WhatsApp: ವಾಟ್ಸ್​​ಆ್ಯಪ್​ನಲ್ಲಿ auto-reply ಮೆಸೇಜ್‌ ಮಾಡುವುದು ಹೇಗೆ ಗೊತ್ತಾ?: ಇಲ್ಲಿದೆ ಟ್ರಿಕ್

ವಾಟ್ಸ್ಆ್ಯಪ್​ನ ಸ್ಟ್ಯಾಂಡರ್ಡ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಈ ಫೀಚರ್ ಇಲ್ಲದಿರುವುದರಿಂದ ನೀವು ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗುತ್ತದೆ.

WhatsApp: ವಾಟ್ಸ್​​ಆ್ಯಪ್​ನಲ್ಲಿ auto-reply ಮೆಸೇಜ್‌ ಮಾಡುವುದು ಹೇಗೆ ಗೊತ್ತಾ?: ಇಲ್ಲಿದೆ ಟ್ರಿಕ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Vinay Bhat

Updated on: Jul 29, 2021 | 3:29 PM

ಫೇಸ್​ಬುಕ್ (Facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsaApp)​ ಅನ್ನು ಇಂದು ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಅಪ್ಡೇಟ್​ಗಳನ್ನು ನೀಡಿರುವ ವಾಟ್ಸ್​ಆ್ಯಪ್​ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಫೀಚರ್ ಬಿಡುಗಡೆ ಮಾಡಲಿದೆ. ಈಗಾಗಲೇ ಲಾಗೌಟ್ ಎಂಬ ಹೊಸ ಫೀಚರ್ ಪರೀಕ್ಷಾ ಹಂತದಲ್ಲಿದೆಯಂತೆ.

ಇದರ ಬೆನ್ನಲ್ಲೆ ವಾಟ್ಸ್ಆ್ಯಪ್​ನಲ್ಲಿ ಆಟೋ ರಿಪ್ಲೇ ಎಂಬ ಮತ್ತೊಂದು ಹೊಸ ಫೀಚರ್ಸ್‌ ಸದ್ಯದಲ್ಲಿಯೇ ಲಭ್ಯವಾಗಲಿದೆ ಎನ್ನಲಾಗ್ತಿದೆ. ಈ ಫೀಚರ್ಸ್‌ ವಾಟ್ಸ್ಆ್ಯಪ್ ಬಿಸಿನೆಸ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆಯಷ್ಟೆ. ಸ್ಟ್ಯಾಂಡರ್ಡ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಈ ಫೀಚರ್ ಇಲ್ಲದಿರುವುದರಿಂದ ನೀವು ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗುತ್ತದೆ.

ಹೌದು, ವಾಟ್ಸ್ಆ್ಯಪ್​ನಲ್ಲಿ ನೀವು ಆಟೋ ರಿಪ್ಲೇ ಮೆಸೇಜ್‌ಗಳನ್ನು ಸೆಟ್‌ ಮಾಡಲು ” AutoResponder for WA ” ಎಂಬ ಅಪ್ಲಿಕೇಶನ್ ಡೌನ್​ಲೋಡ್ ಮಾಡಿ ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಇದನ್ನು ಹೇಗೆ ಬಳಸುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸುತ್ತೇವೆ.

ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ” AutoResponder for WA” ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅದನ್ನು ತೆರೆಯಿರಿ ಮತ್ತು ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ, ಇದು ಕೆಳಗಿನ ಎಡಭಾಗದಲ್ಲಿ ಇರುತ್ತದ. ನೀವು ಹೆಚ್ಚಾಗಿ ಸ್ವೀಕರಿಸುವ ಸಂದೇಶವನ್ನು ವಾಟ್ಸ್ಆ್ಯಪ್​ನಲ್ಲಿ ಟೈಪ್ ಮಾಡಬೇಕಾಗುತ್ತದೆ, ಅಥವಾ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಪ್ರತ್ಯುತ್ತರ ನೀಡಲು ಬಯಸುತ್ತದೆ. ಸರಳವಾಗಿ ಹೇಳುವುದಾದರೆ, ” AutoResponder for WA” ನಲ್ಲಿ ನೀವು ಉಳಿಸಿದ ಸಂದೇಶಗಳಿಗೆ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಪ್ರತಿಕ್ರಿಯಿಸುತ್ತದೆ.

ಅದನ್ನು ಟೈಪ್ ಮಾಡಿದ ನಂತರ, ನೀವು “ಆಟೋ ರಿಪ್ಲೇ” ಆಯ್ಕೆಯನ್ನು ಕಾಣುತ್ತೀರಿ. ಇದು ಅಟಟೋಮೆಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ನೀವು ಆಟೋ ರಿಪ್ಲೇ ಬಯಸುವ ಸಂದೇಶವನ್ನು ಉಳಿಸಬೇಕಾಗುತ್ತದೆ. ಅಪ್ಲಿಕೇಶನ್ ಎಲ್ಲಿ ರಿಪ್ಲೇ ಮಾಡಬೇಕು ಎಂದು ಸೆಟ್ ಮಾಡಬೇಕಷ್ಟೆ. ಒಬ್ಬರಿಗೆ ಅಥವಾ ಗುಂಪುಗಳು ಮತ್ತು ಎರಡೂ ಸೇರಿದಂತೆ ಹೀಗೆ ನೀವು ಮೂರು ಆಯ್ಕೆಗಳನ್ನು ಕಾಣುತ್ತೀರಿ. ನೀವು ಇದನೆಲ್ಲಾ ಪೂರೈಸಿದ ನಂತರ, ಟಿಕ್ ಮಾರ್ಕ್ ಅನ್ನು ಟ್ಯಾಪ್ ಮಾಡಬೇಕು. ಆಗ ಆಟೋ ರಿಪ್ಲೇ ಮೆಸೇಜ್‌ ಸೆಟ್‌ ಆಗಿರುತ್ತದೆ.

2021ರ ಭಾರತದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಯಾವುದು ಗೊತ್ತೇ?: ಇಲ್ಲಿದೆ ನೋಡಿ ಪಟ್ಟಿ

Best Smart TV: ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ 43 ಇಂಚಿನ ಈ 5 ಅದ್ಭುತ ಸ್ಮಾರ್ಟ್​ ಟಿವಿಗಳು: ಖರೀದಿಸಲು ಸೂಕ್ತ ಸಮಯ

(WhatsApp Tricks You know How to set auto-reply messages on the messaging app Whatsapp)