Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ VI
ಈ ಯೋಜನೆಗಳಲ್ಲಿ ಡೇಟಾ ಬಳಕೆಗೆ ದೈನಂದಿನ ಮಿತಿ ಇರುವುದಿಲ್ಲ ಎಂಬುದು ವಿಶೇಷ. ಹಾಗೆಯೇ ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ರೋಮಿಂಗ್ ಕರೆ ಮಾಡಬಹುದು.
ಜನಪ್ರಿಯ ಟೆಲಿಕಾಂ ಕಂಪೆನಿ ವೊಡಾಫೋನ್ ಐಡಿಯಾ ಲಿಮಿಟೆಡ್ (VIL) ತನ್ನ ಗ್ರಾಹಕರಿಗೆ ಹೊಸ ಪೋಸ್ಟ್‌ಪೇಯ್ಡ್ ರಿಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಕಾರ್ಪೊರೇಟ್ ಗ್ರಾಹಕರನ್ನು ಗಮನದಲ್ಲಿಟ್ಟು ಬಿಡುಗಡೆ ಮಾಡಲಾಗಿರುವ ಹೊಸ ರಿಚಾರ್ಜ್ ಯೋಜನೆಗಳು 299 ರೂ.ಗಳಿಂದ ಪ್ರಾರಂಭವಾಗುತ್ತವೆ. ಈ ಯೋಜನೆಗಳಲ್ಲಿ ಡೇಟಾ ಬಳಕೆಗೆ ದೈನಂದಿನ ಮಿತಿ ಇರುವುದಿಲ್ಲ ಎಂಬುದು ವಿಶೇಷ. ಹಾಗೆಯೇ ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ರೋಮಿಂಗ್ ಕರೆ ಮಾಡಬಹುದು. ಅದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ಈ ರಿಚಾರ್ಜ್ ಪ್ಲ್ಯಾನ್ ಮೂಲಕ ಪಡೆಯಬಹುದು. ಹಾಗಿದ್ರೆ ವೊಡಾಫೋನ್-ಐಡಿಯಾ ಪರಿಚಯಿಸಿರುವ ಹೊಸ ಪೋಸ್ಟ್‌ಪೇಯ್ಡ್ ಪ್ಲ್ಯಾನ್ಗಳಾವುವು ನೋಡೋಣ.
299 ರೂ. ಪ್ಲ್ಯಾನ್- ಈ ಯೋಜನೆಯಲ್ಲಿ ಬಳಕೆದಾರರಿಗೆ 30 ಜಿಬಿ ಡೇಟಾ ಸಿಗಲಿದೆ
349 ರೂ. ಪ್ಲ್ಯಾನ್ – ಈ ರಿಚಾರ್ಜ್ ಪ್ಲ್ಯಾನ್ನಲ್ಲಿ 40 ಜಿಬಿ ಡೇಟಾ ಲಭ್ಯವಿರಲಿದೆ.
399 ರೂ. ಯೋಜನೆ – 399 ರೂ ಪ್ಲ್ಯಾನ್ ಮೂಲಕ ಬಳಕೆದಾರರು 60 ಜಿಬಿ ಡೇಟಾ ಪಡೆಯಬಹುದು.
499 ರೂ ಪ್ಲ್ಯಾನ್ – ಈ ಯೋಜನೆಯಲ್ಲಿ 100 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.
ಈ ರಿಚಾರ್ಜ್ ಪ್ಲ್ಯಾನ್ ಮೂಲಕ ಸಿಗುವ ಇನ್ನಿತರ ಪ್ರಯೋಜನಗಳು:
– ತಿಂಗಳಿಗೆ 3 ಸಾವಿರ ಮೆಸೇಜ್ ಕಳುಹಿಸಬಹುದು.
– ಮೊಬೈಲ್ ಭದ್ರತೆ
– ಕಾರ್ಪೊರೇಟ್ ಗ್ರಾಹಕರು ಮುಂದಿನ ಬಿಲ್ಲಿಂಗ್ ಮತ್ತು ಹೊಸ ವ್ಯವಹಾರ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಬಹುದು.
– ಪೊಸಿಶನ್ ಟ್ರ್ಯಾಕಿಂಗ್ ಸೊಲ್ಯುಷನ್
– ವಿ ಮೂವೀಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ವಿಐಪಿ 1 ವರ್ಷದ ಸಬ್ಸ್ಕ್ರಿಪ್ಷನ್ ಸಿಗಲಿದೆ.
– ಪ್ರೊಫೈಲ್ ಟ್ಯೂನ್ಸ್, ಕಾಲರ್ ಟ್ಯೂನ್ಸ್. ಹಾಗೂ ಪ್ರಿ ರೆಕಾರ್ಡಿಂಗ್ ಮೆಸೇಜ್ ಆಯ್ಕೆಯೂ ಇರುತ್ತದೆ.
ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ
ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?
(Vodafone Idea launches new Bang Recharge plans)