2021ರ ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಯಾವುದು ಗೊತ್ತೇ?: ಇಲ್ಲಿದೆ ನೋಡಿ ಪಟ್ಟಿ
Xiaomi: ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶವೋಮಿ ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಆಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಭಾರತದ ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆ ಇಂದು ಹಿಂದಿಗಿಂತಲೂ ಸಾಕಷ್ಟು ವಿಸ್ತಾರವಾಗಿದೆ. ಇದಕ್ಕೆ ಪ್ರಮುಖ ಕಾರಣ ಚೀನಾ ಮೊಬೈಲ್ಗಳ ಹಾವಳಿ ಎಂದರೆ ತಪ್ಪಾಗಲಾರದು. ಈಗಂತು ಭಾರದಲ್ಲಿ ವಾರಕ್ಕೆ ಕಡಿಮೆ ಎಂದರೂ ನಾಲ್ಕರಿಂದ ಐದು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತವೆ. ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಮೊಬೈಲ್ಗಳಿಗೂ ಎಲ್ಲಿಲ್ಲದ ಬೇಡಿಕೆ. ಸದ್ಯ ಭಾರತದಲ್ಲಿ 2021ರ ಎರಡನೇ ಅವಧಿ ವೇಳೆಗೆ ಅತಿ ಹೆಚ್ಚು ಸೇಲ್ ಕಂಡು ನಂಬರ್ ಒನ್ ಸ್ಥಾನದಲ್ಲಿರುವ ಸ್ಮಾರ್ಟ್ಫೋನ್ ಬ್ರ್ಯಾಂಡ್ ಯಾವುದು ಎಂಬ ವಿಚಾರ ಬಹಿರಂಗವಾಗಿದೆ.
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶವೋಮಿ ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಆಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿದೆ. ಹೀಗಾಗಿ ಸ್ಯಾಮ್ಸಂಗ್, ವಿವೋ, ರಿಯಲ್ ಮಿ ಮತ್ತು ಒಪ್ಪೋಗಳನ್ನು ಹಿಂದಿಕ್ಕಿ ಶವೋಮಿ ಮತ್ತೆ ನಂಬರ್ ಒನ್ ಪಟ್ಟಕ್ಕೇರಿದೆ.
ಶವೋಮಿ ಕಂಪೆನಿಯ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೊನ್ಗಳು ಭಾರತದಲ್ಲಿ ಅತಿ ಹೆಚ್ಚಿ ಮಾರಾಟವಾಗಿದೆಯಂತೆ. ಜೊತೆಗೆ ಸ್ಯಾಮ್ಸಂಗ್ನ ಗ್ಯಾಲಕ್ಸಿ M ಸರಣಿ ಮತ್ತು F ಸರಣಿಯ ಫೋನ್ ಕೂಡ ಭರ್ಜರಿ ಸೇಲ್ ಕಂಡಿದೆ. ಒಟ್ಟಾರೆಯಾಗಿ ಭಾರತದಲ್ಲಿ 2021 ಕ್ವಾರ್ಟರ್ 2 ನಲ್ಲಿ 33 ಮಿಲಿಯನ್ ಯುನಿಟ್ ಸೇಲ್ ಆಗಿವೆ. ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಆಫ್ಲೈನ್ ಸ್ಟೋರ್ಗಳಲ್ಲಿ ಮಾರಾಟ ಕಡಿಮೆ ಆಗಿದ್ದು ಆನ್ಲೈನ್ನಲ್ಲೇ ಅತಿ ಹೆಚ್ಚು ಖರೀದಿ ಮಾಡಿದ್ದಾರಂತೆ.
ಶವೋಮಿ ಇಷ್ಟರ ಮಟ್ಟಿಗೆ ಯಶಸ್ಸು ಕಾಣಲು ಕಾರಣ ಇದು ಬಿಡುಗಡೆ ಮಾಡಿದ್ದ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೋನ್ಗಳು ಎಂದು ಹೇಳಲಾಗಿದೆ. ಟಾಪ್ 5 ಮೊಬೈಲ್ಗಳ ಪೈಕಿ ಮೊದಲ 4 ಸ್ಥಾನದಲ್ಲಿ ರೆಡ್ಮಿಯೇ ಇವೆ. ಅವುಗಳು ರೆಡ್ಮಿ 9A, ರೆಡ್ಮಿ 9 ಪವರ್, ರೆಡ್ಮಿ ನೋಟ್ 10 ಮತ್ತು ರೆಡ್ಮಿ 9 ಆಗಿವೆ. ಇದರಲ್ಲಿ ರೆಡ್ಮಿ 9A ಅತಿ ಹೆಚ್ಚು ಸೇಲ್ ಕಂಡ ಸ್ಮಾರ್ಟ್ಫೋನ್ ಆಗಿದೆ.
ಉಳಿದಂತೆ ಸ್ಯಾಮ್ಸಂಗ್, ವಿವೋ, ರಿಯಲ್ ಮಿ ಕಂಪೆನಿ ಭಾರತದಲ್ಲಿ ತನ್ನ ಬ್ರ್ಯಾಂಡ್ ಅನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಷ್ಟೊಂದು ಉತ್ತಮವಾಗಿ ಗುರುತಿಸಿಕೊಂಡಿಲ್ಲ. ಸ್ಯಾಮ್ಸಂಗ್ 2020 ರಲ್ಲಿ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿತ್ತು.
Best Smart TV: ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ 43 ಇಂಚಿನ ಈ 5 ಅದ್ಭುತ ಸ್ಮಾರ್ಟ್ ಟಿವಿಗಳು: ಖರೀದಿಸಲು ಸೂಕ್ತ ಸಮಯ
Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ VI
(Xiaomi has retained its position as the number 1 smartphone brand in India)