ZTE Axon 30: ಸೆಲ್ಫೀ ಕ್ಯಾಮೆರಾ ಕಾಣಿಸಲ್ಲ: ಅಂಡರ್ ಡಿಸ್​​ಪ್ಲೇ ಕ್ಯಾಮೆರಾದ 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ಪ್ರಮುಕವಾಗಿ ZTE ಆಕ್ಸಾನ್ 30 5G ಸ್ಮಾರ್ಟ್​ಫೋನ್ ಮುಂದಿನ ಪೀಳಿಗೆಯ ಅಂಡರ್ ಡಿಸ್​ ಪ್ಲೇ ಕ್ಯಾಮೆರಾವನ್ನು ಹೊಂದಿದೆ. ಹೀಗಾಗಿ ಇದನ್ನು ಬಳಸುವಾಗ ಪೂರ್ಣಪರದೆ ಅನುಭವವನ್ನು ನೀಡುತ್ತದೆ.

ZTE Axon 30: ಸೆಲ್ಫೀ ಕ್ಯಾಮೆರಾ ಕಾಣಿಸಲ್ಲ: ಅಂಡರ್ ಡಿಸ್​​ಪ್ಲೇ ಕ್ಯಾಮೆರಾದ 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
ZTE Axon 30
Follow us
TV9 Web
| Updated By: Vinay Bhat

Updated on: Jul 28, 2021 | 2:36 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆ ಈಗ ವಿಸ್ತಾರಗೊಂಡಿದ್ದು, ದಿನಕ್ಕೊಂದರಂತೆ ಹೊಸ ಹೊಸ ಮೊಬೈಲ್​ಗಳು ಬಿಡುಗಡೆ ಆಗುತ್ತವೆ. ಇದರಲ್ಲಿ ಕೆಲವು ಭರ್ಜರಿ ಯಶಸ್ಸು ಕಂಡರೆ ಇನ್ನೂ ಕೆಲವು ರಿಲೀಸ್ ಆದ ಬೆನ್ನಲ್ಲೆ ಮಾಯವಾಗಿ ಬಿಡುತ್ತದೆ. ಇವುಗಳ ನಡುವೆ ಪ್ರಸಿದ್ಧ ಝೆಡ್​​ಟಿಇ (ZTE) ಕಂಪೆನಿ ವಿಶೇಷವಾದ ಸ್ಮಾರ್ಟ್​​ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಹೆಸರು ಝೆಡ್​​ಟಿಇ ಆಕ್ಸಾನ್ 30 5G (ZTE Axon 30 5G). ಈ ಫೋನ್ ಮಾಮೂಲಿಯಂತಿಲ್ಲ. ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಪ್ರಮುಕವಾಗಿ ZTE ಆಕ್ಸಾನ್ 30 5G ಸ್ಮಾರ್ಟ್​ಫೋನ್ ಮುಂದಿನ ಪೀಳಿಗೆಯ ಅಂಡರ್ ಡಿಸ್​ ಪ್ಲೇ ಕ್ಯಾಮೆರಾವನ್ನು ಹೊಂದಿದೆ. ಹೀಗಾಗಿ ಇದನ್ನು ಬಳಸುವಾಗ ಪೂರ್ಣಪರದೆ ಅನುಭವವನ್ನು ನೀಡುತ್ತದೆ. ಡಿಸ್​ ಪ್ಲೇಯನ್ನಿ ಕ್ಯಾಮೆರಾ ಇರುವುದೇ ಗೋಚರಿಸುವುದಿಲ್ಲ. ಸದ್ಯ ಈ ಫೋನ್ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸ್ಮಾರ್ಟ್​ಫೋನ್​ನ 6GB RAM ಮತ್ತು 128GB ಶೇಖರಣಾ ರೂಪಾಂತರದ ಬೆಲೆ ಸಿಎನ್‌ವೈ 2,198 ಅಂದರೆ ಭಾರತದಲ್ಲಿ ಇದು ಸುಮಾರು 25,000 ರೂ. ಗೆ ಸಿಗುತ್ತದೆ. ಇನ್ನೂ 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ ಸಿಎನ್‌ವೈ 2,498 ಭಾರತದಲ್ಲಿ ಸರಿಸುಮಾರು 28,500 ರೂ. ಎಂದು ಹೇಳಬಹುದು.

ZTE ಆಕ್ಸಾನ್ 30 5G ಸ್ಮಾರ್ಟ್‌ಫೋನ್‌ 6.92-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು 20.5: 9 ಸಿನೆಮಾ-ದರ್ಜೆಯ ರಚನೆಯ ಅನುಪಾತದೊಂದಿಗೆ ಅಮೋಲೆಡ್ ಡಿಸ್‌ಪ್ಲೇಯಿಂದ ಕೂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಮೈಓಎಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ 120 ಡಿಗ್ರಿ ಫೀಲ್ಡ್ ವ್ಯೂ, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

4,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, 55W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

Amazon: ಪ್ರೈಮ್ ಡೇ ಸೇಲ್ ಮುಗಿದರೂ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ ರೆಡ್ಮಿಯ ಈ ಸ್ಮಾರ್ಟ್​ಫೋನ್

Airtel: ಪ್ರತಿದಿನ 3GB ಡೇಟಾ: ಕಡಿಮೆ ಬೆಲೆಯ ಏರ್ಟೆಲ್​ನ ಈ ಯೋಜನೆ ಗಮನಿಸಿ

(ZTE Axon 30 ZTE launches New Axon 30 Smartphone with an in-display hidden front camera price)

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್