AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀರಿಗೆ ಸೇವನೆಯ ಆರೋಗ್ಯ ಪ್ರಯೋಜನ ತಿಳಿಯಿರಿ; ಜೀರಿಗೆ ನೀರು ಕುಡಿಯುವ ಅಭ್ಯಾಸ ರೂಢಿಯಲ್ಲಿರಲಿ

Jeera Water Benefits: ಜೀರಿಗೆ ನೀರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಾರ್ಬೋಹೈಡ್ರೇಟ್​ಗಳು, ಗ್ಲುಕೋಸ್​ ಮತ್ತು ಕೊಬ್ಬನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.

ಜೀರಿಗೆ ಸೇವನೆಯ ಆರೋಗ್ಯ ಪ್ರಯೋಜನ ತಿಳಿಯಿರಿ; ಜೀರಿಗೆ ನೀರು ಕುಡಿಯುವ ಅಭ್ಯಾಸ ರೂಢಿಯಲ್ಲಿರಲಿ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jun 20, 2021 | 8:59 AM

Share

ಸಾಮಾನ್ಯವಾಗಿ ಜೀರಿಗೆಯನ್ನು ಎಲ್ಲಾ ಅಡುಗೆಯಲ್ಲಿಯೂ ಬಳಸುತ್ತೇವೆ. ಆದರೆ ಇದರಿಂದ ನಮ್ಮ ದೇಹಕ್ಕೆ ಆರೋಗ್ಯದ ಪ್ರಯೋಜನಗಳು ಎಷ್ಟಿವೆ ಎಂಬುದರ ಬಗ್ಗೆ ಗೊತ್ತೇ ಇರುವುದಿಲ್ಲ. ಹೀಗಿರುವಾಗ ಮನೆಯಲ್ಲಿ ದಿನನಿತ್ಯದ ಅಡುಗೆಯಲ್ಲಿ ಬಳಕೆಯಲ್ಲಿರುವ ಜೀರಿಗೆಯ ಪ್ರಯೋಜಗಳ ಕುರಿತಾಗಿ ತಿಳಿದುಕೊಳ್ಳಿ. ಅದೆಷ್ಟೋ ಸಮಸ್ಯೆಗಳಿಗೆ ಜೀರಿಗೆಯಿಂದ ಪರಿಹಾರವಿದೆ. ಜೀರಿಗೆ ನೀರು ಮಾಡಿ ಸೇವಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಜೀರಿಗೆಯನ್ನು ಹಾಗೇ ಸೇವಿಸುವುದಕ್ಕಿಂತ ಜೀರಿಗೆ ನೀರು ಮಾಡಿ ಕುಡಿಯುವುದರ ಮೂಲಕ ಹೆಚ್ಚಿನ ಲಾಭವಿದೆ. ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ನೆನೆಸಿಡಿ. ಬಳಿಕ ಬೆಳಿಗ್ಗೆ ಆ ನೀರನ್ನು ಸೇವಿಸುವರಿಂದ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಗಳನ್ನು ಕಂಡುಕೊಳ್ಳಬಹುದಾಗಿದೆ.

ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸಹ ಇದನ್ನು ಔಷಧಿಯಾಗಿ ಬಳಸುತ್ತಿದ್ದಾರೆ. ಜೀರಿಗೆಯಲ್ಲಿನ ಪೌಷ್ಟಿಕಾಂಶಗಳಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರತಿದಿನ ಒಂದು ಲೋಟ ಜೀರಿಗೆ ನೀರು ಕುಡಿಯುವದರಿಂದ ಹೃದಯದ ಆರೋಗ್ಯ, ಚರ್ಮ ಹಾಗೂ ತಲೆಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಜೀರಿಗೆಯಲ್ಲಿ ಪೊಟ್ಯಾಷಿಯಂ ಮತ್ತು ಕಬ್ಬಿಣ ಅಂಶಗಳಿಂದ ಸಮೃದ್ಧವಾಗಿದೆ. ಜತೆಗೆ ಉತ್ಕರ್ಷಣ ನಿರೋಧಕ ಶಕ್ತಿಗಳನ್ನು ಹೊಂದಿದೆ. ನಮ್ಮ ದೇಹದಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್​ ಎ, ಬಿ ಮತ್ತು ಸಿ ಇದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಜೀರಿಗೆ ನೀರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಾರ್ಬೋಹೈಡ್ರೇಟ್​ಗಳು, ಗ್ಲುಕೋಸ್​ ಮತ್ತು ಕೊಬ್ಬನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಪಿತ್ತಜನಕಾಂಗದಲ್ಲಿ ಪಿತ್ತರಸ ಆಮ್ಲಗಳ ಉತ್ಪಾದನೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಅಜೀರ್ಣವನ್ನು ತಡೆಗಟ್ಟಲು ಸಹಾಯಕವಾಗಿದೆ.

ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಜೀರಿಗೆ ನೀರು ಕುಡಿಯುವುದರಿಂದ ಹೊಟ್ಟೆ ಶುದ್ಧಗೊಳ್ಳುತ್ತದೆ. ಮುಟ್ಟಿನ ಚಕ್ರದ ಸಮಸ್ಯೆ ಕಾಡುತ್ತಿರುವವರ ಆರೋಗ್ಯವನ್ನು ಸುಧಾರಿಸುತ್ತದೆ. ಹಾಲುಣಿಸುವ ಮಹಿಳೆಯರಿಗೆ ಸ್ತನದಲ್ಲಿ ಹಾಲು ಉತ್ಪಾದನೆಗೊಳ್ಳಲು ಸಹಾಯಕವಾಗಿದೆ. ಜತೆಗೆ ಮಗುವಿಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ.

ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು ಜೀರಿಗೆ ನೀರಿನಲ್ಲಿ ಪೊಟ್ಯಾಷಿಯಂ, ಮ್ಯಾಂಗನೀಸ್​ ಮತ್ತು ಸೆಲೆನಿಯಮ್​ ಸಮೃದ್ಧವಾಗಿರುತ್ತದೆ. ಇದು ಚರ್ಮದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ವಿಟಮಿನ್​ ಎ ಪೌಷ್ಟಿಕ ಅಂಶವನ್ನು ಹೊಂದಿರುವದರಿಂದ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯಿಂದ ಸಮೃದ್ಧವಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಮುಖದಲ್ಲಿನ ಮೊಡವೆ ಸಮಸ್ಯೆ ಯುವತಿಯರಿಗೆ ಹೆಚ್ಚು ಕಾಡುತ್ತದೆ. ಜೀರಿಗೆಯಲ್ಲಿರುವ ಆ್ಯಂಟಿಬ್ಯಾಕ್ಟೀರಿಯಾ ಗುಣಲಕ್ಷಣಗಳು ಮೊಡವೆಗಳು ಏಳಲು ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಜೀರಿಗೆ ನೀರು ಕುಡಿಯುವುದರಿಂದ ನೆತ್ತಿಯ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಇದು ಪ್ರೋಟೀನ್​ ಮತ್ತು ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜತೆಗೆ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ ಹೃದಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಜೀರಿಗೆ ನೀರು ತುಂಬಾ ಉಪಯುಕ್ತಕಾರಿ. ಜೀರಿಗೆ ನೀರು ಸೇವನೆಯಿಂದ ಹೃದಯ ಸ್ನಾಯುಗಳು ಬಲಗೊಳ್ಳುತ್ತವೆ. ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯಾಘಾತ ಮತ್ತು ರಕ್ತದ ಒತ್ತಡದಂತಹ ಸಮಸ್ಯೆಗಳಿಂದ ಉಂಟಾಗುವ ಅಪಾಯವನ್ನು ತಡೆಯಲು ಸಹಾಯಕವಾಗಿದೆ.

ಇವಿಷ್ಟೇ ಅಲ್ಲದೇ ಮಧುಮೇಹ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜೀರಿಗೆ ನೀರು ಸಹಾಯ ಮಾಡುತ್ತದೆ. ಮನೆಯಲ್ಲಿ ಪ್ರತಿನಿತ್ಯ ಬಳಸುವ ಅದೆಷ್ಟೋ ಆಹಾರ ಪದಾರ್ಥಗಳಿಂದ ಪ್ರಯೋಜಗಳಿವೆ. ಅವುಗಳ ಬಳಕೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಹೀಗಿರುವಾಗ ಅವುಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಬಳಸಿಕೊಳ್ಳುವುದು ಮುಖ್ಯವಾಗಿದೆ.

ಇದನ್ನೂ ಓದಿ:

Health Tips: ಮನೆಯಲ್ಲೇ ಇದೆ ಮದ್ದು; ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ

Health Tips: ತುಟಿ ಕಪ್ಪಾಗಿದೆಯೇ? ಇಲ್ಲಿದೆ ಪರಿಹಾರ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ