Health: ಸೊಂಟ ನೋವು, ಗಂಟು ನೋವಿಗೆ ಪರಿಹಾರವೇನು? ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಬಹುದೇ?

ಡಾ. ನಾರಾಯಣ ಹುಳ್ಸೆ, ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್​ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಎರಡನೆಯ ಭಾಗ ಇಲ್ಲಿದೆ.

Health: ಸೊಂಟ ನೋವು, ಗಂಟು ನೋವಿಗೆ ಪರಿಹಾರವೇನು? ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಬಹುದೇ?
ಸಂಧಿವಾತ, ಗಂಟುಮೂಳೆ ನೋವಿಗೆ ಪರಿಹಾರವೇನು?
Follow us
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 29, 2021 | 3:58 PM

ಗಂಟುಮೂಳೆ ನೋವು ಅಥವಾ ಸಂಧಿವಾತ ಬಹಳಷ್ಟು ಜನರನ್ನು ಕಾಡುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ಏನು ಕ್ರಮ ಕೈಗೊಳ್ಳಬಹುದು? ಗಂಟುಮೂಳೆ ಬದಲಾವಣೆಯ ಶಸ್ತ್ರಚಿಕಿತ್ಸೆ (ಜಾಯಿಂಟ್ ರಿಪ್ಲೇಸ್​ಮೆಂಟ್) ಮಾಡಬಹುದೇ? ಯಾವೆಲ್ಲಾ ವಿಧದ ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆಗಳಿವೆ? ಇದನ್ನು ಮಾಡಿಸುವುದಿದ್ದರೆ ಎಷ್ಟು ಖರ್ಚಾಗುತ್ತದೆ? ಹೀಗೇ ಹಲವು ಪ್ರಶ್ನೆಗಳು ಜನಸಾಮಾನ್ಯರಾದ ನಮ್ಮ ಮುಂದಿರುವುದು ಸಹಜ. ಅದೆಲ್ಲದಕ್ಕೂ ಉತ್ತರವಾಗಿ ಬೆಂಗಳೂರಿನ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಹುಳ್ಸೆ ‘ಜಾಯಿಂಟ್ ರಿಪ್ಲೇಸ್​ಮೆಂಟ್ಸ್’ (Joint Replacements- A Patient’s Handbook) ಎಂಬ ಕೃತಿ ರಚಿಸಿದ್ದಾರೆ.

ಡಾ. ನಾರಾಯಣ ಹುಳ್ಸೆ, ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್​ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಎರಡನೆಯ ಭಾಗ ಇಲ್ಲಿದೆ. ಮೊದಲನೆಯ ಭಾಗದಲ್ಲಿ ಜಾಯಿಂಟ್ ರಿಪ್ಲೇಸ್​ಮೆಂಟ್ ಎಂದರೇನು? ಸಂಧಿವಾತ, ಗಂಟುಮೂಳೆ ನೋವು ಯಾಕಾಗುತ್ತದೆ? ಇದಕ್ಕೆಲ್ಲಾ ಜಾಯಿಂಟ್ ರಿಪ್ಲೇಸ್​ಮೆಂಟ್ ಸೂಕ್ತ ಪರಿಹಾರವೇ? ಎಂಬ ಬಗ್ಗೆ ತಿಳಿಸಿದ್ದೆವು.

ಸಂಪೂರ್ಣ ಮೊಣಕಾಲು ಗಂಟು ಬದಲಾವಣೆ ಮೊಣಕಾಲಿನ ಗಂಟು ನೋವು ಬಹಳವಾಗಿ ಕಾಡುತ್ತಿದ್ದರೆ, ಕಾಲುಗಂಟು ನೋವಿನಿಂದ ನಿಮ್ಮ ದಿನನಿತ್ಯದ ಕೆಲಸಗಳಿಗೂ ಸಮಸ್ಯೆ ಆಗುತ್ತಿದ್ದರೆ ಹಾಗೂ ಗಂಟು ನೋವು ಇಲ್ಲದಂತೆ ಮಾಡಲು ಬೇರೆ ಆಯ್ಕೆಗಳು ಇಲ್ಲವಾದರೆ, ಅಂಥ ಸಂದರ್ಭದಲ್ಲಿ ಮೊಣಕಾಲು ಗಂಟು ಬದಲಾವಣೆ ಶಸ್ತ್ರಚಿಕಿತ್ಸೆ (Total Knee Replacement) ಮಾಡಿಕೊಳ್ಳಬಹುದು.

ಸಂಪೂರ್ಣ ಮೊಣಕಾಲು ಗಂಟು ಬದಲಾವಣೆಯನ್ನು (Total Knee Replacement) ಆರ್ತ್ರೋಪ್ಲ್ಯಾಸ್ಟಿ (Total Knee Arthroplasty) ಎಂದೂ ಕರೆಯುತ್ತಾರೆ. ಇದು ಆಧುನಿಕ ವೈದ್ಯಕೀಯ ಕ್ಷೇತ್ರದ ಅತಿ ಯಶಸ್ವಿ ಹಾಗೂ ಕಡಿಮೆ ಖರ್ಚಿನ ಆವಿಷ್ಕಾರವಾಗಿದೆ. ಕಳೆದ ದಶಕದಲ್ಲಿ ಈ ವಿಧಾನದ ವೈದ್ಯಕೀಯ ಚಿಕಿತ್ಸೆ ನಡೆಸುವವರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಹಾಗೂ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಅಂದಾಜಿಸಲಾಗಿದೆ. ಗಂಟು ನೋವು ಕಡಿಮೆ ಮಾಡುವುದು, ದಿನದ ಕೆಲಸ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳುವುದು, ಗಂಟಿನ ಆಕಾರವನ್ನು ಸರಿಯಾಗಿರಿಸುವುದು ಈ ಗಂಟುಮೂಳೆ ಬದಲಾವಣೆಯ ಗುರಿಯಾಗಿದೆ.

ಸಂಪೂರ್ಣ ಸೊಂಟದ ಮೂಳೆ ಬದಲಾವಣೆ ಸಂಪೂರ್ಣ ಸೊಂಟದ ಗಂಟುಮೂಳೆ ಬದಲಾವಣೆ (Total hip replacement) ಜನರು ಹೆಚ್ಚಾಗಿ ಮೊರೆಹೋಗುವ ಇನ್ನೊಂದು ವಿಧಾನದ ಚಿಕಿತ್ಸೆಯಾಗಿದೆ. ಸೊಂಟದ ಗಂಟುಮೂಳೆ ಭಾಗದಲ್ಲಿ ಅತಿಯಾದ ನೋವು, ಸಂಧಿವಾತ ಹಾಗೂ ಇತರ ಸಮಸ್ಯೆಗಳಿಂದ ದೂರವಾಗಲು ಈ ಚಿಕಿತ್ಸೆ ನೀಡಲಾಗುತ್ತದೆ. ಸೊಂಟದ ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಮೂಳೆಚಿಕಿತ್ಸೆ ವಿಭಾಗದ ಯಶಸ್ವಿ ಆವಿಷ್ಕಾರವಾಗಿದ್ದು ಇದನ್ನು ‘The operation of the 20th century’ ಎಂದು ಕರೆಯುತ್ತಾರೆ. ಈ ಚಿಕಿತ್ಸೆಯಿಂದ ಲಕ್ಷಾಂತರ ಮಂದಿಯ ಜೀವನ ಗುಣಮಟ್ಟ ಸುಧಾರಿಸಿದೆ.

ಇತರ ಗಂಟುಮೂಳೆ ಬದಲಾವಣೆ ಚಿಕಿತ್ಸೆಗಳು ದೇಹದ ಇತರ ಗಂಟುಮೂಳೆ ಭಾಗಗಳಾದ ಭುಜ, ಮೊಣಕೈ, ಪಾದದ ಗಂಟುಗಳಲ್ಲಿ ಅತಿಯಾದ ನೋವು ಕಾಣಿಸಿಕೊಂಡರೆ ಅವುಗಳ ಬದಲಾವಣೆಯ ಶಸ್ತ್ರಚಿಕಿತ್ಸೆ ಕೂಡ ಮಾಡಬಹುದು. ಆದರೆ, ಇವುಗಳು ಕಾಲು ಗಂಟುಮೂಳೆ ಹಾಗೂ ಸೊಂಟದ ಶಸ್ತ್ರಚಿಕಿತ್ಸೆಗಳಷ್ಟು ಜನಪ್ರಿಯವಾದುದಲ್ಲ. ಅಲ್ಲದೆ, ಯುವಸಮುದಾಯದ ಜನರಿಗೆ ಹೆಚ್ಚುವರಿಯಾಗಿ ಭಾಗಶಃ ಜಾಯಿಂಟ್ ರಿಪ್ಲೇಸ್​ಮೆಂಟ್ (partial joint replacements) ಚಿಕಿತ್ಸೆಗಳು ಕೂಡ ಲಭ್ಯವಿದೆ.

ಜಾಯಿಂಟ್ ರಿಪ್ಲೇಸ್​ಮೆಂಟ್​ಗೆ ಎಷ್ಟು ಖರ್ಚಾಗುತ್ತದೆ? ಆಸ್ಪತ್ರೆಯಿಂದ ಆಸ್ಪತ್ರೆಗೆ ಗಂಟುಮೂಳೆ ಶಸ್ತ್ರಚಿಕಿತ್ಸೆಯ ಹಣಕಾಸು ಖರ್ಚು ವ್ಯತ್ಯಾಸವಾಗಬಹುದು. ಆಸ್ಪತ್ರೆ ವಾರ್ಡ್, ಆಪರೇಷನ್ ಥಿಯೇಟರ್, ನರ್ಸಿಂಗ್ ಸೇವೆ ಹಾಗೂ ಆಹಾರದ ಖರ್ಚು. ಮೂಳೆ ಬದಲಾವಣೆ ಅಳವಡಿಕೆ ಪರಿಕರದ ಖರ್ಚು. ಶಸ್ತ್ರಚಿಕಿತ್ಸಕರಿಗೆ, ಅನಸ್ತೇಶಿಯಾ ತಜ್ಞರಿಗೆ ಹಾಗೂ ವೈದ್ಯಕೀಯ ತಂಡದ ಮೊತ್ತ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ದಿನಗಳು ಹಾಗೂ ವಾರ್ಡ್ ಮೇಲೆ ಅವಲಂಬಿಸಿ ಖರ್ಚು ವ್ಯತ್ಯಾಸವಾಗಬಹುದು.

ಈ ಚಿಕಿತ್ಸಾ ವಿಧಾನದ ಆಧುನಿಕ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕಂಪ್ಯೂಟರ್ ನೇವಿಗೇಷನ್, ಕೈನೆಮ್ಯಾಟಿಕ್ ಕಾನ್ಸೆಪ್ಟ್, 3ಡಿ ಪ್ರಿಂಟಿಂಗ್ ಹಾಗೂ ರೋಬೊಟಿಕ್ ಜಾಯಿಂಟ್ ರಿಪ್ಲೇಸ್​ಮೆಂಟ್ ಮುಂತಾದ ತಂತ್ರಜ್ಞಾನಗಳನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಹಾಗೆಂದು ತಾಂತ್ರಿಕ ಆವಿಷ್ಕಾರದ ಹಿಂದೆಯೇ ಹೋಗಬೇಕಾಗಿಲ್ಲ.

JOINT REPLACEMENT DR NARAYAN HULSE

JOINT REPLACEMENT ಪುಸ್ತಕದ ಜೊತೆ ಲೇಖಕ ಹಾಗೂ ವೈದ್ಯ ಡಾ. ನಾರಾಯಣ್ ಹುಳ್ಸೆ

ಇದನ್ನೂ ಓದಿ: Health Tips: ಲಾಕ್​ಡೌನ್​ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ? ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ 6 ಅಂಶಗಳು

Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..