Health Tips: ರಾತ್ರಿ ಮಲಗುವ ಮುಂಚೆ ಎಂಥಾ ಆಹಾರ ಸೇವಿಸಬೇಕು? ಇಲ್ಲಿದೆ ಮಾಹಿತಿ

ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು, ಆರೋಗ್ಯಕ್ಕೆ ಹಣ ವ್ಯಯಿಸುವುದು ಉತ್ತಮ. ಇದೇ ನಿರ್ಧಾರವನ್ನು ಜನರೂ ತೆಗೆದುಕೊಳ್ಳುತ್ತಿದ್ದಾರೆ. ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿದ್ದಾರೆ.

Health Tips: ರಾತ್ರಿ ಮಲಗುವ ಮುಂಚೆ ಎಂಥಾ ಆಹಾರ ಸೇವಿಸಬೇಕು? ಇಲ್ಲಿದೆ ಮಾಹಿತಿ
ರಾತ್ರಿ ಮಲಗುವ ಮುಂಚೆ ಹಣ್ಣುಗಳನ್ನು ತಿನ್ನಿ
Follow us
| Updated By: ganapathi bhat

Updated on:Apr 05, 2022 | 1:05 PM

ರಾತ್ರಿ ಮಲಗುವ ಮುಂಚೆ ಏನು ತಿನ್ನಬೇಕು? ಎಷ್ಟು ತಿನ್ನಬೇಕು? ಹೇಗೆ ಆಹಾರ ಕ್ರಮ ರೂಢಿಸಿಕೊಳ್ಳಬೇಕು ಎಂದು ನಮ್ಮಲ್ಲಿ ಹಲವರಿಗೆ ಸ್ಪಷ್ಟ ಅರಿವಿಲ್ಲ. ಬೆಳಗ್ಗಿನಿಂದ ಸಂಜೆಯತನಕ ಕಡಿಮೆ ಆಹಾರ ಸ್ವೀಕರಿಸಿ, ರಾತ್ರಿ ಮಲಗುವ ಮುಂಚೆ ಭರ್ಜರಿಯಾಗಿ ಉಂಡುಬಿಡುತ್ತೇವೆ. ಮಲಗುವ ಮೊದಲಿನ ಆಹಾರ ಪದ್ಧತಿ ಹೇಗಿರಬೇಕು ಎಂದು ಬಹಳಷ್ಟು ಮಂದಿ ಯೋಚಿಸುವುದೇ ಇಲ್ಲ. ಈ ಬಗ್ಗೆ ತಿಳುವಳಿಕೆ ಇರಬೇಕಾದದ್ದು ಅನಿವಾರ್ಯ. ರಾತ್ರಿ ಸ್ವೀಕರಿಸುವ ಆಹಾರ, ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಬಲ್ಲದು.

ಮನುಷ್ಯರಿಗೆ ಆರೋಗ್ಯವೇ ಸಂತೋಷ. ಆರೋಗ್ಯವೇ ಭಾಗ್ಯ. ಎಲ್ಲಾ ಇದ್ದೂ ಆರೋಗ್ಯ ಇಲ್ಲವಾದರೆ ಏನೂ ಪ್ರಯೋಜನವಿಲ್ಲ. ನಾವು ಆರೋಗ್ಯವಾಗಿದ್ದರೆ, ಏನನ್ನೂ ಸಾಧಿಸಬಹುದು. ಆದರೆ, ಈಗಿನ ದಿನಮಾನದಲ್ಲಿ ನಮ್ಮ ಬದುಕು ಸಂಪೂರ್ಣ ಬದಲಾಗುತ್ತಿದೆ. ಪರಿಸ್ಥಿತಿ ಹದಗೆಡುತ್ತಿರುವಂತೆ, ಆರೋಗ್ಯದ ಬಗ್ಗೆ ತಿಳುವಳಿಕೆ ಜನರ ಗಮನ ಸೆಳೆಯುತ್ತಿದೆ.

ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು, ಆರೋಗ್ಯಕ್ಕೆ ಹಣ ವ್ಯಯಿಸುವುದು ಉತ್ತಮ. ಇದೇ ನಿರ್ಧಾರವನ್ನು ಜನರೂ ತೆಗೆದುಕೊಳ್ಳುತ್ತಿದ್ದಾರೆ. ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಿ, ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ನೆಲೆಯಲ್ಲಿ ಆರೋಗ್ಯ ತಜ್ಞರು ಕೂಡ ಸಲಹೆ ನೀಡುತ್ತಿದ್ದಾರೆ. ಯಾವ ಯಾವ ಸಂದರ್ಭದಲ್ಲಿ ಆಹಾರ ಸ್ವೀಕರಿಸುವ ಕ್ರಮ ಹೇಗಿರಬೇಕು ಎಂದು ತಿಳಿಹೇಳುತ್ತಿದ್ದಾರೆ.

ರಾತ್ರಿ ಆಹಾರ ಸ್ವೀಕಾರ ಹೇಗಿರಬೇಕು? ಬೆಳಗ್ಗಿನ ತಿಂಡಿ ಎಷ್ಟು ಮುಖ್ಯವೋ ರಾತ್ರಿ ಊಟವೂ ಅಷ್ಟೇ ಅವಶ್ಯಕ. ಆದರೆ, ರಾತ್ರಿ ಹೊತ್ತು ಹಿತ ಮತ್ತು ಮಿತವಾದ ಆಹಾರ ಸೇವನೆ ಮಾಡಬೇಕು. ಪ್ರೊಟೀನ್, ಕಾರ್ಬೊಹೈಡ್ರೇಟ್ ಯುಕ್ತ ಆಹಾರ ಸ್ವೀಕರಿಸಬೇಕು. ವೈದ್ಯರ ಸಲಹೆಯ ಆಹಾರಗಳು ಯಾವುವು ಎಂದು ಇಲ್ಲಿ ನೋಡಿ.

> ಸುಲಭವಾಗಿ ಜೀರ್ಣವಾಗುವಂಥ ಹಣ್ಣುಗಳನ್ನು ತಿನ್ನುವುದು ಬಹಳ ಉತ್ತಮ >> ಸೌತೆಕಾಯಿ ದೋಸೆಯನ್ನು ರಾತ್ರಿ ತಿನ್ನಬಹುದು. ಇದು ಪ್ರೊಟೀನ್ಸ್, ಕೊಬ್ಬು ಮತ್ತು ಕಾರ್ಬೊಹೈಡ್ರೇಟ್ ಅಂಶಗಳನ್ನು ಸಮತೋಲನದಲ್ಲಿ ಒದಗಿಸಿ, ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ >> ಮೊಸರು ಸೇವನೆ ಕೂಡ ಆರೋಗ್ಯಕರ. ರಾತ್ರಿ ಊಟದಲ್ಲಿ ಸ್ವಲ್ಪ ಮೊಸರು ಸೇವಿಸಬಹುದು. >> ದ್ರಾಕ್ಷಿ, ಸ್ಟ್ರಾಬೆರಿ, ಬಾಳೆಹಣ್ಣು ಹಾಗೂ ಸೇಬುಹಣ್ಣನ್ನು ಮೊಸರಿನೊಂದಿಗೆ ತಿನ್ನಬಹುದು. ಇದರಿಂದ ದೇಹಕ್ಕೆ ಶಕ್ತಿ ಒದಗುತ್ತದೆ. >> ದ್ರಾಕ್ಷಿ, ದಾಳಿಂಬೆ ಹಾಗೂ ಸೇಬು ಹಣ್ಣನ್ನು ಮೊಸರಿಗೆ ಸೇರಿಸದೆ, ಹಾಗೆಯೇ ಸೇವನೆ ಮಾಡಬಹುದು >> ಶೇಂಗಾ ಅಥವಾ ಕಡಲೆಕಾಯಿಯನ್ನು ಅಲ್ಪ ಪ್ರಮಾಣದಲ್ಲಿ ತಿನ್ನುವುದರಿಂದ ಪ್ರೊಟೀನ್ ಅಂಶ ದೇಹಕ್ಕೆ ಲಭಿಸುತ್ತದೆ ರಾತ್ರಿ ವೇಳೆಯಲ್ಲಿ ಹಿತ ಮಿತವಾಗಿ, ಶಿಸ್ತುಬದ್ಧ ಆಹಾರ ಕ್ರಮ ರೂಢಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

ಇದನ್ನೂ ಓದಿ: Health: ಸೊಂಟ ನೋವು, ಗಂಟು ನೋವಿಗೆ ಪರಿಹಾರವೇನು? ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಬಹುದೇ?

Published On - 8:44 pm, Mon, 29 March 21

ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್