಗಳಿವೆ. ಹೆಚ್ಚು ರುಚಿ ಮತ್ತು ಸುವಾಸನೆಯೊಂದಿಗೆ ಒಂದೊಂದು ಚಹಾ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಮಳೆಗಾಲದ ಈ ದಿನಗಳಲ್ಲಿ ಬಿಸಿ-ಬಿಸಿ ಚಹಾವನ್ನು ಸುರ್​.. ಎಂದು ಸವಿಯುತ್ತಿದ್ದರೆ ಅದರ ಸ್ವಾದವೇ ಬೇರೆ! ಅದರಲ್ಲಿಯೂ ಚಹಾ ಪ್ರಿಯರಂತೂ ಮಳೆಗಾಲದಲ್ಲಿ ಚಹಾ ಕುಡಿಯದೇ ಇರಲು ಸಾಧ್ಯವೇ. ಹಾಗಿದ್ದರೆ ವಿಶೇಷ ಚಹಾ ಎನಿಸಿಕೊಂಡ ದಾಸವಾಳ ಚಹಾದಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಕುರಿತಾಗಿ ತಿಳಿಯೋಣ.

ದಾಸವಾಳದಿಂದಲೂ ಸಹ ಚಹಾ ತಯಾರಿಸುತ್ತಾರೆ. ಕೆಂಪು ಬಣ್ಣದ ದಾಸವಾಳದಿಂದ ಚಹಾ ತಯಾರಿಸುವುದು ಕೊಂಚ ಹುಳಿ ಅಂಶವನ್ನು ನೀಡಿದರೂ ಸಹ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಗಳಿವೆ. ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರದಲ್ಲಿನ ಕೆಲವು ಬದಲಾವಣೆಯ ಮೂಲಕ ಉಂಟಾಗುವ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳಿಂದ ದೂರವಿರಬಹುದು. ಗಿಡಮೂಲಿಕೆಯ ದಾಸವಾಳ ಚಹಾ ರಕ್ತದೊತ್ತಡವನ್ನು ನಿವಾರಿಸುತ್ತದೆ. ಜತೆಗೆ ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು ಸಮಸ್ಯೆಗಳಿಂದ ದೂರವಿರಬಹುದು.

ದಾಸವಾಳ ಚಹಾ ತಯಾರಿಸುವ ವಿಧಾನ *ದಾಸವಾಳದ ಒಣಗಿದ ದಳಗಳು *ನೀರು *ಲಿಂಬು *ದಾಲ್ಚಿನ್ನಿ *ಪುದೀನ ಎಲೆಗಳು

ತಣ್ಣನೆಯ ನೀರಿನಲ್ಲಿ ದಾಸವಾಳದ ಎಲೆಯ ಪುಡಿಗಳನ್ನು 2 ಗಂಟೆಗಳ ಕಾಲ ನೆನೆಸಿಡಿ. ಅದನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಸಕ್ಕರೆ ಅಥವಾ ಜೇನುತುಪ್ಪ ಮತ್ತು ಲಿಂಬು ರಸವನ್ನು ಸೇರಿಸಿ. ಜತೆಗೆ ದಾಲ್ಚಿನ್ನಿ ಮತ್ತು ಪುದೀನ ಎಲೆಗಳನ್ನು ಬೆರೆಸಿ ಚೆನ್ನಾಗಿ ಕುದಿಸಿ. ಇದೀಗ ಚಹಾ ರೆಡಿಯಾಗಿದೆ. ಈ ಮೂಲಕ ನೀವು ಚಹಾದ ಸ್ವಾದವನ್ನು ಸವಿಯಬಹುದು.

ದಾಸವಾಳ ಚಹಾದ ಪ್ರಯೋಜನಗಳು *ರಕ್ತನಾಳಗಳನ್ನು ಬಲಪಡಿಸುತ್ತದೆ *ಕೆಟ್ಟ ಕೊಲೆಸ್ಟ್ರಾಲ್​ಗಳನ್ನು ಕರಗಿಸುತ್ತದೆ *ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ *ದೀರ್ಘಕಾಲದ ಆಯಾಸವನ್ನು ನಿವಾರಿಸುತ್ತದೆ *ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತದೆ

ದಾಸವಾಳ ಚಹಾ ನಮ್ಮ ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಜತೆಗೆ ದೇಹದ ತೂಕ ನಿಯಂತ್ರಿಸಲು ಇದು ಸಹಾಯಕವಾಗಿದೆ. ಚರ್ಮದ ಕಾಂತಿಯನ್ನೂ ಸಹ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿನ ಆಂಟಿ ಆಕ್ಸಿಡೆಂಟ್​ ಅಂಶಗಳಿಂದ ಹೃದಯ ಖಾಯಿಲೆ, ಮಧುಮೇಹದಂತಹ ಖಾಯಿಲೆಗಳಿಂದ ದೂರವಿರಬಹುದು. ಹಾಗಾಗಿ ದಾಸವಾಳ ಚಹಾ ಅರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ:

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್