ತೆಲುಗು ಚಿತ್ರರಂಗದಲ್ಲಿ ಸುದೀಪ್​ ನೆಚ್ಚಿನ ಹೀರೋ ಯಾರು? ವೈರಲ್​ ಆಗುತ್ತಿದೆ ಒಂದು ವಿಡಿಯೋ

ತೆಲುಗು ಚಿತ್ರರಂಗದಲ್ಲಿ ಸುದೀಪ್​ ನೆಚ್ಚಿನ ಹೀರೋ ಯಾರು? ವೈರಲ್​ ಆಗುತ್ತಿದೆ ಒಂದು ವಿಡಿಯೋ
ಕಿಚ್ಚ ಸುದೀಪ್

ಪ್ರಭಾಸ್​, ಮಹೇಶ್​ ಬಾಬು, ಜ್ಯೂ. ಎನ್​ಟಿಆರ್​ ಹಾಗೂ ಚಿರಂಜೀವಿ ಈ ಸ್ಟಾರ್​ಗಳಲ್ಲಿ ನಿಮಗೆ ಯಾರು ಇಷ್ಟ ಎಂದು ನಿರೂಪಕಿ ಕೇಳಿದ್ದಕ್ಕೆ ಜ್ಯೂ. ಎನ್​ಟಿಆರ್​ ಎಂದು ಸುದೀಪ್​ ಉತ್ತರಿಸಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ.

TV9kannada Web Team

| Edited By: Madan Kumar

Aug 05, 2021 | 7:54 AM

ಸ್ಯಾಂಡಲ್​ವುಡ್​ ಸ್ಟಾರ್​ ಕಿಚ್ಚ ಸುದೀಪ್​ ಅವರಿಗೆ ಬೇರೆ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’, ‘ಈಗ’ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ತೆಲುಗು ಚಿತ್ರರಂಗದಲ್ಲೂ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಸ್ನೇಹಿತರು ಇದ್ದಾರೆ. ಅದರಲ್ಲೂ ಟಾಲಿವುಡ್​ನಲ್ಲಿ ಅವರ ಫೇವರಿಟ್​ ನಟ ಯಾರು? ಈ ಪ್ರಶ್ನೆಗೆ ಸ್ವತಃ ಕಿಚ್ಚ ಸುದೀಪ್​ ಉತ್ತರ ನೀಡಿದ್ದರು. ಕೆಲವು ತಿಂಗಳ ಹಿಂದೆ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್​ ಆಗುತ್ತಿದೆ. ತಮ್ಮ ಇಷ್ಟದ ಹೀರೋ ಜ್ಯೂ. ಎನ್​ಟಿಆರ್​ ಎಂದು ಸುದೀಪ್​ ಹೇಳಿದ್ದರು. ಯಾಕೆ?

ಪ್ರಭಾಸ್​, ಮಹೇಶ್​ ಬಾಬು, ಜ್ಯೂ. ಎನ್​ಟಿಆರ್​ ಹಾಗೂ ಚಿರಂಜೀವಿ ಈ ಸ್ಟಾರ್​ಗಳಲ್ಲಿ ನಿಮಗೆ ಯಾರು ಇಷ್ಟ ಎಂದು ನಿರೂಪಕಿ ಕೇಳಿದ್ದಕ್ಕೆ ಜ್ಯೂ. ಎನ್​ಟಿಆರ್​ ಎಂದು ಸುದೀಪ್​ ಉತ್ತರಿಸಿದ್ದರು. ‘ಅವರ ಪ್ರಾರಂಭದ ದಿನಗಳಿಂದಲೂ ನಾನು ಅವರನ್ನು ಗಮನಿಸುತ್ತಿದ್ದೇನೆ. ಇತ್ತೀಚೆಗಿನ ಆರ್​ಆರ್​ಆರ್​ ಟೀಸರ್​ ಕೂಡ ನೋಡಿದ್ದೇನೆ. ಮೊದಲು ಅವರು ದಪ್ಪ ಇದ್ದರು. ಆದರೆ ಈಗ ಪಾತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿದ್ದಾರೆ’ ಎಂದು ಸುದೀಪ್​ ಹೇಳಿದ್ದರು.

ಅಷ್ಟಕ್ಕೂ ಈ ಹಳೇ ವಿಡಿಯೋ ಈಗ ಯಾಕೆ ವೈರಲ್​ ಆಗುತ್ತಿದೆ? ಸದ್ಯ ಜ್ಯೂ. ಎನ್​ಟಿಆರ್​ ನಟನೆಯ ಆರ್​ಆರ್​ಆರ್​ ಸಿನಿಮಾ ಬಿಡುಗಡೆಗೆ ಹತ್ತಿರ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಯಿತು. ನಿಧಾನಕ್ಕೆ ಚಿತ್ರದ ಪ್ರಚಾರ ಕಾರ್ಯಗಳಿಗೆ ತಂಡ ಚಾಲನೆ ನೀಡಿದೆ. ಅತ್ತ ಅಭಿಮಾನಿಗಳು ಕೂಡ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ನೆಚ್ಚಿನ ಹೀರೋ ಜ್ಯೂ. ಎನ್​ಟಿಆರ್​ಗೆ ಸಂಬಂಧಿಸಿದ ಹಳೇ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಪ್ರಚಾರಕ್ಕೆ ಸಹಕಾರಿ ಆಗುತ್ತಿದ್ದಾರೆ. ಅದೇ ಕಾರಣಕ್ಕೆ ಈ ಸಂದರ್ಶನದ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ.

ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ಮುಖ್ಯಭೂಮಿಕೆ ನಿಭಾಯಿಸಿರುವ ಆರ್​ಆರ್​ಆರ್​ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್​ ಬೆಡಗಿ ಆಲಿಯಾ ಭಟ್​ ನಟಿಸಿದ್ದಾರೆ. ಅಜಯ್​ ದೇವಗನ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​

Roar of RRR: ಅಬ್ಬಬ್ಬಾ… ಆರ್​ಆರ್​ಆರ್​ ಮೇಕಿಂಗ್​ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?

Follow us on

Related Stories

Most Read Stories

Click on your DTH Provider to Add TV9 Kannada