Airtel: ಪ್ರತಿದಿನ 3GB ಡೇಟಾ: ಕಡಿಮೆ ಬೆಲೆಯ ಏರ್ಟೆಲ್​ನ ಈ ಯೋಜನೆ ಗಮನಿಸಿ

ಪ್ರಮುಖವಾಗಿ ಏರ್ಟೆಲ್​ನ 558 ರೂ. ಗಳ ಯೋಜನೆಯು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ನೀಡಲಾಗಿದೆ.

Airtel: ಪ್ರತಿದಿನ 3GB ಡೇಟಾ: ಕಡಿಮೆ ಬೆಲೆಯ ಏರ್ಟೆಲ್​ನ ಈ ಯೋಜನೆ ಗಮನಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Vinay Bhat

Updated on: Jul 28, 2021 | 12:53 PM

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರೆದಿದೆ. ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ತನ್ನ ಪ್ಲಾನ್​ನ ಜೊತೆಗೆ ಇತರೆ ವಿಶೇಷ ಆಫರ್​ಗಳನ್ನು ನೀಡುತ್ತಿರುವ ಏರ್ಟೆಲ್​ನ ಈ ಯೋಜನೆ ಹೆಚ್ಚಿನವರ ಗಮನ ಸೆಳೆದಿದೆ.

ಪ್ರಮುಖವಾಗಿ ಏರ್ಟೆಲ್​ನ 558 ರೂ. ಗಳ ಯೋಜನೆಯು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ನೀಡಲಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ಇನ್ನೂ ವಿಶೇಷ ಆಫರ್​ಗಳಿವೆ.

ಏರ್‌ಟೆಲ್‌ 558 ರೂ. ಪ್ರಿಪೇಯ್ಡ್‌ ಪ್ಲಾನ್​ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಪ್ರತಿದಿನ 3GB ಉಚಿತ ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಇದರ ಜೊತೆಗೆ ಈ ಪ್ಲಾನ್​ನಲ್ಲಿ ನೀವು ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್​ಟ್ಯಾಗ್​ ಕ್ಯಾಶ್‌ಬ್ಯಾಕ್ ಆಫರ್​ಗಳನ್ನು ಪಡೆಯಬಹುದು.

ಇತ್ತ ಜಿಯೋದಲ್ಲೂ 447 ರೂ. ಫ್ರೀಡಂ ಪ್ಲಾನ್​ ಆಫರ್ ನೀಡಲಾಗಿದೆ. ಈ ಯೋಜನೆಯು 60 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಹೊಂದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಒಟ್ಟು 50GB ಡೇಟಾ ಪ್ರಯೋಜನ ಸಿಗಲಿದ್ದು, ಯಾವುದೇ ದೈನಂದಿನ ಡೇಟಾ ಮಿತಿ ಪಡೆದಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಪ್ರಯೋಜನವು ಲಭ್ಯ. ಇನ್ನು ಹೆಚ್ಚುವರಿಯಾಗಿ ಜಿಯೋ ಆ್ಯಪ್ಸ್‌ ಬಳಕೆದಾರರಿಗೆ ಉಚಿತವಾಗಿ ಸಿಗುತ್ತದೆ.

ಇದು ಬಿಟ್ಟರೆ ಜಿಯೋದಲ್ಲಿ 597 ರೂ. ಫ್ರೀಡಂ ಪ್ಲಾನ್ ಯೋಜನೆಯು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಒಟ್ಟು 90GB ಡೇಟಾ ಪ್ರಯೋಜನ ಸಿಗಲಿದ್ದು, ಯಾವುದೇ ದೈನಂದಿನ ಡೇಟಾ ಮಿತಿ ಪಡೆದಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಪ್ರಯೋಜನವು ಲಭ್ಯವಿರುತ್ತದೆ.

Nokia XR20: ಮತ್ತೆರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?

Tips and Tricks: ನೀವು EMI ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಟ್ರಿಕ್ ಫಾಲೋ ಮಾಡಿ

(Airtel Prepaid Plan Airtel Offers 3GB data per day with a validity of 56 days and rs 558)