Best Smart TV: ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ 43 ಇಂಚಿನ ಈ 5 ಅದ್ಭುತ ಸ್ಮಾರ್ಟ್ ಟಿವಿಗಳು: ಖರೀದಿಸಲು ಸೂಕ್ತ ಸಮಯ
Best Smart TV Under 25000: ನಾವು ಇಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 25000 ರೂ. ಒಳಗೆ ಲಭ್ಯವಿರುವ 43 ಇಂಚಿನ 5 ಬೆಸ್ಟ್ ಸ್ಮಾರ್ಟ್ ಟಿವಿಗಳ ಬಗ್ಗೆ ತಿಳಿಸಿಕೊಡುತ್ತೇವೆ.
ನೀವು ಹೊಸ ಸ್ಮಾರ್ಟ್ ಟಿವಿ (Smart TV) ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕಡಿಮೆ ಇದ್ದರೆ ತಪ್ಪದೆ ಈ ಸುದ್ದಿ ಓದಿ. ಈಗ ಟೆಕ್ನಾಲಜಿ (Technology) ಮುಂದುವರೆದಂತೆ ಕಲರ್ ಟಿವಿ ವ್ಯಾಮೋಹದಲ್ಲಿದ್ದ ಜನ ಸ್ಮಾರ್ಟ್‌ಟಿವಿಗಳಿಗೆ ಮಾರುಹೋಗಿದ್ದಾರೆ. ಮಾರುಕಟ್ಟೆಯಲ್ಲಂತು ಹೊಸ ಮಾದರಿಯ ವಿಭಿನ್ನ ರೆಸಲ್ಯೂಶನ್ ಸಾಮರ್ಥ್ಯದ ಸ್ಮಾರ್ಟ್‌ಟಿವಿಗಳಿಗೆನೂ ಭರವಿಲ್ಲ. ದೊಡ್ಡ ಗಾತ್ರದ ಸ್ಮಾರ್ಟ್‌ಟಿವಿಗಳು ಇಂದು ಮಾರುಕಟ್ಟೆಯನ್ನ ಆವರಿಸಿಕೊಂಡಿದ್ದು, ಬಳಕೆದಾರರಿಗೆ ಉತ್ತಮ ವೀಕ್ಷಣೆಯ ಅನುಭವ ನೀಡುತ್ತಿವೆ.
ಈ ಸ್ಮಾರ್ಟ್‌ಟಿವಿಗಳು ಸ್ಮಾರ್ಟ್‌ಫೋನ್‌ಗಳ ಮಾದರಿಯಲ್ಲಿ ಆಪರೇಟಿಂಗ್ ಸಿಸ್ಟಮ್ ಅನ್ನು ಸಹ ಹೊಂದಿವೆ. ಮನೆಯಲ್ಲಿಯೇ ಕುಳಿತು ಚಿತ್ರಮಂದಿರದ ಅನುಭವವನ್ನು ಪಡೆಯಬಹುದಾಗಿದೆ. ಇಂದು ನಾವು ಇಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 25000 ರೂ. ಒಳಗೆ ಲಭ್ಯವಿರುವ 43 ಇಂಚಿನ 5 ಬೆಸ್ಟ್ ಸ್ಮಾರ್ಟ್ ಟಿವಿಗಳ ಬಗ್ಗೆ ತಿಳಿಸಿಕೊಡುತ್ತೇವೆ.
43-inch TCL Ultra HD (4K) LED Smart Android TV (43P8): ಇದರ ಬೆಲೆ ಕೇವಲ 24,490 ರೂ. ಆಗಿದೆ. 43 ಇಂಚಿನ ಸ್ಕ್ರೀನ್ ಹೊಂದಿದ್ದು, ಆಂಡ್ರಾಯ್ಡ್ ಟಿವಿ ಒಎಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ನಿಮಗೆ ಸಿನಿಮಾ ಮನೋರಂಜನೆಗಾಗಿ ನೆಟ್ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಪ್ರಮುಖ ಓಟಿಟಿ ಸೇವೆ ಇದರಲ್ಲಿದೆ.
Xiaomi Mi 4A Horizon Edition: ಶವೋಮಿ ಕಂಪೆನಿಯ ಬಹುತೇಕ ಎಲ್ಲ ಟಿವಿ ದುಬಾರಿಯದ್ದು. ಆದರೆ, ಇದರ ಬೆಲೆ ಕೇವಲ 23,999 ರೂ. ಆಗಿದೆ. ಇದು 1,920*1,080 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 43 ಇಂಚಿನ ಫುಲ್ ಹೆಚ್ಡಿ ಡಿಸ್ ಪ್ಲೇ ಅನ್ನು ಹೊಂದಿದೆ. ಕ್ವಾಡ್ ಕೋರ್ ಪ್ರೊಸೆಸರ್ನಿಂದ ಆವೃತ್ತವಾಗಿದ್ದು, 1GB RAM ಮತ್ತು 8GB ಸ್ಟೋರೆಜ್ ಆಯ್ಕೆ ಕೂಡ ಒದೆ. 20Wನ ಸ್ಟೀರಿಯೊ ಸ್ಪೀಕರ್ ಹೊಂದಿದ್ದು ಅದ್ಭುತ ಸೌಂಡ್ನ ಅನುಭವ ಪಡೆಯಬಹುದು.
43-inch Vu Premium Full HD LED (43US): ಶವೋಮಿ ಟಿವಿ ಮಾದರಿಯಲ್ಲೇ ಸ್ಲಿಮ್ ಆಗಿರುವ 43 ಇಂಚಿನ ವಿಯು ಪ್ರೀಮಿಯಂ ಫುಲ್ ಹೆಚ್ಡಿ ಟಿವಿ ಕೂಡ ಇದೆ. ಆಂಡ್ರಾಯ್ಡ್ ಟಿವಿ ಒಎಸ್ ಮತ್ತು 24W ಆಡಿಯೋ ಔಟ್ಪುಟ್ ಇದರ ಪ್ರಮುಖ ಹೈಲೇಟ್. ಅಲ್ಲದೆ ನೆಟ್ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಪ್ರಮುಖ ಓಟಿಟಿ ಸೇವೆ ನೀಡಲಾಗಿದೆ. ಇದರ ಬೆಲೆ 22,999 ರೂ. ಆಗಿದೆ.
43-inch AmazonBasics Full HD Smart LED TV: ಪ್ರಸಿದ್ಧ ಅಮೆಜಾನ್ ಸಂಸ್ಥೆ ತನ್ನ ಅಮೆಜಾನ್ ಬೇಸಿಕ್ ಬ್ರ್ಯಾಂಡಿಂಗ್ನಡಿಯಲ್ಲಿ ಟಿವಿಯನ್ನೂ ಬಿಡುಗಡೆ ಮಾಡಿದೆ. 43 ಇಂಚಿನ ಈ ಅಮೆಜಾನ್ ಬೇಸಿಕ್ ಫುಲ್ ಹೆಚ್ಡಿ ಸ್ಮಾರ್ಟ್ ಟಿವಿಯಲ್ಲಿ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಸೋನಿ ಟಿವಿ, ಹಾಟ್ ಸ್ಟಾರ್ ಸೇರಿದಂತೆ ಅನೇಕ ಓಟಿಟಿ ಸೇವೆ ಲಭ್ಯವಿದೆ. ಅಲೆಕ್ಸಾ ಕೂಡ ಇದಕ್ಕೆ ಸಪೋರ್ಟ್ ಆಗುತ್ತದೆ. ಇದರ ಬೆಲೆ ಅಮೆಜಾನ್ನಲ್ಲಿ 25000 ರೂ.
43-inch Onida Full HD Smart LED Fire TV: ಒನಿಡಾ ಕಂಪೆನಿಯ 43 ಇಂಚಿನ ಫುಲ್ ಹೆಚ್ ಡಿ ಸ್ಮಾರ್ಟ್ ಎಲ್ಇಡಿ ಫೈರ್ ಟಿವಿಯ ಬೆಲೆ 24,999 ರೂ.. ಇದು ಫೈರ್ ಟಿವಿ ಒಎಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. 20Wನ ಸ್ಟೀರಿಯೊ ಸ್ಪೀಕರ್ ಹೊಂದಿದ್ದು ಅದ್ಭುತ ಸೌಂಡ್ನ ಅನುಭವ ಪಡೆಯಬಹುದು. ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಸೋನಿ ಟಿವಿ, ಹಾಟ್ ಸ್ಟಾರ್ ಸೇರಿದಂತೆ ಅನೇಕ ಓಟಿಟಿ ಸೇವೆ ಲಭ್ಯವಿದೆ.
Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ VI
(Low Budget Smart TV Best Smart TVs With up to 43-Inch Screen Under Rs 25000 in India in July 2021)
Published On - 12:05 pm, Thu, 29 July 21