ಮೂತ್ರ ವಿಸರ್ಜನೆ ಸರಿಯಾಗಿ ಆಗದಿದ್ದರೆ ಈ ಕೆಲವು ಸಮಸ್ಯೆಗೆ ಒಗ್ಗಿಕೊಂಡಿದ್ದೀರಿ ಎಂದೇ ಅರ್ಥ! ಎಚ್ಚರ
ಮೂತ್ರ ಕಟ್ಟಿಕೊಂಡರೆ ಒಂದು ರೀತಿಯ ತೊಂದರೆ ಉಂಟಾದರೆ ಅತಿಯಾಗಿ ಮೂತ್ರವಾಗುವುದೂ ಸಹ ಅನಾರೋಗ್ಯವನ್ನು ಸೂಚಿಸುತ್ತದೆ. ಹಾಗಾಗಿ ನಿಮ್ಮ ಪ್ರತಿನಿತ್ಯದ ಜಿವನ ಕ್ರಮದ ಬಗ್ಗೆ ಲಕ್ಷ್ಯವಿರಲಿ.
ನಮ್ಮ ಆರೋಗ್ಯ ನಮ್ಮ ಶಕ್ತಿ. ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನೂ ಬೇಕಾದರೂ ಸಾಧಿಸಬಲ್ಲದು ಎನ್ನುತ್ತಾರೆ ಹಿರಿಯರು. ಹಾಗಾಗಿಯೇ ಚಿಕ್ಕ ವಯಸ್ಸಿನಿಂದಲೂ ಪೌಷ್ಟಿಕ ಆಹಾರವನ್ನು ಸೇವಿಸುತ್ತಾ ಬರುತ್ತೇವೆ. ಮಕ್ಕಳಿಂದ ಹಿಡಿದು ವಯಸ್ಕರವೆಗೂ ರೋಗಗಳ ಭಯ ಇದ್ದೇ ಇದೆ. ರೋಗವೊಂದು ಬಾರದಿದ್ದರೆ ಸಾಕು ಎಂದು ದೇವರಲ್ಲಿ ಬೇಡಿಕೊಳ್ಳದ ದಿನವೇ ಇಲ್ಲ. ಹೀಗಿರುವಾಗ ಆರೋಗ್ಯದ ದೃಷ್ಟಿಯಿಂದ ಕೆಲವು ವಿಷಯಗಳನ್ನು ನೆನಪಿಡಲೇಬೇಕು.
ಮಕ್ಕಳು ಮೂತ್ರವನ್ನು ಹೆಚ್ಚು ಕಾಲ ಕಟ್ಟಿಕೊಳ್ಳುತ್ತಾರೆ. ವಯಸ್ಕರೂ ಕೂಡಾ ಮೂತ್ರ ಕಟ್ಟಿಕೊಳ್ಳುವ ಅಭ್ಯಾಸ ಇರುತ್ತದೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಮೂತ್ರ ಕಟ್ಟಿಕೊಂಡರೆ ಒಂದು ರೀತಿಯ ತೊಂದರೆ ಉಂಟಾದರೆ ಅತಿಯಾಗಿ ಮೂತ್ರವಾಗುವುದೂ ಸಹ ಅನಾರೋಗ್ಯವನ್ನು ಸೂಚಿಸುತ್ತದೆ. ಹಾಗಾಗಿ ನಿಮ್ಮ ಪ್ರತಿನಿತ್ಯದ ಜಿವನ ಕ್ರಮದ ಬಗ್ಗೆ ಲಕ್ಷ್ಯವಿರಲಿ.
ಒಬ್ಬ ವ್ಯಕ್ತಿ ಸಾಮಾನ್ಯವಾಗಿ ದಿನಕ್ಕೆ 3 ಲೀಟರ್ಗಿಂತಲೂ ಹೆಚ್ಚಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದರೆ ಆತ ಪಾಲಿಯುರಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದರ್ಥ. ಹಾಗಿರುವಾಗ ಯಾವುದೇ ಸಮಸ್ಯೆ ಕಾಡತೊಡಗಿರದೆ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗಿ.
ರೋಗ ಲಕ್ಷಣಗಳು ಅನೇಕರು ಮೂತ್ರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಆಲಸ್ಯ ತೋರುವುದು ಜೀವಕ್ಕೇ ಕುತ್ತು ತರುವ ಸಂಭವವಿರುತ್ತದೆ. ಹಾಗಾಗಿ ಎಂದಿಗೂ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ತೋರಬೇಡಿ.
ಮೂತ್ರ ಪಿಂಡ ಅಥವಾ ಮುತ್ರ ಕಲ್ಲು ಹಿಗ್ಗುವಿಕೆ ಮೂತ್ರದ ಸೋಂಕು ಮಧುಮೇಹ ಅತಿಯಾದ ಗಾಳಿಗುಳ್ಳೆಗಳು
ಇಂತಹ ಸಮಸ್ಯೆಗಳು ಮೂತ್ರವನ್ನು ಹೆಚ್ಚು ಕಟ್ಟಿಕೊಂಡಾಗ ಅಥವಾ ಅತಿಯಾದ ಮೂತ್ರ ವಿಸರ್ಜನೆ ಆಗುತ್ತಿದ್ದಾಗ ಕಾಣಿಸಿಕೊಳ್ಳುವ ರೋಗ ಲಕ್ಷಣಗಳು. ಹಾಗಿರುವಾಗ ಇಂತಹ ಯಾವುದೇ ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ತಕ್ಷಣವೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಕೆಲವರು ಸಣ್ಣ ಸಮಸ್ಯೆಯ ನಿರ್ಲಕ್ಷ್ಯವು ದೊಡ್ಡ ಪ್ರಮಾಣದಲ್ಲಿ ಹಾನಿಯುಂಟು ಮಾಡಬಹುದು. ಹೀಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ.
ಇದನ್ನೂ ಓದಿ:
Kidney Stone: ಮೂತ್ರಪಿಂಡದಲ್ಲಿ ಕಲ್ಲು ಇದೆ ಎಂದು ತಿಳಿಯುವುದು ಹೇಗೆ? ಈ ಲಕ್ಷಣಗಳೇ ಸಮಸ್ಯೆಗೆ ಮುನ್ನೆಚ್ಚರಿಕೆ
Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
Published On - 8:46 am, Thu, 29 July 21