AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕೆಮ್ಮು ಮತ್ತು ಮನೆಮದ್ದು; ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಮಳೆಗಾಲಕ್ಕೆ ಔಷಧಿ

ಜೇನುತುಪ್ಪವನ್ನು ಹೊರತುಪಡಿಸಿ ಕೆಮ್ಮಿಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬ ಮಾತು ಆಯುರ್ವೇದದಲ್ಲಿ ಇದೆ. ಜೇನುತುಪ್ಪದಲ್ಲಿ ಏನನ್ನೂ ಸೇರಿಸದೆ ನೇರವಾಗಿ ಅದನ್ನು ತೆಗೆದುಕೊಂಡರೆ, ಅದು ಗಂಟಲಿನೊಳಗೆ ಲೇಪನವನ್ನು ರೂಪಿಸುತ್ತದೆ ಮತ್ತು ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ.

Health Tips: ಕೆಮ್ಮು ಮತ್ತು ಮನೆಮದ್ದು; ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಮಳೆಗಾಲಕ್ಕೆ ಔಷಧಿ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on:Jun 20, 2021 | 10:17 AM

Share

ಮಳೆಗಾಲ ಬಂತು ಎಂದರೆ ಸಾಕು, ಶೀತ, ಕೆಮ್ಮು, ಜ್ವರ ಶುರು ಎಂದರ್ಥ. ಕೆಲಸದ ಸಂದರ್ಭದಲ್ಲಿ ಮಳೆಯಲ್ಲಿ ನೆನೆಯುವುದು ಸಾಮಾನ್ಯ. ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಕಂಡುಬರುವ ಕೆಮ್ಮು ಹೆಚ್ಚು ನಮ್ಮನ್ನು ಭಾದಿಸುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ನಾವು ಕೆಲವೊಂದು ಕ್ರಮ ಕೈಗೊಳ್ಳುವುದು ಸೂಕ್ತ. ಆದರೆ ಈಗ ಕೊರೊನಾ ಕಾಲಘಟ್ಟವಾಗಿರುವುದರಿಂದ ಮೆಡಿಕಲ್ ಅಥವಾ ಆಸ್ಪತ್ರೆಗೆ ಹೋಗುವುದು ಅಷ್ಟು ಸಮಂಜಸವಲ್ಲ ಅಥವಾ ಹೋಗಲು ಕೆಲವರು ಹಿಂದೆ ಸರಿಯಬಹುದು. ಆದರೆ ಚಿಂತೆ ಪಡುವುದು ಬೇಡ. ಇದಕ್ಕೆ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ಇದೆ. ಅದು ಹೇಗೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಕೆಮ್ಮು ಮತ್ತು ಮನೆಮದ್ದು

ಜೇನುತುಪ್ಪ ಜೇನುತುಪ್ಪವನ್ನು ಹೊರತುಪಡಿಸಿ ಕೆಮ್ಮಿಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬ ಮಾತು ಆಯುರ್ವೇದದಲ್ಲಿ ಇದೆ. ಜೇನುತುಪ್ಪದಲ್ಲಿ ಏನನ್ನೂ ಸೇರಿಸದೆ ನೇರವಾಗಿ ಅದನ್ನು ತೆಗೆದುಕೊಂಡರೆ, ಅದು ಗಂಟಲಿನೊಳಗೆ ಲೇಪನವನ್ನು ರೂಪಿಸುತ್ತದೆ ಮತ್ತು ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ. ಇನ್ನು ಜೇನುತುಪ್ಪಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸುವುದರಿಂದ ಕೆಮ್ಮಿಗೆ ತಕ್ಷಣದ ಪರಿಹಾರ ಸಿಗುತ್ತದೆ.

ತುಳಸಿ ಎಲೆ ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ತುಳಸಿ ಎಲೆಗೆ ಜೇನುತುಪ್ಪವನ್ನು ಸಿಂಪಡಿಸಿ ತಿನ್ನುವುದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ. ಸುಮಾರು 15 ದಿನಗಳವರೆಗೆ ಈ ಕ್ರಮವನ್ನು ಅನುಸರಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

ಶುಂಠಿ ಶುಂಠಿ ಚಹಾವು ಕೆಮ್ಮಿಗೆ ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಶುಂಠಿಯನ್ನು ಹತ್ತು ಅಥವಾ ಹನ್ನೆರಡು ಸಣ್ಣ ತುಂಡುಗಳಾಗಿ ಕತ್ತರಿಸಿ. ಮೂರು ಕಪ್ ನೀರಿನಲ್ಲಿ 20 ನಿಮಿಷಗಳ ಕಾಲ ಕುದಿಸಿ. ನಂತರ ಅದು ಸ್ವಲ್ಪ ತಣ್ಣಗಾದ ಮೇಲೆ 1 ಚಮಚೆ ಜೇನುತುಪ್ಪ, ನಿಂಬೆ ರಸ ಹಾಕಿ ಸೇವಿಸುವುದು ಉತ್ತಮ. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಕರಿಮೆಣಸು ಒಂದು ಚಮಚೆ ಕರಿಮೆಣಸಿಗೆ ಒಂದು ಚಮಚೆ ಜೇನುತುಪ್ಪ ಸೇರಿಸಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಈ ಮಿಶ್ರಣವನ್ನು ಕುದಿಸಿದ 15 ನಿಮಿಷಗಳ ನಂತರ ಕುಡಿಯುವುದು ಉತ್ತಮ.

ಅರಿಶಿಣ ಒಂದು ಚಮಚೆ ಅರಿಶಿಣ ಪುಡಿಯನ್ನು ನೀರಿಗೆ ಬೆರಸಿ ಚೆನ್ನಾಗಿ ಕುದಿ ಬಂದ ಮೇಲೆ ಸೇವಿಸುವುದು ಉತ್ತಮ. ಇದಕ್ಕೆ ಜೇನುತುಪ್ಪ ಕೂಡ ಸೇರಿಸಬಹುದು. ದಿನಕ್ಕೆ ಮೂರು ಬಾರಿ ಈ ವಿಧಾನವನ್ನು ಅನುಸರಿಸಿದರೆ ಕೆಮ್ಮು ಬೇಗನೆ ಗುಣವಾಗುತ್ತದೆ.

ಈರುಳ್ಳಿ ಈರುಳ್ಳಿ ಜತೆಗೆ ಬೆಲ್ಲವನ್ನು ಗುದ್ದಿ ಸೇವಿಸುವುದರಿಂದಲೂ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.

ಇದನ್ನೂ ಓದಿ:

Health Tips: ಮನೆಯಲ್ಲೇ ಇದೆ ಮದ್ದು; ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ

Published On - 10:11 am, Sun, 20 June 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!