Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ
Health Benefits: ಯಾವ ಸಮಯದಲ್ಲಿ ಹಾಲು ಕುಡಿಯಬೇಕು ಎಂಬ ಗೊಂದಲದಲ್ಲಿಯೇ ಕೆಲವರು ಹಾಲು ಕುಡಿಯುವುದಿಲ್ಲ. ಬೆಳಿಗ್ಗೆ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಹೇಳಿದರೆ, ರಾತ್ರಿಯಲ್ಲಿ ಹಾಲು ಕುಡಿಯುವುದು ಸರಿಯೆಂದು ಕೆಲವರು ಭಾವಿಸುತ್ತಾರೆ. ಹೀಗಾಗಿ ಇಂತಹ ಗೊಂದಲಗಳಲ್ಲಿ ಸಿಲುಕಿದವರಿಗೆ ಉತ್ತರ ಇಲ್ಲಿದೆ.
ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಹಾಲು ಎಲ್ಲಾ ವಯಸ್ಸಿನವರಿಗೂ ಉಪಯುಕ್ತವಾಗಿದೆ. ಅನಾರೋಗ್ಯದ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಯ ವರೆಗೆ ಎಲ್ಲರೂ ಹಾಲು ಕುಡಿಯುವುದು ಒಳ್ಳೆಯದು. ಆದರೆ ಹೆಚ್ಚಿನ ಜನರು ಬೆಳಿಗ್ಗೆ ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಇನ್ನು ಕೆಲವರು ರಾತ್ರಿಯಲ್ಲಿ ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಹೀಗಾಗಿ ಯಾವ ಸಮಯದಲ್ಲಿ ಹಾಲು ಕುಡಿಯಬೇಕು ಎಂಬ ಗೊಂದಲದಲ್ಲಿಯೇ ಕೆಲವರು ಹಾಲು ಕುಡಿಯುವುದಿಲ್ಲ. ಬೆಳಿಗ್ಗೆ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಹೇಳಿದರೆ, ರಾತ್ರಿಯಲ್ಲಿ ಹಾಲು ಕುಡಿಯುವುದು ಸರಿಯೆಂದು ಕೆಲವರು ಭಾವಿಸುತ್ತಾರೆ. ಹೀಗಾಗಿ ಇಂತಹ ಗೊಂದಲಗಳಲ್ಲಿ ಸಿಲುಕಿದವರಿಗೆ ಉತ್ತರ ಇಲ್ಲಿದೆ.
ಹಾಲಿನ ಪ್ರಯೋಜನಗಳೇನು? ಹಾಲು ಒಂದು ಪಾನೀಯವಾಗಿರಬಹುದು. ಆದರೆ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಭಾರತೀಯ ಆಹಾರದಲ್ಲಿ ಹಾಲು ಒಂದು ಪ್ರಮುಖ ಭಾಗವಾಗಿದೆ. ಇದನ್ನು ಹಾಗೇ ಸೇವಿಸಲುಬಹುದು ಮತ್ತು ಅದರಿಂದ ವಿವಿಧ ಉತ್ಪನ್ನಗಳನ್ನು ಸಹ ತಯಾರಿಸಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ, ಪ್ರೋಟೀನ್, ವಿಟಮಿನ್ ಎ, ಬಿ 1, ಬಿ 2, ಬಿ 12, ಡಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿವೆ. ಈ ಪೌಷ್ಠಿಕಾಂಶದ ಗುಣಗಳಿಗಾಗಿ ಆಯುರ್ವೇದದಲ್ಲಿ ಹಾಲಿಗೆ ವಿಶೇಷ ಸ್ಥಾನವಿದೆ.
ಹಾಲು ಕುಡಿಯಲು ಸರಿಯಾದ ಸಮಯ ಯಾವುದು? ಆಯುರ್ವೇದದ ಪ್ರಕಾರ, ರಾತ್ರಿಯಲ್ಲಿ ಹಾಲು ಕುಡಿಯುವುದು ಉತ್ತಮ. ಹೀಗಾಗಿಯೇ ರಾತ್ರಿ ಮಲಗುವಾಗ ಅನೇಕರು ಹಾಲು ಕುಡಿಯುತ್ತಾರೆ. ಹಾಲಿನಿಂದ ಅಲರ್ಜಿ ಇರುವವರನ್ನು ಹೊರತುಪಡಿಸಿ ಬೇರೆ ಎಲ್ಲರೂ ಕುಡಿಯಬಹುದು ಎಂದು ಹೇಳಲಾಗುತ್ತದೆ. ರಾತ್ರಿ ಮಲಗುವ ಮೊದಲು ನೀವು ಹಾಲು ಕುಡಿದರೆ ನಿಮಗೆ ಉತ್ತಮ ನಿದ್ರೆ ಬರುತ್ತದೆ. ಜೀರ್ಣಕ್ರಿಯೆ ಮತ್ತು ಪೌಷ್ಠಿಕಾಂಶದ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಹಾಲಿಗೆ ವಿಶೇಷ ಸ್ಥಾನವಿದೆ. ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಹೆಚ್ಚಿನ ಕ್ಯಾಲ್ಸಿಯಂ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ರಾತ್ರಿಯಲ್ಲಿ ನಿಮ್ಮ ಚಟುವಟಿಕೆಯ ಮಟ್ಟ ತುಂಬಾ ಕಡಿಮೆಯಾಗಿರುದೆ.
ಅದೇ ಸಮಯದಲ್ಲಿ ಬೆಳಿಗ್ಗೆ ಹಾಲು ಕುಡಿಯುವುದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಏಕೆಂದರೆ ಆಮ್ಲ ಸಮಸ್ಯೆ ಇರುವ ಜನರು ರಾತ್ರಿಯಲ್ಲಿ ಹಾಲನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತಾರೆ. ಇದಲ್ಲದೆ, 5 ವರ್ಷದೊಳಗಿನ ಮಕ್ಕಳು ಮನೆಯಲ್ಲಿದ್ದರೆ, ಹಗಲಿನಲ್ಲಿ ಹಾಲು ಕುಡಿಯುವುದು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ರಾತ್ರಿಯಲ್ಲಿ ಹಾಲು ಕುಡಿಯುವುದನ್ನು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ:
Health Tips: ಮನೆಯಲ್ಲೇ ಇದೆ ಮದ್ದು; ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ
Jackfruit: ಹಲಸಿನ ಹಣ್ಣಿನ ಆರೋಗ್ಯಯುತ ಗುಣಗಳ ಬಗ್ಗೆ ತಿಳಿದರೆ ಒಂದು ಹಣ್ಣನ್ನೂ ಹಾಳು ಮಾಡುವುದಿಲ್ಲ