Health Tips: ಲಾಕ್​ಡೌನ್​ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ? ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ 6 ಅಂಶಗಳು

Weight Loss: ಲಾಕ್​ಡೌನ್ ಅವಧಿಯಲ್ಲಿ ದಪ್ಪಗಾಗಿ, ತೂಕ ಹೆಚ್ಚಿಸಿಕೊಂಡು ಈಗ ತೂಕ ಇಳಿಸಲು ನೀವು ಬಯಸುತ್ತೀರಾದರೆ ಈ ಅಂಶಗಳನ್ನು ಅಳವಡಿಸಿ, ಪಾಲಿಸಿ. ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ.

Health Tips: ಲಾಕ್​ಡೌನ್​ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ? ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ 6 ಅಂಶಗಳು
ತೂಕ ಇಳಿಸಿಕೊಳ್ಳುವುದು ಹೇಗೆ?
Follow us
| Updated By: ganapathi bhat

Updated on:Apr 05, 2022 | 1:12 PM

ಆರೋಗ್ಯಕರವಾಗಿರುವುದು ಮತ್ತು ದೇಹದ ತೂಕ ಇಳಿಸಿಕೊಳ್ಳುವುದು ಮಾಡಲು ಆಗದೇ ಇರುವ ರಾಕೆಟ್ ಸೈಯನ್ಸ್ ಏನಲ್ಲ. ಎಲ್ಲರೂ ಕೂಡ ತಮ್ಮ ತಮ್ಮ ಪ್ರಯತ್ನದಿಂದ ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳಬಹುದು. ಹಲವಾರು ಪೌಷ್ಠಿಕ ಆಹಾರ ತಜ್ಞರು ಇಲ್ಲಿ ಸೂಚಿಸಿರುವ ಆರೋಗ್ಯಕರ ಅಂಶಗಳನ್ನೇ ತಿಳಿಸುತ್ತಾರೆ. ಕಡಿಮೆ ಕೊಬ್ಬಿನ (Fat) ಅಂಶಗಳಿರುವ ಆಹಾರ ಸ್ವೀಕರಿಸುವುದು, ಮನೆಯಲ್ಲೇ ಕೈಗೊಳ್ಳಬಹುದಾದ ಫಿಟ್ನೆಸ್ ಸೂತ್ರಗಳನ್ನು ಅಳವಡಿಸುವುದು ಸಣ್ಣ ಅವಧಿಯಲ್ಲೇ ಉತ್ತಮ ಫಲಿತಾಂಶ ಕೊಡಬಹುದು.

ಬೆಳಗ್ಗಿನ ಉಪಹಾರ ಆರೋಗ್ಯಪೂರ್ಣವಾಗಿರಲಿ ಹಲವಾರು ಮಂದಿ ಬೆಳಗ್ಗೆ ತಿಂಡಿ ತಿನ್ನದೆ, ಅವಸರ ಅವಸರವಾಗಿ ದಿನ ಆರಂಭಿಸುತ್ತಾರೆ. ಕೆಲವಷ್ಟು ಜನರು ತಣ್ಣಗಿನ ಆಹಾರ ಸೇವಿಸುವುದೂ ಮಾಡಬಹುದು. ಅಥವಾ ಪ್ರೊಸೆಸ್ಡ್ ತಿಂಡಿ-ತಿನಿಸುಗಳನ್ನು ತಿನ್ನುವುದೂ ಇದೆ. ಕೆಲಸಕ್ಕೆ ಹೋಗುವ ಯುವಜನರು, ಕಾಲೇಜಿಗೆ ಹೋಗುವ ಮಕ್ಕಳೂ ಹೀಗೆ ಸಂಸ್ಕರಣಗೊಂಡ ತಿಂಡಿಯನ್ನು ತಿನ್ನುತ್ತಾರೆ. ಆದರೆ ಇದು ಉತ್ತಮ ಪದ್ಧತಿಯಲ್ಲ. ನಮ್ಮ ಆರೋಗ್ಯ ವ್ಯವಸ್ಥೆ ಮತ್ತು ತೂಕ ಹೆಚ್ಚಲು ಇಂಥ ಅನಾರೋಗ್ಯಕರ ಪದ್ಧತಿಯೂ ಕಾರಣ. ಬೆಳಗ್ಗೆ ಆದಷ್ಟು ಬಿಸಿಯಾದ, ಮನೆಯಲ್ಲೇ ಮಾಡಿದ ತಿಂಡಿ ಸೇವಿಸಿ.

ಹಣ್ಣು, ತರಕಾರಿ ತಿನ್ನಿರಿ ಆರೋಗ್ಯ ತಜ್ಞರು ಸಲಹೆ ನೀಡುವಂತೆ ನಾವು ಪ್ರತಿನಿತ್ಯ ಐದರಿಂದ ಏಳು ಬಾರಿ ಹಣ್ಣು ಅಥವಾ ತರಕಾರಿ ಸೇವಿಸಬೇಕು. ಹಣ್ಣು ಮತ್ತು ತರಕಾರಿಗಳು ಫೈಬರ್ ಅಂಶವನ್ನು ಹೊಂದಿರುತ್ತದೆ. ದೇಹದ ಪಚನಕ್ರಿಯೆ ಅಥವಾ ಜೀರ್ಣಶಕ್ತಿ ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ. ದೇಹದ ಆರೋಗ್ಯ ಸರ್ವತೋಮುಕವಾಗಿ ವೃದ್ಧಿಯಾಗಲು ಸಹಾಯ ಮಾಡುತ್ತದೆ.

ಡ್ರೈ ಫ್ರೂಟ್ಸ್​ನಂಥ ಆಹಾರಗಳು ನಿಮ್ಮ ಪಟ್ಟಿಯಲ್ಲಿರಲಿ ಪ್ರೊಟೀನ್ ಅಧಿಕವಾಗಿ ಹೊಂದಿರುವ ಬೀಜಗಳು, ಡ್ರೈ ಫ್ರೂಟ್​ಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಆಗಾಗ್ಗೆ ಕುರುಕಲು ತಿಂಡಿ, ಕರಿದ, ಖಾರ ಪದಾರ್ಥಗಳನ್ನು ತಿನ್ನುವ ಬದಲು ಇಂಥಾ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಊಟ-ತಿಂಡಿಯ ನಡುವಿನ ಸಣ್ಣ ಹಸಿವನ್ನು ಓಡಿಸಲು ಈ ಆಹಾರ ಸೇವನೆ ಉತ್ತಮ ಆಯ್ಕೆ. ಹಾಗೆಂದು ಅತಿಯಾಗಿ ಈ ಆಹಾರ ಸೇವನೆ ಕೂಡ ಒಳ್ಳೆಯದಲ್ಲ. ಹೆಚ್ಚು ಕ್ಯಾಲೊರಿ ಪ್ರಮಾಣ ಇರುವ ಈ ಪದಾರ್ಥಗಳನ್ನು ಹೆಚ್ಚು ತಿಂದರೆ ನಿಮ್ಮ ತೂಕ ಇಳಿಸುವ ಗುರಿ ತಪ್ಪಬಹುದು. ನಿಯಮಿತವಾಗಿ ತಿನ್ನಿರಿ.

ಊಟ-ತಿಂಡಿ ಸಮಯದಲ್ಲಿ ಮೊಬೈಲ್ ಇತ್ಯಾದಿ ಬಳಸುವುದು ನಿಲ್ಲಿಸಿ ಊಟ ಮಾಡುವಾಗ ಮೊಬೈಲ್ ಒತ್ತುವುದು, ಟಿವಿ ನೋಡುವುದು ಹಲವರ ಅಭ್ಯಾಸ. ಈ ಅಭ್ಯಾಸ ಒಳ್ಳೆಯದಲ್ಲ. ದಯವಿಟ್ಟು ಅದನ್ನು ನಿಲ್ಲಿಸಿ. ಟಿವಿ ನೋಡುತ್ತಾ, ಮೊಬೈಲ್ ಒತ್ತುತ್ತಾ ಒಂದು ಒತ್ತಡದಲ್ಲಿ ನೀವು ಆಹಾರ ಸೇವನೆ ಮಾಡುತ್ತೀರಿ. ಅದರಿಂದ ಕೆಲವು ಬಾರಿ ಓವರ್ ಈಟಿಂಗ್ (ಅತಿಯಾದ ಆಹಾರ ಸೇವನೆ) ಅಥವಾ ಅಶಿಸ್ತಿನ ಆಹಾರ ಸೇವನೆ ಅಭ್ಯಾಸ ಹೆಚ್ಚಾಗಬಹುದು. ಹಾಗಾಗಿ, ಊಟ ಮಾಡುವಾಗ ಒಪ್ಪವಾಗಿ ಊಟ ಮಾಡಲು ಮಾತ್ರ ಗಮನ ಹರಿಸಿ.

ಮಲಗುವುದಕ್ಕೆ 2 ಗಂಟೆ ಮೊದಲೇ ಊಟ ಮಾಡಿ ಇನ್ನೇನು ಮಲಗುವ ಹೊತ್ತಾಯ್ತು ಎನ್ನುವಾಗ ಹಲವರು ಊಟ ಮಾಡಿ ಬರುತ್ತಾರೆ. ಕೈ ತೊಳೆದು ಬಂದು ಹಾಗೇ ಮಲಗಿ ಬಿಡುತ್ತಾರೆ. ಈ ಕ್ರಮ ಸರಿಯಲ್ಲ. ರಾತ್ರಿ ಮಲಗುವುದಕ್ಕೆ ಸುಮಾರು 2 ಗಂಟೆ ಮೊದಲು ಊಟ ಮಾಡಿ. ಹಾಗೂ ರಾತ್ರಿ ವೇಳೆ ಕಡಿಮೆ ಪ್ರಮಾಣದ ಊಟ ಸಾಕು. ಹೊಟ್ಟೆಗೆ ಭಾರವಾಗದಂತೆ, ಜೀರ್ಣಕ್ಕೆ ಸುಲಭವಾಗುವಂತೆ ಆಹಾರ ಸೇವಿಸಿ. ಇದರಿಂದ ಉತ್ತಮ ನಿದ್ರೆ ಮಾಡಲು ಕೂಡ ಸಹಾಯವಾಗುತ್ತದೆ.

ಪ್ರತಿನಿತ್ಯ ಕನಿಷ್ಠ 2 ರಿಂದ 2.5 ಲೀಟರ್ ನೀರು ಕುಡಿಯಿರಿ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯ ಕಾಪಾಡಲು ಅವಶ್ಯಕ. ಟಾಕ್ಸಿಕ್ ಅಂಶಗಳನ್ನು ದೇಹದಿಂದ ಹೊಹಾಕಲು ನೀರು ಕುಡಿದಷ್ಟು ಒಳ್ಳೆಯದು. ಸುಸ್ತು, ತಲೆ ನೋವು ಹಾಗೂ ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಹೊಟ್ಟೆ ಉಬ್ಬರ, ಅಸಿಡಿಟಿ ಇತ್ಯಾದಿ ಕಡಿಮೆಯಾಗಲು ಸಹಕಾರಿ.

ಲಾಕ್​ಡೌನ್ ಅವಧಿಯಲ್ಲಿ ದಪ್ಪಗಾಗಿ, ತೂಕ ಹೆಚ್ಚಿಸಿಕೊಂಡು ಈಗ ತೂಕ ಇಳಿಸಲು ನೀವು ಬಯಸುತ್ತೀರಾದರೆ ಈ ಅಂಶಗಳನ್ನು ಅಳವಡಿಸಿ, ಪಾಲಿಸಿ. ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ.

ಇದನ್ನೂ ಓದಿ: Health Tips: ನೀವು ಟೊಮ್ಯಾಟೊ ಪ್ರಿಯರಾ?- ಮಿತಿಮೀರಿ ತಿನ್ನುತ್ತಿದ್ದರೆ ಎಚ್ಚರ.. ನಿಮ್ಮ ಆರೋಗ್ಯವನ್ನೇ ಹಾಳುಗೆಡವಬಹುದು ಈ ಕೆಂಪುಹಣ್ಣು

Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..

Published On - 10:14 pm, Fri, 26 March 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ