Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

Weight Loss: ಮೆಂತ್ಯಯಲ್ಲಿ ಹಲವು ವೈದ್ಯಕೀಯ ಗುಣಗಳಿವೆ. ಕಬ್ಬಿಣಾಂಶ, ವಿಟಮಿನ್ ಎ, ವಿಟಮಿನ್ ಡಿ ಕೂಡ ಈ ಕಾಳಿನಲ್ಲಿದೆ. ಸರಿಯಾದ ಕ್ರಮದಲ್ಲಿ ಮೆಂತ್ಯಯನ್ನು ಬಳಸಿಕೊಂಡರೆ, ದೇಹದ ತೂಕ ಇಳಿಸಿಕೊಳ್ಳಬಹುದು.

Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು
ಮೆಂತ್ಯೆ ಕಾಳು
Follow us
TV9 Web
| Updated By: ganapathi bhat

Updated on:Apr 05, 2022 | 1:05 PM

ನಾವು ತೂಕ ಕಳೆದುಕೊಳ್ಳಲು ನೂರಾರು ಕ್ರಮಗಳನ್ನು ಚಿಂತಿಸುತ್ತೇವೆ. ಹಲವಾರು ವಿಧದಲ್ಲಿ ಪ್ರಯತ್ನ ಮಾಡುತ್ತೇವೆ. ತೂಕ ಹೆಚ್ಚಾಗುವುದನ್ನು ತಡೆಯಲು ಬಹಳಷ್ಟು ಪ್ರಯತ್ನ ಪಡುತ್ತೇವೆ. ಕೆಲವರು ಗಂಟೆಗಳ ಕಾಲ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಇನ್ನು ಕೆಲವರು ಡಯೆಟ್​ಗೆ ಹೆಚ್ಚು ಗಮನ ನೀಡುತ್ತಾರೆ. ಡಯೆಟ್ ವಿಚಾರಕ್ಕೆ ಬಂದರೆ, ನಿಮ್ಮ ಅಡುಗೆ ಕೋಣೆಯ ಸಾಮಾಗ್ರಿಯನ್ನೇ ಬಳಸಿ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಮೆಂತ್ಯ ಅಂಥ ಆಹಾರ ಪದಾರ್ಥಗಳಲ್ಲೊಂದು. ಮೆಂತ್ಯೆಯಲ್ಲಿ ಹಲವು ಪೌಷ್ಠಿಕಾಂಶಗಳಿವೆ. ಕೊಬ್ಬು ಕರಗಿಸಲು ಕೂಡ ಇದು ಸಹಕಾರಿಯಾಗಿದೆ.

ಮೆಂತ್ಯೆಯಲ್ಲಿ ಹಲವು ವೈದ್ಯಕೀಯ ಗುಣಗಳಿವೆ. ಕಬ್ಬಿಣಾಂಶ, ವಿಟಮಿನ್ ಎ, ವಿಟಮಿನ್ ಡಿ ಕೂಡ ಈ ಕಾಳಿನಲ್ಲಿದೆ. ಸರಿಯಾದ ಕ್ರಮದಲ್ಲಿ ಮೆಂತ್ಯೆಯನ್ನು ಬಳಸಿಕೊಂಡರೆ, ದೇಹದ ತೂಕ ಇಳಿಸಿಕೊಳ್ಳಬಹುದು. ಮೆಂತ್ಯೆಯಲ್ಲಿರುವ ಫೈಬರ್ ಅಂಶ ದೇಹದ ಜೀರ್ಣಕ್ರಿಯೆ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಸಕ್ಕರೆ ಖಾಯಿಲೆ ಇರುವವರಿಗೂ ಮೆಂತ್ಯೆ ಉತ್ತಮ ಆಹಾರ ಪದಾರ್ಥವಾಗಿದೆ.

ಮುಂಜಾನೆ ಮೆಂತ್ಯೆ ನೀರು ಕುಡಿಯಿರಿ ದೇಹದ ತೂಕ, ಕೊಬ್ಬು ಕಡಿಮೆ ಮಾಡಲು ಮೆಂತ್ಯೆ ನೀರನ್ನು ಕುಡಿಯಬಹುದು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ.. ಮೆಂತ್ಯೆಯನ್ನು ಮುನ್ನಾ ದಿನ ರಾತ್ರಿಯೇ ನೀರಿಗೆ ಹಾಕಿ ನೆನೆಸಿಡಿ. ಬಳಿಕ, ಮುಂಜಾನೆ ಮೆಂತ್ಯೆಯನ್ನು ನೀರಿನಲ್ಲಿ ಕುದಿಸಿ, ಆರಿಸಿ ಆ ನೀರು ಕುಡಿಯಬಹುದು. ಇದರಿಂದ ದೇಹದ ಟಾಕ್ಸಿಕ್ ಅಂಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಮಲಬದ್ಧತೆಯೂ ಉತ್ತಮವಾಗುತ್ತದೆ.

ಮೆಂತ್ಯೆ ಚಹಾ ಕೂಡ ಮಾಡಬಹುದು ಕಡಿಮೆ ಕ್ಯಾಲರಿ ಅಂಶವುಳ್ಳ ಚಹಾಕ್ಕಾಗಿ ಮೆಂತ್ಯೆ ಚಹಾ ಮಾಡಬಹುದು. ಈ ಚಹಾದ ವಿಶೇಷತೆ ಎಂದರೆ, ಇದರಲ್ಲಿ ತೂಕ ಕಳೆದುಕೊಳ್ಳಲು ಬೇಕಾದ ಎಲ್ಲಾ ಅಂಶಗಳೂ ಇರುವುದು. ಈ ಚಹಾ ಮಾಡುವುದು ಹೇಗೆ ಅಂತೀರಾ.. ಇಲ್ಲಿದೆ ವಿವರ. ಮೊದಲು ಒಂದು ತುಂಡು ಶುಂಠಿ ಹಾಗೂ ದಾಲ್ಚಿನ್ನಿ ತೆಗೆದುಕೊಳ್ಳಿ. ಒಂದು ಸಣ್ಣ ಚಮಚ ಮೆಂತ್ಯೆಯನ್ನೂ ಹಾಕಿ. ಉಳಿದಂತೆ, ಎಂದಿನ ವಿಧಾನದಲ್ಲಿ ಚಹಾ ತಯಾರಿಸಿ. ಈ ಪಾನೀಯ ಕುಡಿಯುವುದರಿಂದ ದೇಹದ ವಿಷಾಂಶಗಳು ಹೊರಹೋಗುತ್ತವೆ. ತೂಕವೂ ಸ್ಥಿಮಿತದಲ್ಲಿರುತ್ತದೆ.

ಮೆಂತ್ಯೆ ಕಾಳು ಮತ್ತು ಜೇನು ದೇಹದ ತೂಕ ಇಳಿಸಲು, ಮೆಂತ್ಯೆ ಕಾಳು ಮತ್ತು ಜೇನನ್ನು ಬಳಸಿಕೊಳ್ಳಬಹುದು. ಜೇನು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೇಯ. ಮೆಂತ್ಯೆ ಕೂಡ ಆರೋಗ್ಯಕರ ಆಹಾರ. ಇವೆರಡೂ ಸೇರಿ ಆರೋಗ್ಯಕ್ಕೆ ಅನುಕೂಲವನ್ನೇ ಮಾಡುತ್ತವೆ. ಮೆಂತ್ಯೆ ಪೇಸ್ಟ್​ಗೆ ಜೇನು ಹಾಗೂ ಲಿಂಬು ರಸ ಸೇರಿಸಿ ಸೇವಿಸಬಹುದಾಗಿದೆ. ಈ ಅಭ್ಯಾಸದಿಂದಲೂ ತೂಕ ಇಳಿಸಿಕೊಳ್ಳಬಹುದು.

ಇದನ್ನೂ ಓದಿ: Health: ಸೊಂಟ ನೋವು, ಗಂಟು ನೋವಿಗೆ ಪರಿಹಾರವೇನು? ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಬಹುದೇ?

ಇದನ್ನೂ ಓದಿ: Health Tips: ಲಾಕ್​ಡೌನ್​ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ? ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ 6 ಅಂಶಗಳು

Published On - 6:48 pm, Mon, 29 March 21

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ